ಸ್ವಯಂಕೃಷಿ ವಂಚನೆ: ಮತ್ತೆ ಮೂವರು ನಿರ್ದೇಶಕರ ಸೆರೆ
ದೇವನಹಳ್ಳಿ: ಪಟ್ಟಣದ ಸ್ವಯಂಕೃಷಿ ಸೌಹಾರ್ದ ಕೊ-ಆಪರೇಟಿವ್ ಸಂಸ್ಥೆಯ ಟ್ರಸ್ಟ್ನ ನಿರ್ದೇಶಕರಾದ ರಮೇಶ್, ರಾಜಗೋಪಾಲ್ ಹಾಗೂ ರಾಮಕೃಷ್ಣಾಚಾರ್ ಎಂಬ ಮೂವರನ್ನು ದೇವನಹಳ್ಳಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಸಂಸ್ಥೆಯ ಒಟ್ಟು 15 ನಿರ್ದೇಶಕರಲ್ಲಿ ಈಗ 8 ಮಂದಿಯನ್ನು ಬಂಧಿಸಿದಂತಾಗಿದೆ. ಉಳಿದ 7 ನಿರ್ದೇಶಕರು ತಲೆಮರೆಸಿಕೊಂಡಿದ್ದು ಅವರಿಗಾಗಿ ಶೋಧ ಕಾರ್ಯ ಮುಂದುವರೆಸಲಾಗಿದೆ.
ಶೋಧ ಕಾರ್ಯದ ನೇತೃತ್ವವನ್ನು ಪೊಲೀಸ್ ಇನ್ಸ್ಪೆಕ್ಟರ್ ಶಿವಕುಮಾರ್ ವಹಿಸಿಕೊಂಡಿದ್ದಾರೆ. ತಂಡದಲ್ಲಿ ಪಿಎಸ್ಐ ಲಕ್ಷ್ಮೀಕಾಂತ್, ಪೇದೆ ನಾರಾಯಣ ಸ್ವಾಮಿ ಹಾಗೂ ಸುರೇಶ್ ಇದ್ದಾರೆ.
ಟ್ರಸ್ಟ್ನ ಅಧ್ಯಕ್ಷ ಮುರುಳಿ, ಉಪಾಧ್ಯಕ್ಷ ಚಿತ್ರನಟ ವೀರೇಂದ್ರಬಾಬು ಹಾಗೂ ಇತರೆ ನಿರ್ದೇಶಕರು ಸೇರಿದಂತೆ ಒಟ್ಟು ಐದು ಮಂದಿಯನ್ನು ಪೊಲೀಸರು ಜುಲೈ 5ರಂದು ಹೈದರಾಬಾದ್ನಲ್ಲಿ ಬಂಧಿಸಿದ್ದರು. ನಂತರ ಇವರನ್ನೆಲ್ಲಾ ದೇವನಹಳ್ಳಿಯ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಸದ್ಯ ಇವರೆಲ್ಲಾ ಪೊಲೀಸ್ ಹಾಗೂ ನ್ಯಾಯಾಂಗ ವಶದಲ್ಲಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.