`ಸ್ಲಿಪ್' ಸಂಕಷ್ಟದಿಂದ ಪಾರಾಗಲು ಪೊರಕೆ ಅಭ್ಯಾಸ!

7

`ಸ್ಲಿಪ್' ಸಂಕಷ್ಟದಿಂದ ಪಾರಾಗಲು ಪೊರಕೆ ಅಭ್ಯಾಸ!

Published:
Updated:

ಬೆಂಗಳೂರು: ಒಡಿಶಾ ವಿರುದ್ಧದ ಪಂದ್ಯದಲ್ಲಿ ಹಲವು ಕ್ಯಾಚ್‌ಗಳನ್ನು ಕೈಚೆಲ್ಲಿ ಭಾರೀ ಬೆಲೆ ತೆತ್ತಿರುವ ಕರ್ನಾಟಕ ತಂಡ ಈ ತಪ್ಪು ಪುನರಾವರ್ತನೆಯಾಗದಂತೆ ಎಚ್ಚರಿಕೆ ವಹಿಸಲು ಶುಕ್ರವಾರದ ಅಭ್ಯಾಸದ ವೇಳೆ ಪೊರಕೆಯ ಮೊರೆ ಹೋಯಿತು.ಕರ್ನಾಟಕ ತಂಡ ಬರೋಡ ವಿರುದ್ಧದ ಪಂದ್ಯಕ್ಕೂ ಇದೇ ರೀತಿಯ ಅಭ್ಯಾಸ ನಡೆಸಿತ್ತು. ಸ್ಲಿಪ್‌ನಲ್ಲಿಯೇ ಹೆಚ್ಚಾಗಿ ಬರುವ ಕ್ಯಾಚ್‌ಗಳು ಕೈಚೆಲ್ಲಿ ಹೋಗಬಾರದು ಎನ್ನುವ ಕಾರಣಕ್ಕೆ ಬ್ಯಾಟಿಂಗ್ ತರಬೇತುದಾರ ಅರುಣ್ ಕುಮಾರ್ ಈ ಪ್ರಯೋಗ ನಡೆಸಿದರು. ಸ್ಪಿನ್ನರ್ ಖಾಜಾ ಮೊಯಿನುದ್ದೀನ್ ಬೌಲಿಂಗ್ ಮಾಡಿದರೆ, ವಿಕೆಟ್ ಕೀಪರ್ ಸಿ.ಎಂ. ಗೌತಮ್, ಸ್ಲಿಪ್‌ನಲ್ಲಿ ಮನೀಷ್ ಪಾಂಡೆ ಅಭ್ಯಾಸದಲ್ಲಿ ಪಾಲ್ಗೊಂಡಿದ್ದರು.ಗೆಲುವಿನ ಆಸೆ: `ಹಿಂದಿನ ಪಂದ್ಯಗಳಲ್ಲಿ ನೀರಸ ಪ್ರದರ್ಶನ ತೋರಿರಬಹುದು. ಆದರೆ, ಐದು ಬೆರಳು ಸಮವಾಗಿರುವುದಿಲ್ಲವಲ್ಲಾ. ಈ ಸಲ ನಮಗೇಕೆ ಒಲಿಯುವುದಿಲ್ಲ ಗೆಲುವು' ಎನ್ನುವ ಪ್ರಶ್ನೆಯನ್ನು ಮಾಧ್ಯಮದವರ ಮುಂದೆ ಇಟ್ಟ ಕರ್ನಾಟಕ ತಂಡದ ನಾಯಕ ವಿನಯ್, `ಸೋಲಿನಿಂದ ಗೆಲುವಿನೆಡೆಗೆ ಸಾಗಿದ ಅನೇಕ ಉದಾಹರಣೆಗಳು ನಮ್ಮ ಮುಂದಿವೆ. ಈ ಸಲ ಜಯ ನಮ್ಮದೇ' ಎಂದು ವಿಶ್ವಾಸ ವ್ಯಕ್ತಪಡಿಸಿದರು.ಈ ಮಾತಿಗೆ ಧ್ವನಿಗೂಡಿಸಿದ ಅರುಣ್, `ಆಟಗಾರರು ಖುಷಿಯಿಂದ ಆಡಬೇಕು. ಕಷ್ಟದ ಸಂಭ್ರಮದಲ್ಲೂ ಒತ್ತಡಕ್ಕೆ ಒಳಗಾಗಬಾರದು' ಎಂದು ಹೇಳಿದರು. `ಹಿಂದಿನ ಪಂದ್ಯದಲ್ಲಿ ಹರಿಯಾಣ ವಿರುದ್ಧ ಸೋಲು ಕಂಡ ಕಾರಣ ಈ ಪಂದ್ಯದಲ್ಲಿ ನಮಗೆ ಗೆಲುವು ಅಗತ್ಯವಿದೆ' ಎಂದು ದೆಹಲಿ ತಂಡದ ನಾಯಕ ಶಿಖರ್ ಧವನ್ ನುಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry