ಗುರುವಾರ , ಮೇ 13, 2021
17 °C

`ಸ್ವಚ್ಛ ಪರಿಸರದಿಂದ ಮಾರಕ ರೋಗ ತಡೆಗಟ್ಟಬಹುದು'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬನಹಟ್ಟಿ: `ಪ್ರತಿಯೊಬ್ಬರೂ ತಮ್ಮ ಸುತ್ತ ಮುತ್ತಲಿನ ಪರಿಸರವನ್ನು ನಿರ್ಮಲವಾಗಿಟ್ಟುಕೊಂಡರೆ ಇಂದು ಹಬ್ಬುತ್ತಿರುವ ಮಾರಕ ರೋಗಗಳನ್ನು ತಡೆಗಟ್ಟಬಹುದು. ಆದ್ದರಿಂದ ಪ್ರತಿಯೊಬ್ಬರೂ  ಪರಿಸರ ರಕ್ಷಣೆಗೆ ಮುಂದಾಗಬೇಕು. ಪರಿಸರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಪರಿಸರವನ್ನು ನಾಶ ಮಾಡಿದರೆ ಮುಂದಿನ ದಿನಗಳಲ್ಲಿ ಈ ಭೂಮಿಗೆ ಬಹಳಷ್ಟು ಹಾನಿಯಾಗಲಿದೆ' ಎಂದು ಬನಹಟ್ಟಿ ಸಿವಿಲ್ ನ್ಯಾಯಾಧೀಶೆ ನಾಗಮ್ಮ ಇಚ್ಚಂಗಿ ತಿಳಿಸಿದರು.ಬುಧವಾರ ಸ್ಥಳೀಯ ನ್ಯಾಯಾಲಯದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡ  ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. `ಪರಿಸರ ನಾಶದಿಂದಲೇ ನಾವು ಇಂದು ಪ್ರಕೃತಿ ವಿಕೋಪಗಳನ್ನು ಕಾಣುತ್ತಿದ್ದೇವೆ. ಬರುವಂಥ ದಿನಗಳಲ್ಲಿ ಜನರು ಹೆಚ್ಚೆಚ್ಚು ಗಿಡಗಳನ್ನು ಬೆಳೆಸಿ ಪರಿಸರದಲ್ಲಿ ಸಮತೋಲನ ಕಾಯ್ದುಕೊಳ್ಳಬೇಕು. ಕೇವಲ ಗಿಡ ಮರಗಳನ್ನು ನೆಟ್ಟರೆ ಸಾಲದು. ಅವುಗಳನ್ನು ಬೆಳೆಸುವಲ್ಲಿ ಮತ್ತು ರಕ್ಷಣೆ ಮಾಡುವಲ್ಲಿ ನಾವೆಲ್ಲರೂ ಪ್ರಯತ್ನಿಸಬೇಕು' ಎಂದು ಅವರು ತಿಳಿಸಿದರು.ವಕೀಲರ ಸಂಘದ ಅಧ್ಯಕ್ಷ ವೆಂಕಟೇಶ ನಿಂಗಸಾನಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಮೇಲೆ ಸಹಾಯಕ ಸರ್ಕಾರಿ ಅಭಿಯೋಜಕ ದಿನೇಶ ಮುಗಳಿ ಹಾಗೂ ಹಿರಿಯ ವಕೀಲ ಕಿರಣ ಬದಾಮಿಕರ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನ್ಯಾಯಾಲಯದ ಆವರಣದಲ್ಲಿ 40 ಸಸಿಗಳನ್ನು ನೆಡಲಾಯಿತು.ಕಾರ್ಯದರ್ಶಿ ಶಿವಕುಮಾರ ಷಣ್ಮುಖ ಸ್ವಾಗತಿಸಿದರು. ವಿಶ್ವನಾಥ ಮುಗತಿ ನಿರೂಪಿಸಿದರು. ರೇಖಾ ಕುಲ್ಲೊಳ್ಳಿ ವಂದಿಸಿದರು.ಸಮಾರಂಭದಲ್ಲಿ ವಕೀಲರಾದ ಸುರೇಶ ಗೊಳಸಂಗಿ, ಈಶ್ವರಚಂದ್ರ ಭೂತಿ, ಅಮುಲ್ ಬದಾಮಿಕರ, ಲೆಕ್ಕಪತ್ರ ಶಿರಸ್ತೆದಾರ ಎಸ್.ಎಸ್. ಹೊನ್ನುಂಗರ, ಸಿ.ಬಿ.ಪಾಟೀಲ ಹಾಗೂ ನ್ಯಾಯಾಲಯದ ಸಿಬ್ಬಂದಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.