ಸ್ವಚ್ಛತೆಯಿಂದ ರೋಗ ದೂರ

7

ಸ್ವಚ್ಛತೆಯಿಂದ ರೋಗ ದೂರ

Published:
Updated:

ಹಳಿಯಾಳ: ಗ್ರಾಮ ಪಂಚಾಯಿತಿ ಯಿಂದ ಸಿಗುವ ಸಹಾಯಧನವನ್ನು ಪಡೆದು ಶೌಚಾಲಯಗಳನ್ನು ನಿರ್ಮಿಸಿ ಕೊಂಡು ಹಾಗೂ ತಮ್ಮ ಮನೆಯ ಗಟಾರುಗಳನ್ನು ಸ್ವಚ್ಛವಾಗಿಟ್ಟುಕೊಂಡು ರೋಗಗಳಿಂದ ಮುಕ್ತಿ ಹೊಂದಿರಿ ಎಂದು ತಾಪಂ ಮಾಜಿ ಸದಸ್ಯ ಬಸಣ್ಣ ಕುರುಬ ಗಟ್ಟಿ ಹೇಳಿದರು.ತಾಲ್ಲೂಕಿನ ಬೆಳವಟಗಿ ಗ್ರಾಮದಲ್ಲಿ ಕೆ.ಡಿ.ಡಿ.ಸಿ ಸಮಾಜ ಸೇವಾ ಸಂಸ್ಥೆ, ಕಾರವಾರ. ಬೆಳವಟಗಿ ಮತ್ತು ಮುರ್ಕ ವಾಡ ಗ್ರಾಮ ಪಂಚಾಯತ, ಸರ್ಕಾರಿ ಪ್ರೌಢ ಶಾಲೆಯ ಸಂಯುಕ್ತ ಆಶ್ರಯ ದಲ್ಲಿ ನಡೆದ ಸ್ವಚ್ಛತಾ ಆಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಅಧ್ಯಕ್ಷತೆಯನ್ನು ಜಿಪಂ ಸದಸ್ಯರಾದ ನಂದಾ ಕೋರ್ವೇಕರ ವಹಿಸಿದ್ದರು. ಅತಿಥಿಗಳಾಗಿ ಸಂಸ್ಥೆಯ ನಿರ್ದೇಶಕರಾದ ಫಾ.ಲಾರೆನ್ಸ್ ಫರ್ನಾಂಡಿಸ್, ಗ್ರಾ.ಪಂ ಅಧ್ಯಕ್ಷ ನಾಮದೇವ ಪಿಂಪಳಕರ, ಗ್ರಾ.ಪಂ ಸದಸ್ಯರಾದ ಸರೋಜಿನಿ ಹರಿ ಜನ, ಸುನೀತಾ ಕಮ್ಮಾರ, ಪಶು ವೈದ್ಯಾ ಧಿಕಾರಿಗಳಾದ ಎಂ.ಎ. ಹಿರೇಮಠ, ಶಾಲಾ ಶಿಕ್ಷಕಿಯಾದ ವೀಣಾ ನಾಯ್ಕ ಉಪಸ್ಥಿತರಿದ್ದರು.ಸ್ವಚ್ಛತಾ ಆಂದೋಲನದ ಅಂಗವಾಗಿ ಶಾಲಾ ವಿದ್ಯಾರ್ಥಿಗಳು, ಸ್ವ ಸಹಾಯ ಸಂಘದ ಮಹಿಳೆಯರು, ಗ್ರಾಮಸ್ಥರು ಸೇರಿ ಗ್ರಾಮದಲ್ಲಿನ ಪ್ರಮುಖ ಬೀದಿ ಗಳಲ್ಲಿ ಘೋಷಣೆಗಳನ್ನು ಕೂಗುತ್ತಾ ಜಾಥಾದ ಮೆರವಣಿಗೆ ನಡೆಸಿದರು ಹಾಗೂ ಬೀದಿ ನಾಟಕವನ್ನು ಪ್ರದರ್ಶಿ ಸಲಾಯಿತು.ಕೆ.ಡಿ.ಡಿ.ಸಿ ಸಮಾಜ ಸೇವಾ ಸಂಸ್ಥೆಯ ಸಂಯೋಜಕ ತಿಪ್ಪೇಸ್ವಾಮಿ ಸ್ವಾಗತಿಸಿ, ನಿರೂಪಿಸಿದರು. ಕಾರ್ಯಕರ್ತ ಮಂಜು ನಾಥ ಕೊಳೂರ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry