ಸ್ವಚ್ಛತಾ ಆಂದೋಲನಕ್ಕೆ ಚಾಲನೆ

7

ಸ್ವಚ್ಛತಾ ಆಂದೋಲನಕ್ಕೆ ಚಾಲನೆ

Published:
Updated:

ಮಸ್ಕಿ: ಮಸ್ಕಿಯಲ್ಲಿ ಐದು ದಿನಗಳ ಕಾಲ ನಡೆಯುವ ಸ್ವಚ್ಛತಾ ಆಂದೋಲನಕ್ಕೆ ಶಾಸಕ ಪ್ರತಾಪಗೌಡ ಪಾಟೀಲ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಜ್ಞಾನಪ್ರಕಾಶ ರಸ್ತೆ ಮೇಲಿನ ಕಸಗುಡಿಸಿ ಸೋಮವಾರ ಚಾಲನೆ ನೀಡಿದರು.ರಾಯಚೂರು ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿ ಜಂಟಿಯಾಗಿ ಈ ಆಂದೋಲನ ನಡೆಸಲಿವೆ. ಗ್ರಾಮ ಸ್ವಚ್ಛ ಇದ್ದರೆ ಆರೋಗ್ಯ ಚೆನ್ನಾಗಿರುತ್ತದೆ. ನಮ್ಮ ಕಸವನ್ನು ನಾವೇ ತೆಗೆಯಬೇಕು ಅಂದಾಗ ಮಾತ್ರ ನಮ್ಮ ಊರು ಸುಧಾರಣೆಯಾಗಲು ಸಾಧ್ಯ ಎಂದು ಜ್ಞಾನಪ್ರಕಾಶ ತಿಳಿಸಿದರು.ನಂತರ ಹಳೆಯ ಬಸ್‌ನಿಲ್ದಾಣದ ಬಳಿಯ ಸರ್ಕಾರಿ ಕೇಂದ್ರ ಶಾಲೆ ಮುಂದೆ ಸೇರಿದ್ದ ನೂರಾರು ಜನರ ಹಾಗೂ ವಿದ್ಯಾರ್ಥಿಗಳ ನಡುವೆ ಕಸಬರಿಗೆ ಹಿಡಿದ ಶಾಸಕ ಪ್ರತಾಪಗೌಡ ಪಾಟೀಲ ಮತ್ತಿತರರು ಕಸ ಗುಡಿಸಿದರು. ಕಸ ಗುಡಿಸುವ ಈ ಕಾರ್ಯದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಎಚ್.ಬಿ. ಮುರಾರಿ, ಮಹಾದೇವಪ್ಪಗೌಡ ಪೊಲೀಸ ಪಾಟೀಲ, ಜ್ಞಾನಪ್ರಕಾಶ, ತಾಲ್ಲೂಕು ಪಂಚಾಯ್ತಿ ಸದಸ್ಯ ಹನುಮಂತಪ್ಪ ಮೋಚಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕ್ರಪ್ಪ ಮೋಚಿ, ತಾಲ್ಲೂಕು ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ವೀರಭದ್ರಪ್ಪ, ಕಾರ್ಯನಿರ್ವಾಹಕ ಎಂಜಿನಿಯರ್ ಸಿ.ಎಸ್. ಪಾಟೀಲ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಹನುಮೇಶ ಕುಲಕರ್ಣಿ, ಪಂಚಾಯಿತಿ ಸಿಬ್ಬಂದಿ ಕೈಜೋಡಿಸಿದರು. ಗ್ರಾಮ ಪಂಚಾಯಿತಿ ಸದಸ್ಯರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗ್ರಾಮದ ಮುಖಂಡರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry