ಮಂಗಳವಾರ, ಏಪ್ರಿಲ್ 13, 2021
23 °C

ಸ್ವಚ್ಛ ಭಾರತ ವ್ಯಾಪ್ತಿಗೆ ಮೈಸೂರು ಅರಮನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ):  ಮೈಸೂರು ಅರಮನೆ ಸೇರಿದಂತೆ ದೇಶದ ಪ್ರಸಿದ್ಧ 98 ಪ್ರವಾಸಿ ತಾಣಗಳನ್ನು `ಸ್ವಚ್ಛ ಭಾರತ ಆಂದೋಲನ~ ಯೋಜನೆಯಡಿ ನೈರ್ಮಲೀಕರಣಗೊಳಿಸಲಾಗುವುದು ಎಂದು ಕೇಂದ್ರ ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.ತಾಜ್‌ಮಹಲ್, ದಾಲ್ ಸರೋವರ, ಕೆಂಪು ಕೋಟೆ, ಇಂಡಿಯಾ ಗೇಟ್ ಮತ್ತಿತರ ಪ್ರವಾಸಿ ಸ್ಥಳಗಳನ್ನು ಸ್ವಚ್ಛಗೊಳಿಸಲಾಗುವುದು. ಪ್ರತಿ ವರ್ಷ 60 ಲಕ್ಷ  ವಿದೇಶಿ ಪ್ರವಾಸಿಗರು ಭಾರತಕ್ಕೆ ಆಗಮಿಸುತ್ತಾರೆ. ಈ ಸಂಖ್ಯೆಯನ್ನು ದುಪ್ಪಟ್ಟುಗೊಳಿಸಲು ಈ ಯೋಜನೆ ರೂಪಿಸಲಾಗಿದೆ ಎಂದು ಕೇಂದ್ರ ಪ್ರವಾಸೋಧ್ಯಮ ಸಚಿವ ಶುಭೋದ್ ಕಾಂತ್ ಸಹಾಯ್ ತಿಳಿಸಿದ್ದಾರೆ.   ಸ್ವಚ್ಛ ಭಾರತ ಯೋಜನೆಯಡಿ ಕಸ ವಿಲೇವಾರಿ ಮತ್ತು ಸ್ವಚ್ಛತೆ, ಪಾರ್ಕ್‌ಗಳನ್ನು ಶುದ್ಧಗೊಳಿಸುವುದು, ಪ್ರವಾಸಿಗರಿಗೆ ವಸತಿ, ಸೂಕ್ತ ಸ್ಥಳಗಳಲ್ಲಿ ಅತ್ಯಾಧುನಿಕ ಶೌಚಾಲಯಗಳ ನಿರ್ಮಾಣ, ಉತ್ತಮ ನಿರ್ವಹಣೆ ಸೇರಿದಂತೆ ಎಲ್ಲಾ ಪ್ರವಾಸಿ ತಾಣಗಳನ್ನು ಪರಿಸರ ಸ್ನೇಹಿ ಮತ್ತು ನೈರ್ಮಲೀಕರಣಗೊಳಿಸಲಾಗುವುದು ಎಂದು ಅವರು ಹೇಳಿದರು.ಈ ಯೋಜನೆಯೊಂದಿಗೆ ಕೈ ಜೋಡಿಸಲು ಕಾರ್ಪೊರೇಟ್ ಮತ್ತು ಸರ್ಕಾರೇತರ ಸಂಸ್ಥೆಗಳಿಗೂ ಆಹ್ವಾನ ನೀಡಲಾಗಿದೆ. ನವದೆಹಲಿ ಸುತ್ತಮುತ್ತಲಿನ 14 ಸ್ಥಳಗಳನ್ನು ಸ್ವಚ್ಛಗೊಳಿಸಲು ನಿರ್ಧರಿಸಲಾಗಿದೆ. ಉಳಿದಂತೆ ಕೊನಾರ್ಕ್, ಚಾರ್‌ಮೀನಾರ್, ಕೊವಲಂ ಬೀಚ್, ಮೈಸೂರು ಅರಮನೆ, ಗೊಲ್ಕೋಂಡ ಕೋಟೆ, ಅಜಂತಾ ಗುಹೆಗಳು, ಮಾತೃಭೂಮಿ ದೇವಾಲಯ ಸೇರಿದಂತೆ ಪ್ರಸಿದ್ಧ 98 ಸ್ಥಳಗಳನ್ನು ಗುರುತಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.