ಶನಿವಾರ, ಜೂನ್ 19, 2021
23 °C

ಸ್ಯಾಂಡಲ್‌ವುಡ್‌ನಲ್ಲಿ ಸೌತ್‌ವುಡ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ಯಾಂಡಲ್‌ವುಡ್‌ನಲ್ಲಿ ಸೌತ್‌ವುಡ್

ಸೌತ್ ವುಡ್! ಸಿನಿಮಾ ಆಸಕ್ತರ ಪಾಲಿಗಿದು ಕಲಿಕೆಯ ಹೊಸ ತಾಣ. ನಟನೆ, ನಿರ್ದೇಶನ ಸೇರಿದಂತೆ ಸಿನಿಮಾದ ವಿವಿಧ ಪಟ್ಟುಗಳನ್ನು ಹೇಳಿಕೊಡುವ ಸಂಸ್ಥೆಯಿದು.

ವಿಠ್ಠಲ ಭಟ್ `ಸೌತ್ ವುಡ್~ನ ರೂವಾರಿ.`ಈ ಟೀವಿ~ಯಲ್ಲಿ ಕೆಲ ಕಾಲ ಕಾರ್ಯ ನಿರ್ವಹಿಸಿದ ಅನುಭವ ಇರುವ ಭಟ್, ಈಗ ತಮ್ಮ ಅನುಭವವನ್ನು ಶಿಕ್ಷಣ ಸಂಸ್ಥೆ ರೂಪಿಸಲಿಕ್ಕೆ ವಿನಿಯೋಗಿಸಿದ್ದಾರೆ. `ಸಿನಿಮಾದ ಕನಸು ಕಾಣುವವರು ಕ್ಯಾಮೆರಾ ಮುಂದೆ ಅಥವಾ ಹಿಂದೆ ಬರುವ ಮೊದಲು ನಮ್ಮ ಸಂಸ್ಥೆಗೆ ಬನ್ನಿ~ ಎನ್ನುವುದು ಅವರ ಮನವಿ.

 

ನಟನೆಯ ಯಾವುದೇ ಹಿನ್ನೆಲೆಯಿಲ್ಲದೆ ಇದ್ದಕ್ಕಿದ್ದಂತೆ ಸಿನಿಮಾಕ್ಕೆ ಆಯ್ಕೆಯಾಗುವ ಅದೃಷ್ಟವಂತರು, ಕಡಿಮೆ ಅವಧಿಯಲ್ಲಿ ತರಬೇತಿ ಹೊಂದುವ ಅವಕಾಶಗಳನ್ನು `ಸೌತ್ ವುಡ್~ ಕಲ್ಪಿಸಿದೆ.ಅಂದಹಾಗೆ, ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಆದವಾನಿಯಲ್ಲಿ `ಸೌತ್ ವುಡ್~ನ ಕೇಂದ್ರವೊಂದು ಈಗಾಗಲೇ ಕಾರ್ಯ ನಿರ್ವಹಿಸುತ್ತಿದೆ. ಅದರ ಯಶಸ್ಸಿನಿಂದ ಉತ್ತೇಜಿತರಾದ ಭಟ್, ತಮ್ಮ ತರಬೇತಿ ಸಂಸ್ಥೆಯ ಶಾಖೆಯನ್ನು ಬೆಂಗಳೂರಿನಲ್ಲಿ ತೆರೆದಿದ್ದಾರೆ.ಕಳೆದ ವಾರ ಬೆಂಗಳೂರಿನಲ್ಲಿ ಆರಂಭಗೊಂಡ `ಸೌತ್ ವುಡ್~ನ ಉದ್ಘಾಟನಾ ಕಾರ್ಯಕ್ರಮದಲ್ಲಿ ನಿರ್ದೇಶಕ ಓಂಪ್ರಕಾಶ್ ರಾವ್, ಲಹರಿ ವೇಲು, ಸೌಂದರ್ಯ ಜಗದೀಶ್, ವಿಶಾಲ್ ರಾಜ್, ರವಿ ವರ್ಮ ಮುಂತಾದವರು ಹಾಜರಿದ್ದು, ಶುಭ ಕೋರಿದರು.`ಸೌತ್ ವುಡ್~ ಜೊತೆ ಗುರ್ತಿಸಿಕೊಂಡಿರುವ ಬಾಲಾಜಿ ಅವರಿಗೆ ಕನ್ನಡ ಸಿನಿಮಾಗಳನ್ನು ನಿರ್ಮಿಸುವ ಉದ್ದೇಶವೂ ಇದ್ದೆ. ಸದ್ಯದಲ್ಲಿಯೇ ಅವರ ನಿರ್ಮಾಣದ ಯೋಜನೆಗಳು ಕಾರ್ಯರೂಪಕ್ಕೆ ಬರಲಿವೆಯಂತೆ. ಅಂದಹಾಗೆ, ಬೆಂಗಳೂರಿನ ನಾಗರಬಾವಿ ಬಿಡಿಎ ಕಾಂಪ್ಲೆಕ್ಸ್ ಬಳಿ (ನಂ.3, ಕನಕಲಕ್ಷ್ಮಿ ಕೃಪ) `ಸೌತ್ ವುಡ್~ ತರಬೇತಿ ಕೇಂದ್ರವಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.