ಸ್ವದೇಶಿ ವಸ್ತು ಬಳಕೆಗೆ ಜಾಗೃತಿ ಜಾಥಾ

7

ಸ್ವದೇಶಿ ವಸ್ತು ಬಳಕೆಗೆ ಜಾಗೃತಿ ಜಾಥಾ

Published:
Updated:

ಗುಲ್ಬರ್ಗ: ನಗರದ ಓಂ ನಗರ ಮತ್ತು ವೀರೇಂದ್ರ ಪಾಟೀಲ ಬಡಾವಣೆಯಲ್ಲಿ ಸ್ವದೇಶಿ ಜಾಗರಣ ಮಂಚ ಕರ್ನಾಟಕ ವತಿಯಿಂದ ‘ಸ್ವದೇಶಿ ಜಾಥಾ’ ಕಾರ್ಯಕ್ರಮವನ್ನು ಈಚೆಗೆ ಹಮ್ಮಿಕೊಳ್ಳಲಾಗಿತ್ತು.ಬಡಾವಣೆಗಳ ಮನೆ ಮನೆಗಳಿಗೆ ತೆರಳಿ ಸ್ವದೇಶಿ ಮತ್ತು ವಿದೇಶಿ ವಸ್ತುಗಳ ಬಗ್ಗೆ ಮಾಹಿತಿ ನೀಡಿ, ಸ್ವದೇಶಿ ವಸ್ತುಗಳನ್ನು ಬಳಸುವಂತೆ ಹಾಗೂ ಸ್ವದೇಶಿ ಚಿಂತನೆ ಅಳವಡಿಸಿಕೊಳ್ಳುವಂತೆ ಜನರಿಗೆ ಜಾಗೃತಿ ಮೂಡಿಸಲಾಯಿತು.ಸದಸ್ಯ ಮಹಾದೇವ ಕರದಳ್ಳಿ,  ನಿಸರ್ಗ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್‌.ಸಿ.ಪಾಟೀಲ ಹಾಗೂ  ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry