ಸ್ವಪ್ರತಿಷ್ಠೆಯ ಸಿರಿ ಸುಂದರಿ

7

ಸ್ವಪ್ರತಿಷ್ಠೆಯ ಸಿರಿ ಸುಂದರಿ

Published:
Updated:
ಸ್ವಪ್ರತಿಷ್ಠೆಯ ಸಿರಿ ಸುಂದರಿ

ಸೈಫ್ ಅಲಿ ಖಾನ್ ಜೊತೆಯಲ್ಲಿ ನಟಿಸುವ ಅವಕಾಶಗಳನ್ನು ಪುಂಖಾನುಪುಂಖವಾಗಿ ದೀಪಿಕಾ ಪಡುಕೋಣೆ ಪಡೆಯುತ್ತಿದ್ದರೆ, ಇನ್ನೊಂದೆಡೆ ಕರೀನಾ ಎದುರು ಪ್ರಶ್ನೆಗಳ ಸುರಿಮಳೆ:

 

ದೀಪಿಕಾ ಜೊತೆ ಸೈಫ್ ಅಷ್ಟೊಂದು ಚಿತ್ರಗಳಲ್ಲಿ ನಟಿಸಲು ಕಾರಣವೇನು? ಅದರಿಂದ ನಿಮಗೆ ಬೇಜಾರಾಗುತ್ತಿಲ್ಲವೇ? ಸೈಫ್-ದೀಪಿಕಾ ನಡುವೆ ಸಂಬಂಧವೇನಾದರೂ ಇದೆಯೇ? ಅವರು ತಮ್ಮ ಹೋಮ್ ಪ್ರೊಡಕ್ಷನ್‌ನಲ್ಲೂ ನಿಮಗೆ ಯಾಕೆ ಪಾತ್ರ ಕೊಡುತ್ತಿಲ್ಲ? ನಿಮ್ಮ ಹೊಟ್ಟೆ ಉರಿಯುತ್ತಿಲ್ಲವೇ? ನಿಮ್ಮನ್ನು ದೀಪಿಕಾ ಓವರ್‌ಟೇಕ್ ಮಾಡುತ್ತಿದ್ದಾರೆಯೇ?ಹೀಗೆ ಬಾಣಗಳಂದದಿ ಹೊಮ್ಮುವ ಪ್ರಶ್ನೆಗಳಿಗೆ ಕರೀನಾ ತಲೆಕೆಡಿಸಿಕೊಳ್ಳುವವರಲ್ಲ. ಈ ಎಲ್ಲಾ ಪ್ರಶ್ನೆಗಳಿಗೂ ಅವರಲ್ಲಿ ಉತ್ತರವಿದೆ. ಎಲ್ಲವೂ ಪ್ರತಿಬಾಣಗಳ ಸ್ವರೂಪದವು. ಇದು ಅವರ ಉತ್ತರಗಳ ಪ್ರತಿಮಳೆ: `ಸಿನಿಮಾ ಬೇರೆ. ಖಾಸಗಿ ಬದುಕು ಬೇರೆ.ದೀಪಿಕಾಗೆ ಅವಕಾಶ ಸಿಗುತ್ತಿದೆ ಎಂದರೆ ಅದು ಅವರ ಅದೃಷ್ಟ. ಅದರಿಂದ ನನಗೇಕೆ ಬೇಜಾರಾಗಬೇಕು? ನಾನೂ ಖಾಲಿ ಕೂತಿಲ್ಲ. ಅಕ್ಷಯ್‌ಕುಮಾರ್ ಜೊತೆ ನಾನು ಎಂಟನೇ ಸಿನಿಮಾದಲ್ಲಿ ನಟಿಸುತ್ತಿದ್ದೇನೆ.ಇದರಿಂದ ನಿಮ್ಮ ಹೊಟ್ಟೆ ಉರಿಯುತ್ತಿದೆಯಾ ಎಂದು ಸೈಫ್ ಹತ್ತಿರ ಹೋಗಿ ಕೇಳಿ. ದೀಪಿಕಾ ಜೊತೆ ಸಂಬಂಧ ಬೆಳೆಸುವ ಅವಕಾಶವನ್ನು ಸೈಫ್‌ಗೆ ನಾನಿನ್ನೂ ಕೊಟ್ಟಿಲ್ಲ. ಪ್ರೊಡಕ್ಷನ್ ಬೇರೆ, ಪ್ರೀತಿ ಬೇರೆ. ಸೈಫ್‌ಗೆ ಒಂದು ಸಿನಿಮಾ ಗೆಲ್ಲಿಸಲು ಏನು ಮಾಡಬೇಕು ಎಂಬುದು ಗೊತ್ತು. ಸದಾ ಅದನ್ನೇ ಮಾಡುತ್ತಿರುತ್ತಾರೆ.ದೀಪಿಕಾ ಬಗ್ಗೆ ನನಗೂ ಆಗೀಗ ಆತಂಕ ಮೂಡಿದೆ. ಅದು ಸೈಫ್ ವಿಷಯದ ಕುರಿತು ಅಲ್ಲ; ನಟಿಯಾಗಿ ಅವರು ಸಾಕಷ್ಟು ಮುನ್ನುಗ್ಗುತ್ತಿರುವುದರಿಂದ ನಾನು ಎದುರಿಸಬೇಕಾದ ಸ್ಪರ್ಧೆಯ ಆತಂಕ.~

ಸಾಲುಸಾಲು ಚಿತ್ರಗಳು ತೋಪಾಗಿದ್ದರೂ ದೀಪಿಕಾ ಎದುರು ಅವಕಾಶಗಳ ದಿಡ್ಡಿಬಾಗಿಲು. ಕರೀನಾ ಮಾತ್ರ ಮೊದಲಿನಷ್ಟು ಬ್ಯುಸಿಯೇನೂ ಇಲ್ಲ. ಆದರೂ ಅವರು ಇದನ್ನು ಒಪ್ಪುವುದಿಲ್ಲ. `ಬಾಡಿಗಾರ್ಡ್‌ನಲ್ಲಿ ನನ್ನ ಪಾತ್ರ ಮುಖ್ಯವಾದದ್ದೇನೂ ಅಲ್ಲ ಎಂದು ಕೆಲವರು ಆಡಿಕೊಳ್ಳುತ್ತಿದ್ದಾರೆ.ಎಷ್ಟೋ ನಾಯಕಿಯರು ಇಡೀ ಚಿತ್ರದಲ್ಲಿ ಎರಡು ಸಾಲಿನ ಸಂಭಾಷಣೆ ಹೇಳಿ, ಆ ಚಿತ್ರದ ಯಶಸ್ಸಿನ ಪಾಲುದಾರರು ತಾವೇ ಎಂಬಂತೆ ಬೀಗುತ್ತಿರುವ ಈ ಕಾಲದಲ್ಲಿ `ಬಾಡಿಗಾರ್ಡ್~ ಅಮುಖ್ಯವೇನೂ ಅಲ್ಲ. ನಾನೊಬ್ಬ ನಟಿ.ಎರಡು ದೃಶ್ಯವಿದ್ದರೂ ಅದರಲ್ಲಿ ನಾನು ಮಿಂಚಬೇಕು. ಡಾನ್ ಚಿತ್ರದ `ಯೇ ಮೇರಾ ದಿಲ್...~ ಹಾಡಿನಲ್ಲಿ ನನ್ನ ಕಣ್ಣಿನ ಮಾದಕತೆ ಕಂಡವರು ಮೆಚ್ಚಿ ಮಾತನಾಡಿದ್ದರು. ನಾನು ಈಗಲೂ ಬ್ಯುಸಿ. ಬರೀ ನಾಯಕಿಯಾಗಿ ಒಂದಾದ ಮೇಲೊಂದರಂತೆ ಚಿತ್ರಗಳಿಗೆ ಸಹಿ ಹಾಕಿದ ಮಾತ್ರಕ್ಕೆ ಬ್ಯುಸಿ ಎಂದರ್ಥವಲ್ಲ.

 

ನಾನು ಸುಮ್ಮನೆ ಕೂರುವವರ ಪೈಕಿ ಅಲ್ಲ. ನಾನು ಈಗಲೂ ತಿಂಗಳಿನ ಇಪ್ಪತ್ತು ದಿನ ಚಿತ್ರೀಕರಣದಲ್ಲಿ ತೊಡಗುತ್ತೇನೆ. ಅಂದಮೇಲೆ ಖಾಲಿ ಕೂತಿಲ್ಲ ಅಲ್ಲವೇ~ ಎಂಬುದು ಕರೀನಾ ಪ್ರಶ್ನೆ.ಸೈಫ್ ಜೊತೆ ಹೆಚ್ಚು ಚಿತ್ರಗಳಲ್ಲಿ ನಟಿಸುತ್ತಿದ್ದರೂ ದೀಪಿಕಾಗೂ ಕರೀನಾಗೂ ಅಷ್ಟಕ್ಕಷ್ಟೆ. `ನಮ್ಮ ಫೀಲ್ಡಿನಲ್ಲಿ ನಾಯಕಿಯರಿಬ್ಬರು ಒಳ್ಳೆಯ ಗೆಳತಿಯರಾಗುವುದು ದೂರದ ಮಾತು. ಈ ವಿಷಯದಲ್ಲಿ ನನ್ನ ಅನುಭವ ಹೆಚ್ಚೇ ಇದೆ. ಸ್ವಪ್ರತಿಷ್ಠೆ ಕೂಡ ನಮ್ಮ ಅರ್ಹತೆ.

 

ನನ್ನ ಗೆಳತಿ ಆಗಬಹುದು ಎಂದು ಒಬ್ಬರ ಬಗ್ಗೆ ನನಗೆ ಭಾವನೆ ಬೆಳೆದರೆ, ಅವರಲ್ಲಿನ ಸ್ವಪ್ರತಿಷ್ಠೆ ಎದ್ದುಕಾಣುತ್ತದೆ. ಹಾಗಾಗಿ ನಾನು ಕೂಡ ಎಂದೂ ಸ್ವಪ್ರತಿಷ್ಠೆ ಬಿಡುವವಳಲ್ಲ. ನಟಿಯ ಮಟ್ಟಿಗೆ ಅದು ವೇಗವರ್ಧಕ...~ ಫೋಟೋ   ಸೆಷನ್‌ಗೆ ಒಡ್ಡಿಕೊಳ್ಳುತ್ತಲೇ ನಿಯತಕಾಲಿಕವೊಂದಕ್ಕೆ ಸಂದರ್ಶನದಲ್ಲಿ ಅವರು ಹೀಗೆ ಹೇಳಿದ್ದರು.`ಸೈಫ್ ಅಲಿ ಖಾನ್ ಸಂಸಾರವನ್ನು ಒಡೆದ ಪಾಪ ನಿನಗೆ ಸುತ್ತಿಕೊಳ್ಳುವುದಿಲ್ಲವೇ~ ಎಂದು ದೂರದ ಸಂಬಂಧಿಕರು ಕಿಚಾಯಿಸಿದ್ದರಂತೆ. ಅದಕ್ಕೆ ಕರೀನಾ ಕೊಟ್ಟ ಪ್ರತಿಕ್ರಿಯೆ ಹೀಗಿತ್ತು:

 

`ಸೈಫ್ ನನ್ನನ್ನು ಪ್ರೀತಿಸುತ್ತಾನೆ. ಅವನಿಂದ ನಾನು ಇನ್ನೂ ಸುಂದರವಾಗುತ್ತೇನೆ. ಅದಷ್ಟೇ ನನಗೆ ಬೇಕಾದ ಸತ್ಯ. ಅವರ ಸಂಸಾರವನ್ನು ನಾನು ಮುರಿದಿಲ್ಲ. ನಮ್ಮ ಪ್ರೀತಿ ಅವರ ದಾಂಪತ್ಯಕ್ಕಿಂತ ಗಟ್ಟಿ ಅಷ್ಟೆ. ನಾನು ಸಂಪ್ರದಾಯಸ್ಥೆಯೇನೂ ಅಲ್ಲ~.`ದೀಪಿಕಾ ಮೂಗನ್ನು ನೋಡಿ. ನನ್ನ ಮೂಗಿನ ಕಡೆಗೂ ಗಮನ ಕೊಡಿ. ಎರಡರ ಮೇಲೂ ಕೋಪ, ಪ್ರತಿಷ್ಠೆ ಎಲ್ಲವೂ ಕಾಣುತ್ತದೆ~- ತುಸುವೂ ಮುಜುಗರವಿಲ್ಲದೆ ಹೇಳಿಕೊಳ್ಳುತ್ತಾರೆ ಕರೀನಾ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry