ಸ್ಮಾರ್ಟ್‌ಫೋನ್ ಸಂವಾದ: ಇತಿಯಂ ಸಿಸ್ಟಮ್ಸ್ ಸಾಧನೆ

7

ಸ್ಮಾರ್ಟ್‌ಫೋನ್ ಸಂವಾದ: ಇತಿಯಂ ಸಿಸ್ಟಮ್ಸ್ ಸಾಧನೆ

Published:
Updated:ಬೆಂಗಳೂರು: ಚುರುಕಿನ ಮೊಬೈಲ್ (ಸ್ಮಾರ್ಟ್ ಫೋನ್) ಮೂಲಕ ಒಬ್ಬರಿಗಿಂತ ಹೆಚ್ಚು ಮಂದಿ ವೀಡಿಯೊ ಸಂವಾದ (ಕಾನ್ಫರೆನ್ಸ್) ನಡೆಸಲು ಸಾಧ್ಯವಾಗುವಂಥ ತಂತ್ರಜ್ಞಾನವನ್ನು ಬೆಂಗಳೂರು ಮೂಲದ ಸಾಫ್ಟ್‌ವೇರ್ ಕಂಪೆನಿ ಇತಿಯಂ ಸಿಸ್ಟಮ್ಸ್ ಅಭಿವೃದ್ಧಿಪಡಿಸುತ್ತಿದೆ.ಇನ್ನು ಆರು ತಿಂಗಳಲ್ಲಿ ಈ ತಂತ್ರಜ್ಞನವು ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ಇತಿಯಂ ಸಿಸ್ಟಮ್ಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿ ರಾಜಮ್ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಈ ಹಣಕಾಸು ವರ್ಷದ ಅಂತ್ಯದ ವೇಳೆಗೆ ಇತಿಯಂ ಸಾಫ್ಟ್‌ವೇರ್‌ಗಳನ್ನು ಹೊಂದಿರುವ ಅಂದಾಜು ಆರು ದಶಲಕ್ಷ ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್‌ಗಳು ಗ್ರಾಹಕರ ಕೈ ಸೇರಲಿವೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry