ಭಾನುವಾರ, ಮಾರ್ಚ್ 7, 2021
25 °C

ಸ್ವಚ್ಛತೆ ಅರಿವು ಮೂಡಿಸಿದ ವಿದ್ಯಾರ್ಥಿಗಳು

ಎಚ್‌.ಎಸ್‌. ಅನಿಲ್‌ ಕುಮಾರ್ Updated:

ಅಕ್ಷರ ಗಾತ್ರ : | |

ಸ್ವಚ್ಛತೆ ಅರಿವು ಮೂಡಿಸಿದ ವಿದ್ಯಾರ್ಥಿಗಳು

ಹಳೇಬೀಡು: ಸ್ಥಳೀಯ ಸಂಸ್ಥೆಗಳ ಆಡಳಿತ ವ್ಯವಸ್ಥೆಯಲ್ಲಿ ಪಟ್ಟಣಗಳ ಸಂಪೂರ್ಣ ಸ್ವಚ್ಛತೆ ಅಸಾಧ್ಯವಾಗಿದ್ದು, ಸಾಮಾನ್ಯ ಜನರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವುದು ಹಲವೆಡೆ ಸಾಮಾನ್ಯವಾಗಿದೆ.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸ್ಥಳೀಯ ಸ್ವಯಂ ಸೇವಾ ಸಂಸ್ಥೆ ಬೆಳಕು ಪ್ರತಿಷ್ಠಾನ ಪಟ್ಟಣದಲ್ಲಿ ಸ್ವಚ್ಚತಾ ಆಂದೋಲನದ ನಡೆಸಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದಲ್ಲದೆ ಊರಿನ ಸ್ವಚ್ಛತೆಯ ಕೆಲಸ ನಿರ್ವಹಿಸಿ ಭೇಷ್‌ ಎನಿಸಿಕೊಂಡಿವೆ.ಪರೀಕ್ಷೆಗಳು ಆರಂಭವಾಗುವ ಮೊದಲೇ ಎರಡೂ ಸಂಸ್ಥೆಗಳು ಕಲ್ಪತರು ಪದವಿಪೂರ್ವ ಕಾಲೇಜು, ಸರ್ಕಾರಿ ಪದವಿಪೂರ್ವ ಕಾಲೇಜಿನ ಪಿಯು ಮತ್ತು ಪ್ರೌಢಶಾಲಾ ವಿಭಾಗ ಹಾಗೂ ಎಸ್‌ಜಿಆರ್‌ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ­ಗಳನ್ನು ಒಗ್ಗೂಡಿಸಿ ಪಟ್ಟಣದ ಸ್ವಚ್ಛತೆ ಕೆಲಸ ನಿರ್ವಹಿಸಿದರು.ವಿದ್ಯಾರ್ಥಿಗಳೊಂದಿಗೆ ಬೆಳಕು ಪ್ರತಿಷ್ಠಾನದ ಸದಸ್ಯರೂ ಕೈ ಜೋಡಿಸಿದ್ದರಿಂದ ಒಂದೇ ಗಂಟೆಯಲ್ಲಿ ದೇವಾಲಯ ರಸ್ತೆ ಹಾಗೂ ಬೇಲೂರು– ಬಾಣಾವರ ರಸ್ತೆ ಕಸಕಡ್ಡಿಗಳಿಂದ ಮುಕ್ತವಾಗಿ ನಳನಳಿಸು ವಂತಾಯಿತು.ಪೆನ್ನು ಹಿಡಿಯುವ ಕೈಗಳು ಪೊರಕೆ, ಕತ್ತಿ, ಗುದ್ದಲಿ, ಪಿಕಾಸಿ ಹಿಡಿದು ಕೆಲಸ ಮಾಡಲು ಅಂಜದೆ ಶ್ರದ್ಧೆಯಿಂದ ಪಟ್ಟಣವನ್ನು ಸ್ವಚ್ಛಗೊಳಿಸಿ­ದರು. ಹೆಣ್ಣು ಮಕ್ಕಳು ಸಹ ನಾವೇನೂ ಅಡಿಗೆ ಮನೆಗೆ ಮಾತ್ರ ಸಿಮೀತವಲ್ಲ ಎಂಬುದನ್ನು ಸಾಬೀತುಪಡಿಸಿದರು.ಸ್ವಚ್ಛತೆಯ ಅರಿವು ಮೂಡಿಸುವ ಘೋಷಣೆ­ಗಳೊಂದಿಗೆ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ತೆರಳಿ ನಾವು ಜೀವಿಸುವ ಪರಿಸರ ಸ್ವಚ್ಛವಾಗಿದ್ದರೆ ಆರೋಗ್ಯಕರವಾಗಿ ಬಾಳಬಹುದು. ಪ್ಲಾಸ್ಟಿಕ್‌ ಬಳಕೆಯಿಂದ ಪರಿಸರಕ್ಕೆ ಹಾನಿ, ಪ್ರತಿಯೊಬ್ಬರೂ ಶೌಚಾಲಯ ಬಳಕೆ ಮಾಡುವುದಲ್ಲದೆ ಸ್ವಚ್ಛತೆ ಕಾಪಾಡಾಬೇಕು. ಸಾರ್ವಜನಿಕ ಸ್ಥಳದಲ್ಲಿ ನೈರ್ಮಲ್ಯ ಕಾಪಾಡಬೇಕು ಎಂಬ ಸಂದೇಶ ಸಾರಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.