ಭಾನುವಾರ, ಮೇ 16, 2021
28 °C

ಸ್ಯಾಮುಯೆಲ್ಸ್ ಬೌಲಿಂಗ್ ಶೈಲಿಯಲ್ಲಿ ದೋಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುಣೆ (ಪಿಟಿಐ): ಪುಣೆ ವಾರಿಯರ್ಸ್ ತಂಡದ ಆಫ್ ಸ್ಪಿನ್ನರ್ ಮಾರ್ಲೊನ್ ಸ್ಯಾಮುಯೆಲ್ಸ್ ಅವರ ಬೌಲಿಂಗ್ ಶೈಲಿಯಲ್ಲಿ ದೋಷ ಇರುವ ಸಾಧ್ಯತೆ ಇದೆ ಎನ್ನಲಾಗಿದೆ.ಈ ಅಂಶ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಅಂಪೈರ್‌ಗಳ ಗಮನಕ್ಕೆ ಬಂದಿದೆ. ಪಂದ್ಯದ ಅಂಪೈರ್‌ಗಳಾದ ಅಲೀಮ್ ದಾರ್, ಬ್ರೂಸ್ ಆಕ್ಸೆನ್‌ಪೋರ್ಡ್ ಹಾಗೂ ಟಿವಿ ಅಂಪೈರ್ ವಿನೀತ್ ಕುಲಕರ್ಣಿ ಈ ಬಗ್ಗೆ ವರದಿ ನೀಡಿದ್ದಾರೆ ಎಂದು ಸಂಘಟಕರು ಹೇಳಿದ್ದಾರೆ.ಸೂಪರ್ ಕಿಂಗ್ಸ್ ಎದುರಿನ ಈ ಪಂದ್ಯದಲ್ಲಿ ವಾರಿಯರ್ಸ್ ಏಳು ವಿಕೆಟ್‌ಗಳ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಸ್ಯಾಮುಯೆಲ್ಸ್ 4 ಓವರ್ ಬೌಲಿಂಗ್ ಮಾಡಿ 29 ರನ್ ನೀಡಿದ್ದರು. ಯಾವುದೇ ವಿಕೆಟ್ ಲಭಿಸಿರಲಿಲ್ಲ. ಆದರೆ ಒಂದು ಓವರ್‌ನಲ್ಲಿ ಅವರು 122 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡಿದ್ದರು. ಇದು ವೇಗಿ ಪ್ರವೀಣ್ ಕುಮಾರ್ ಅವರ ಸರಾಸರಿ ವೇಗ ಕೂಡ!`ಸದ್ಯಕ್ಕೆ ಸ್ಯಾಮುಯೆಲ್ಸ್ ಬೌಲಿಂಗ್ ಮುಂದುವರಿಸಬಹುದು. ಆದರೆ ಈ ದೋಷ ಮತ್ತೊಮ್ಮೆ ಕಂಡುಬಂದರೆ ಬೌಲಿಂಗ್ ಮಾಡದಂತೆ ಅವರನ್ನು ಅಮಾನತುಗೊಳಿಸಲಾಗುವುದು~ ಎಂದು ಐಪಿಎಲ್ ಪ್ರಕಟಣೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.