ಬುಧವಾರ, ಜೂನ್ 23, 2021
21 °C

ಸ್ವಂತ ಕಟ್ಟಡ ಇಲ್ಲದ ಪಂಚಾಯತ್‌ ರಾಜ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಗಿರಿ: ಪಟ್ಟಣದ ಬಸ್‌ನಿಲ್ದಾಣದ ಬಳಿ ಇರುವ ಪಂಚಾಯತ್‌ ರಾಜ್‌ ಎಂಜಿನಿಯರ್‌ ಉಪ ವಿಭಾಗ ಕಚೇರಿಗೆ ಸ್ವಂತ ಕಟ್ಟಡ ಇಲ್ಲದೇ 15 ವರ್ಷಗಳಿಂದ ಪಟ್ಟಣ ಪಂಚಾಯ್ತಿಗೆ ಸೇರಿದ ಶಿಶುವಿಹಾರದ ಹಳೆಯ ಕಟ್ಟಡದಲ್ಲಿ ನಡೆಯುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.ಇಡೀ ತಾಲ್ಲೂಕಿನ 61 ಗ್ರಾಮ ಪಂಚಾಯ್ತಿಗಳು ಈ ಇಲಾಖೆ ವ್ಯಾಪ್ತಿಗೆ ಸೇರಿದ್ದು, ಕುಡಿಯುವ ನೀರು, ಗ್ರಾಮೀಣ ರಸ್ತೆ, ಚರಂಡಿ, ಸಮುದಾಯ ಭವನ ಸೇರಿದಂತೆ ಎಲ್ಲಾ ಗ್ರಾಮಗಳ ಮೂಲ ಸೌಕರ್ಯಗಳನ್ನು ಒದಗಿಸುವ ಅತ್ಯಂತ ಹೆಚ್ಚು ಅನುದಾನ ಬರುವ ಪ್ರಮುಖ ಇಲಾಖೆಯಾಗಿದೆ. ಇಂತಹ ದೊಡ್ಡ ಇಲಾಖೆ ಇದುವರೆಗೆ ಸ್ವಂತ ಕಟ್ಟಡ ಇಲ್ಲದೇ ಕಳೆದ 15 ವರ್ಷಗಳಿಂದ ಪಟ್ಟಣ ಪಂಚಾಯ್ತಿಗೆ ಸೇರಿದ ಶಿಶುವಿಹಾರದಲ್ಲಿ ಕಾರ್ಯಭಾರ ನಿರ್ವಹಿಸುತ್ತಿದೆ.ಪ್ರಸ್ತುತ  1 ಎಇಇ, 1 ಸಹಾಯಕ ಎಂಜಿನಿಯರ್, 12 ಕಿರಿಯ ಎಂಜಿನಿಯರ್, 12 ಉದ್ಯೋಗ ಖಾತ್ರಿ ಎಂಜಿನಿಯರ್ ಹಾಗೂ 10  ಸಿಬ್ಬಂದಿ  ಸೇರಿ 36 ಜನರು ಈ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪಟ್ಟಣ ಪಂಚಾಯ್ತಿಯವರು ಬೇರೆ ಕಡೆ ನಿವೇಶನ ಒದಗಿಸಿದರೆ ನೂತನ ಕಟ್ಟಡ ನಿರ್ಮಾಣ ಮಾಡಲು ಇಲಾಖೆ ಸಿದ್ಧವಿದೆ. ಆದರೆ,  ಇದುವರೆಗೆ ಪ.ಪಂ. ಅವರು ನಿವೇಶನ ಕಲ್ಪಿಸಿ ಕೊಡಲು ಮುಂದಾಗಿಲ್ಲ ಎನ್ನುತ್ತಾರೆ ಪಟ್ಟಣದ ರಘುರಾಮ್‌, ನಾಗರಾಜ್‌.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.