ಭಾನುವಾರ, ಜುಲೈ 25, 2021
28 °C

ಸ್ಲೆಟ್ ಪರೀಕ್ಷೆಯಲ್ಲಿ ಪತ್ರಿಕೋದ್ಯಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಸಕ್ತ ವರ್ಷದಲ್ಲಿ ಯುಜಿಸಿಯ ನಿರ್ದೇಶನದೊಂದಿಗೆ ರಾಜ್ಯದ ವಿ.ವಿ.ಗಳಲ್ಲಿ ಖಾಲಿ ಇರುವ ಉಪನ್ಯಾಸಕರ ಹುದ್ದೆಗಳಿಗೆ ಮೈಸೂರು ವಿಶ್ವವಿದ್ಯಾಲಯವು ನಡೆಸಲು ಉದ್ದೇಶಿಸಿರುವ ‘ಸ್ಲೆಟ್’ (ರಾಜ್ಯಮಟ್ಟದ) ಅರ್ಹತಾ ಪರೀಕ್ಷೆಯಲ್ಲಿ ಪತ್ರಿಕೋದ್ಯಮ ವಿಷಯವನ್ನು ಕೈಬಿಟ್ಟಿರುವುದು ವಿಷಾದದ ಸಂಗತಿ.ಈಗಾಗಲೇ ಸಾವಿರಾರು ವಿದ್ಯಾರ್ಥಿಗಳು ಈ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿದ್ದರೆ, ಕೆಲವರು ಎಂ.ಫಿಲ್ ಹಾಗೂ ಪಿ.ಎಚ್‌ಡಿ. ಸಂಶೋಧನೆಯನ್ನು ಮುಗಿಸಿ ಅತಿಥಿ ಉಪನ್ಯಾಸಕರಾಗಿ ಬೋಧಿಸುತ್ತಾ ‘ಸ್ಲೆಟ್’ ಅರ್ಹತಾ ಪರೀಕ್ಷೆಯಂತಹ ಒಂದು ಅವಕಾಶಕ್ಕಾಗಿ ಕಾದು ಕುಳಿತಿದ್ದಾರೆ.ಈ ನಿಟ್ಟಿನಲ್ಲಿ ಸ್ವಲ್ಪ ತಡವಾಗಿಯಾದರೂ ಈ ಬಾರಿಯ ‘ಸೆಟ್’ ಅರ್ಹತಾ ಪರೀಕ್ಷೆಗೆ ಪತ್ರಿಕೋದ್ಯಮ ವಿಷಯವನ್ನು ಪರಿಗಣಿಸಬೇಕೆಂದು ವಿಶ್ವವಿದ್ಯಾಲಯಗಳ ಆಡಳಿತದಲ್ಲಿ ವಿನಂತಿ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.