ಸ್ವಯಂ ಉದ್ಯೋಗ ಕೈಗೊಳ್ಳಿ: ಸುಧಾ

7

ಸ್ವಯಂ ಉದ್ಯೋಗ ಕೈಗೊಳ್ಳಿ: ಸುಧಾ

Published:
Updated:

ಕೊಳ್ಳೇಗಾಲ: ಮಹಿಳೆಯರು ಆರ್ಥಿಕ ಸ್ವಾವಲಂಬನೆ ಸಾಧಿಸಲು ಸ್ವಯಂ ಉದ್ಯೋಗ ಆವಲಂಬಿಸಬೇಕು ಎಂದು ಸುಧಾ ಸ್ವಯಂ ಉದ್ಯೋಗ ಸಂಸ್ಥೆ ಸಂಸ್ಥಾಪಕಿ ಸುಧಾಶಿವಮಲ್ಲು ತಿಳಿಸಿದರು.ಸುಧಾಸ್ವಯಂ ಉದ್ಯೋಗ ಸಂಸ್ಥೆ ಮತ್ತು ರುಡ್‌ಸೆಟ್ ಸಂಸ್ಥೆ ಸಹಯೋಗದೊಡನೆ ಮಹಿಳೆಯರಿಗೆ ಏರ್ಪಡಿಸಿರುವ ಒಂದು ತಿಂಗಳ ಫ್ಯಾಷನ್ ಡಿಸೈನ್ ತರಬೇತಿ ಶಿಬಿರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.ಮಹಿಳೆಯರು ಸ್ವಯಂ ಉದ್ಯೋಗದ ಬಗ್ಗೆ ಮಾಹಿತಿ ಪಡೆದು ಸೂಕ್ತ ತರಬೇತಿ ಪಡೆಯುವುದು ಅತ್ಯಗತ್ಯ. ಈ ಅವಕಾಶವನ್ನು ಸದ್ಬಳಕೆಮಾಡಿಕೊಳ್ಳಬೇಕು ಎಂದರು. ಸುಮುಖ ಗಾರ್ಮೆಂಟ್ಸ್ ವ್ಯವಸ್ಥಾಪಕಿ ನಾಗಮಣಿ, ಪ್ರಮೀಳಾದೇವಿ, ಪೂರ್ಣಿಮಾ ರುಡ್‌ಸೆಡ್ ಸಂಸ್ಥೆಯ ವ್ಯವಸ್ಥಾಪಕ ಚಿನ್ನಸ್ವಾಮಿ, ಮುಖಂಡ ಶಿವಮಲ್ಲು ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry