ಸ್ವಂತ ವೆಚ್ಚದಲ್ಲಿ ಹೂಳೆತ್ತಿದ ರೈತರು

7

ಸ್ವಂತ ವೆಚ್ಚದಲ್ಲಿ ಹೂಳೆತ್ತಿದ ರೈತರು

Published:
Updated:
ಸ್ವಂತ ವೆಚ್ಚದಲ್ಲಿ ಹೂಳೆತ್ತಿದ ರೈತರು

ಚಿಕ್ಕಜಾಜೂರು: ಬಿ.ದುರ್ಗ ಹೋಬಳಿಯ ಚಿಕ್ಕಜಾಜೂರು, ಅಂದನೂರು, ಚಿಕ್ಕಎಮ್ಮಿಗನೂರು, ಕಾಟಯ್ಯನ ಕೆರೆಗಳಲ್ಲಿ ಕಳೆದ 3 ತಿಂಗಳುಗಳಿಂದ ರೈತರೇ ಹೂಳೆತ್ತುವ ಕಾರ್ಯದಲ್ಲಿ ನಿರತರಾಗಿದ್ದಾರೆ.ನವೆಂಬರ್ ತಿಂಗಳಿನ ಮಧ್ಯದಿಂದಲೇ ರೈತರು ಸ್ವಂತ ಖರ್ಚಿನಿಂದ ಹೂಳೆತ್ತುವ ಕಾರ್ಯ ಆರಂಭಿಸಿದ್ದಾರೆ. ಪ್ರತಿ ದಿನ 40-50 ಟ್ರ್ಯಾಕ್ಟರ್ ಹಾಗೂ 4-5 ಟಿಪ್ಪರ್‌ಗಳಲ್ಲಿ ರೈತರು ತಮ್ಮ ಹೊಲ-ತೋಟಗಳಿಗೆ ಮಣ್ಣನ್ನು ಏರಿಸುತ್ತಿದ್ದಾರೆ. ಪ್ರತಿಯೊಂದು ಕೆರೆಯಲ್ಲೂ 2-3 ಜೆಸಿಬಿ, ಹಿಟಾಚಿ ಯಂತ್ರಗಳು ಕಾರ್ಯ ನಿರ್ವಹಿಸುತ್ತಿವೆ.ಪ್ರತಿ ಟ್ರ್ಯಾಕ್ಟರ್ ಟ್ರಿಪ್ ಒಂದಕ್ಕೆ ರೂ. 50-75ಗಳನ್ನು, ಟಿಪ್ಪರ್ ಒಂದಕ್ಕೆ ರೂ. 150ನ್ನು ಜೆಸಿಬಿ/ಹಿಟಾಚಿ ಯಂತ್ರಗಳ ಮಾಲೀಕರಿಗೆ ನೀಡಿ ಮಣ್ಣನ್ನು ತಮ್ಮ ಹೊಲ-ತೋಟಗಳಿಗೆ ಏರಿಸುತ್ತಿದ್ದಾರೆ. ಇಲ್ಲಿಯವರೆಗೆ  ಹೋಬಳಿಯ ರೈತರು ಯಂತ್ರ ಮತ್ತು ವಾಹನಗಳ  ಬಾಡಿಗೆ ಎಂದು ಸುಮಾರು ರೂ. 1ಕೋಟಿಗೂ ಹೆಚ್ಚು ಹಣವನ್ನು ಖರ್ಚು ಮಾಡಿದ್ದಾರೆ.ಹೋಬಳಿಯ ರೈತರು ತಮ್ಮ ಸ್ವಂತ ಖರ್ಚಿನಲ್ಲಿ ಕೆಲಸ ನಿರ್ವಹಿಸಿದ್ದಾರೆ. ಜಿಲ್ಲಾಧಿಕಾರಿ ಈ ಕೆರೆಗಳ ಖುದ್ದು ಪರಿಶೀಲನೆ ನಡೆಸಿ ವರದಿಯನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಬೇಕೆಂದೂ ಹಾಗೂ ಇದರ ಲಾಭವನ್ನು ಯಾವುದೇ ರಾಜಕೀಯ ಹಿತಾಸಕ್ತಿಗಳಿಗೆ ನೀಡಬಾರದು ಎಂದು ಹೋಬಳಿಯ ರೈತರು  ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry