ಸ್ವಚ್ಛತೆ ಕಾಪಾಡಿ; ರೋಗ ದೂರವಿಡಿ

7

ಸ್ವಚ್ಛತೆ ಕಾಪಾಡಿ; ರೋಗ ದೂರವಿಡಿ

Published:
Updated:

ಧರ್ಮಪುರ: ‘ತಮ್ಮ ಸುತ್ತಮುತ್ತಲಿನ ಪರಿಸರ  ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಆರೋಗ್ಯ ಮತ್ತು ನೈರ್ಮಲ್ಯ ಕಾಪಾಡಿ’ ಎಂದು ತಾ.ಪಂ. ಅಧ್ಯಕ್ಷೆ ಅನುರಾಧಾ ರಾಜಣ್ಣ ಸಲಹೆ ನೀಡಿದರು.

ಸಮೀಪದ ಕಣಜನಹಳ್ಳಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಚಿತ್ರದುರ್ಗ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಗ್ರಾ.ಪಂ. ಯ ‘ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿ’ ಸದಸ್ಯರಿಗೆ ಹಮ್ಮಿಕೊಂಡಿದ್ದ ಆರೋಗ್ಯ ತರಬೇತಿ ಶಿಬಿರದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಸದಸ್ಯರಿಗೆ ತರಬೇತಿ ನೀಡುವುದರಿಂದ ನೈರ್ಮಲ್ಯದ ಬಗ್ಗೆ ಹೆಚ್ಚು ನೈರ್ಮಲ್ಯ ವಾಗಿ ನಾಗರಿಕರಿಗೆ ಸಾಕಷ್ಟು ವಿಚಾರಗಳು ತಿಳಿಯಲಿವೆ. ತಾಲ್ಲೂಕು ಪಂಚಾಯ್ತಿಯಿಂದ ಸಿಗುವ ಸೌಲಭ್ಯಗಳನ್ನು ಪ್ರತಿ ಗ್ರಾಮಕ್ಕೆ ಒದಗಿಸುವುದಾಗಿ ಭರವಸೆ ನೀಡಿದರು.ಸಂಯೋಜಕ ಶ್ರೀನಿವಾಸ್ ತರಬೇತಿ ನೀಡಿದರು.ಹರಿಯಬ್ಬೆ ಗ್ರಾ.ಪಂ. ಉಪಾಧ್ಯಕ್ಷೆ ಜಗನ್ಮಾತೆ, ಸದಸ್ಯ ರಾಜಣ್ಣ, ಸವಿತಾಮೂರ್ತಿ, ರಾಮಾಂಜನೇಯ, ನಾಗರಾಜು, ಕೃಷ್ಣಮೂರ್ತಿ, ಗೌರಮ್ಮ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry