ಮಂಗಳವಾರ, ಡಿಸೆಂಬರ್ 10, 2019
16 °C

ಸ್ಲಂನಲ್ಲಿ ಬದುಕಿನ ಸೌಂದರ್ಯ

Published:
Updated:
ಸ್ಲಂನಲ್ಲಿ ಬದುಕಿನ ಸೌಂದರ್ಯ

`ಸ್ಲಂ~- ಹಾಗೆಂದು ಮುಖ ಸಿಂಡರಿಸಬೇಡಿ. ನಮ್ಮ `ಸ್ಲಂ~ನಲ್ಲಿ ಪ್ರೇಮವಿದೆ, ಹಾಸ್ಯವೂ ಇದೆ. ಇದು ಕುಟುಂಬಗಳು ನೋಡಬಹುದಾದ ಸಿನಿಮಾ. ಹೀಗೆಂದು ತಮ್ಮ ಚಿತ್ರವನ್ನು ಬಣ್ಣಿಸಿದ್ದು ಯುವನಟ ಪಿ.ಮೂರ್ತಿ. ಚಿತ್ರದಲ್ಲವರದು ನಾಯಕನ ಪಾತ್ರ. ನಿರ್ಮಾಪಕರೂ ಅವರೇನೆ.ಪಕ್ಕಾ ಲೋಕಲ್ ಹುಡುಗನ ಲವ್ ಸ್ಟೋರಿ ಚಿತ್ರದ ತಿರುಳು. `ಕೊಳೆಗೇರಿಯ ಅನಾಥ ಮಕ್ಕಳು ತಮಗೆ ಅರಿವಿಲ್ಲದೆಯೇ ಕೆಟ್ಟ ದಾರಿಗೆ ಹೇಗೆ ಇಳಿಯುತ್ತಾರೆ ಎನ್ನುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ.

 

ಚಿತ್ರದ ಕೊನೆಯಲ್ಲಿ ಉತ್ತಮ ಸಂದೇಶವಿದೆ~ ಎಂದು ಮೂರ್ತಿ ಹೇಳಿದರು. ಚಿತ್ರದ ಮತ್ತೊಂದು ಪ್ರಮುಖ ಪಾತ್ರವಾದ ನಾಯಕನ ಗೆಳೆಯನ ಪಾತ್ರದಲ್ಲಿ ಮಯೂರ್ ಪಟೇಲ್ ನಟಿಸುತ್ತಿದ್ದಾರಂತೆ.`ಅ~ ಎಂಬ ಚಿತ್ರ ನಿರ್ದೇಶಿಸಿ ಗಾಂಧಿನಗರದಿಂದ ಕೆಲಕಾಲ ಕಾಣೆಯಾಗಿದ್ದ ಮಹೇಶ್ ಕುಮಾರ್ ಚಿತ್ರದ ನಿರ್ದೇಶಕರು. ಮೂರು ತಿಂಗಳಲ್ಲಿ ಅವರು ಸಿನಿಮಾಗೆ ಬೇಕಾದ ಪೂರ್ವ ತಯಾರಿ ನಡೆಸಿದ್ದಾರಂತೆ. ಕಥೆ, ಹಾಡಿಗಾಗಿ ಸಾಕಷ್ಟು ಹೋಂವರ್ಕ್ ಮಾಡಿದ್ದಾರಂತೆ.ಬಜೆಟ್ ಬಗ್ಗೆ ಚಿಂತಿಸದೇ ಸಿನಿಮಾ ಮಾಡಲು ಪ್ರೋತ್ಸಾಹಿಸಿದ ನಿರ್ಮಾಪಕರಿಗೆ ಅವರು ಧನ್ಯವಾದ ಹೇಳಿದರು.`ನಮ್ಮ ಚಿತ್ರದಲ್ಲಿ ರೌಡಿಗಳನ್ನು ವೈಭವೀಕರಿಸುವುದಿಲ್ಲ. ಪಾಪವನ್ನು ಕೊಲ್ಲಿ, ಪಾಪಿಗಳನ್ನಲ್ಲ~ ಎಂಬುದು ಚಿತ್ರದ ಆಶಯ. ತಪ್ಪು ಮಾಡಿದವರನ್ನು ತಿದ್ದುವವರೇ ಇರುವುದಿಲ್ಲ.ಕೊಳೆಗೇರಿಗಳಲ್ಲಿ ಇರುವವರೆಲ್ಲಾ ಕೆಟ್ಟವರಲ್ಲ. ಚಿತ್ರದಲ್ಲಿ ವ್ಯವಸ್ಥೆಯನ್ನು ಪ್ರಶ್ನಿಸುವ ಕೆಲಸ ನಡೆದಿದೆ~ ಎಂದರು ನಿರ್ದೇಶಕರು. ಲಗ್ಗೆರೆ, ಬಿಡದಿ, ಇಸ್ಕಾನ್ ಹಿಂಭಾಗದ ಕೊಳೆಗೇರಿಗಳಲ್ಲಿ ಚಿತ್ರೀಕರಣ ನಡೆಸಲು ಮಹೇಶ್ ಕುಮಾರ್ ಉದ್ದೇಶಿಸಿದ್ದಾರೆ.ಒಟ್ಟು ನಲವತ್ತು ದಿನಗಳ ಚಿತ್ರೀಕರಣ ನಡೆಯಲಿದೆ. ಮೈಸೂರು, ಕೇರಳದಲ್ಲಿ ಎರಡು ಹಾಡುಗಳ ಚಿತ್ರೀಕರಣ ನಡೆಸಲಾಗುವುದಂತೆ.ನಟ ಮಯೂರ್ ಪಟೇಲ್ ಅವರದು ಚಿತ್ರದಲ್ಲಿ ಜಾಲಿ ಪಾತ್ರ. `ಮೂರ್ತಿ ಅವರದು ಮಾತು ಕಡಿಮೆ ಕೆಲಸ ಜಾಸ್ತಿ. ಆದರೆ ನನ್ನದು ಅವರಿಗೆ ತದ್ವಿರುದ್ಧವಾದ ಪಾತ್ರ. ಇಬ್ಬರೂ ಸೇರಿ ಗೊತ್ತಿಲ್ಲದ ಕೆಲಸವೊಂದಕ್ಕೆ ಕೈ ಹಾಕುತ್ತೇವೆ. ಅದರಿಂದ ಉಂಟಾಗುವ ಸಮಸ್ಯೆಗಳನ್ನು ಅನುಭವಿಸುತ್ತೇವೆ~ ಎಂದು ಮಯೂರ್ ಹೇಳಿಕೊಂಡರು.ಚಿತ್ರದಲ್ಲಿ ಇಬ್ಬರು ನಾಯಕಿಯರು. ಒಬ್ಬರು ದಿಶಾ ಪೂವಯ್ಯ. ಮತ್ತೊಬ್ಬರು ನೇಹಾ ಪಟೇಲ್. `ಪೊಲೀಸ್ ಸ್ಟೋರಿ 3~, `ಮಳ್ಳಿ~ ಮತ್ತಿತರ ಚಿತ್ರಗಳಲ್ಲಿ ಅಭಿನಯಿಸಿರುವ ದಿಶಾಗೆ ಚಿತ್ರದ ತಮ್ಮ ಪಾತ್ರ ವಿಭಿನ್ನವಾಗಿರುವುದಕ್ಕೆ ಇಷ್ಟವಾಗಿದೆಯಂತೆ. ಅವರು ಚಿತ್ರದಲ್ಲಿ ಅನಾಥ ಹುಡುಗಿ. ನೇಹಾ ಇದೊಂದು ಸೃಜನಶೀಲ ಚಿತ್ರ ಎಂದು ಖುಷಿಪಟ್ಟರು.

ಪ್ರತಿಕ್ರಿಯಿಸಿ (+)