ಸ್ವದೇಶಕ್ಕೆ ಮರಳಿದ `ಚಾಂಪಿಯನ್' ಭಾರತ

ಸೋಮವಾರ, ಜೂಲೈ 22, 2019
27 °C

ಸ್ವದೇಶಕ್ಕೆ ಮರಳಿದ `ಚಾಂಪಿಯನ್' ಭಾರತ

Published:
Updated:

ನವದೆಹಲಿ (ಪಿಟಿಐ): ಐಸಿಸಿ ಚಾಂಪಿಯನ್ಸ್ ಟ್ರೋಫಿ ಹಾಗೂ ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯಲ್ಲಿ ಚಾಂಪಿಯನ್ ಆದ ಭಾರತ ತಂಡ ಎರಡು ಟ್ರೋಫಿಯೊಂದಿಗೆ ಭಾನುವಾರ ಭಾರತಕ್ಕೆ ಮರಳಿತು.ಜಿಂಬಾಬ್ವೆ ಎದುರಿನ ಕ್ರಿಕೆಟ್ ಸರಣಿಗೆ ನಾಯಕ ದೋನಿ ಅವರಿಗೆ ವಿಶ್ರಾಂತಿ ನೀಡಿರುವ ಕಾರಣ ಬಿಡುವಿನ ವೇಳೆಯನ್ನು ಕಳೆಯಲು ಅವರು ಲಂಡನ್‌ನಲ್ಲಿಯೇ ತಂಗಿದ್ದಾರೆ. `ಎರಡು ತಿಂಗಳ ಬಿಡುವಿನ ಬಳಿಕ ತವರಿಗೆ ವಾಪಸ್ಸಾಗಿದ್ದೇವೆ. ಲಂಡನ್ ಹಾಗೂ ವೆಸ್ಟ್ ಇಂಡೀಸ್‌ನ ಸಮಯಕ್ಕೆ ಹೊಂದಿಕೊಳ್ಳುವುದು ಕಷ್ಟವಾಯಿತು' ಎಂದು ವೇಗಿ ಇಶಾಂತ್ ಶರ್ಮ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.`ವಿಮಾನ ನಿಲ್ದಾಣದಲ್ಲಿ ಲಭಿಸಿದ ಸ್ವಾಗತದಿಂದ ನನಗೆ ತುಂಬಾ ಖುಷಿಯಾಯಿತು. ಎರಡು ತಿಂಗಳು ನಂತರ ಮುಂಬೈನ ಅಭಿಮಾನಿಗಳನ್ನು ಎದುರುಗೊಂಡೆ' ಎಂದು ರೋಹಿತ್ ಶರ್ಮ ಕೂಡಾ ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry