ಗುರುವಾರ , ಮಾರ್ಚ್ 4, 2021
18 °C
ತೆಲಂಗಾಣದಲ್ಲಿ ‘ಮಿಷನ್‌ ಭಗಿರಥ’ ಕುಡಿಯುವ ನೀರಿನ ಯೋಜನೆಗೆ ಚಾಲನೆ

ಸ್ವಘೋಷಿತ ನಕಲಿ ಗೋರಕ್ಷಕರನ್ನು ಶಿಕ್ಷಿಸಿ: ಮೋದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ವಘೋಷಿತ ನಕಲಿ ಗೋರಕ್ಷಕರನ್ನು ಶಿಕ್ಷಿಸಿ: ಮೋದಿ

ಗಜ್ವೆಲ್‌(ತೆಲಂಗಾಣ)(ಪಿಟಿಐ): ಗೋರಕ್ಷಣೆಯ ಹೆಸರಿನಲ್ಲಿ ಸ್ವಘೋಷಿತ ನಕಲಿ ಗೋರಕ್ಷಕರು ಸಮಾಜ ಹಾಗೂ ರಾಷ್ಟ್ರವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಅಂಥವರ ವಿರುದ್ಧ ರಾಜ್ಯಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪುನರುಚ್ಚರಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ತೆಲಂಗಾಣದ ಮೇದಕ್‌ ಜಿಲ್ಲೆಯ ಗಜ್ವೆಲ್‌ನಲ್ಲಿ ಭಾನುವಾರ ‘ಮಿಷನ್‌ ಭಗಿರಥ’ ಕುಡಿಯು ನೀರಿನ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಮೋದಿ, ವೈವಿದ್ಯದಿಂದ ಕೂಡಿದ ದೇಶದಲ್ಲಿ ವಿಭಿನ್ನ ಮೌಲ್ಯಗಳು, ಪರಂಪರೆ ಮತ್ತು ಸಂಪ್ರದಾಯಗಳು ಏಕತೆಯನ್ನು ಉಳಿಸುತ್ತಿವೆ. ನಕಲಿ ಗೋರಕ್ಷಕರು ಸಮಾಜದಲ್ಲಿ ವಿಷಮ ಪರಿಸ್ಥಿತಿ ನಿರ್ಮಿಸುತ್ತಿದ್ದಾರೆ. ಅಂಥವರನ್ನು ಪತ್ತೆಮಾಡಿ, ಶಿಕ್ಷೆಗೆ ಗುರಿಪಡಿಸಿ ಎಂದರು.ಗೋರಕ್ಷಣೆ ಹೆಸರಿನಲ್ಲಿ ದಲಿತರ ಮೇಲೆ ನಡೆದ ಹಲ್ಲೆಗಳ ಬಗ್ಗೆ ಶನಿವಾರವಷ್ಟೆ ಮೌನ ಮುರಿದು ಮಾತನಾಡಿದ್ದ ಮೋದಿ ಅವರು, ‘ಈ ರೀತಿ ಹಲ್ಲೆ ನಡೆಸುವ ಬಹುಪಾಲು ಜನ ಸಮಾಜ ವಿರೋಧಿಗಳು’ ಎಂದು ಗುಡುಗಿದ್ದರು.ಗುಜರಾತ್‌ನ ಉನಾದಲ್ಲಿ ಜುಲೈ 11ರಂದು ಹಸುವಿನ ಚರ್ಮ ಸುಲಿಯುತ್ತಿದ್ದ ದಲಿತರ ಮೇಲೆ ಗೋ ರಕ್ಷಕರು ಹಲ್ಲೆ ನಡೆಸಿದ್ದರು. ಈ ಸಂಬಂಧ ವ್ಯಾಪಕ ಟೀಕೆಗಳು ಕೇಳಿಂಬದಿದ್ದು, ಬಿಜೆಪಿ ಮುಜುಗರಕ್ಕೊಳಗಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.