ಬುಧವಾರ, ನವೆಂಬರ್ 13, 2019
23 °C

ಸ್ವಯಂ ರಕ್ಷಣಾ ತರಬೇತಿ

Published:
Updated:

ಹೆಚ್ಚುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಲು ಮತ್ತು ಅವುಗಳನ್ನು ಸಮರ್ಥವಾಗಿ ಎದುರಿಸಲು 16 ರಿಂದ 65 ವರ್ಷ ವಯೋಮಿತಿಯ ಮಹಿಳೆಯರಿಗಾಗಿ ಸುಚಿತ್ರ ಅಕಾಡೆಮಿಯು ಶಸ್ತ್ರಗಳಿಲ್ಲದೆ ಹೋರಾಡುವ ವಿಶೇಷ `ಆತ್ಮ ರಕ್ಷಣಾ ತರಬೇತಿ' ಆಯೋಜಿಸಿದೆ. ಈ ತರಬೇತಿಯು ಏ.20ರಿಂದ 30ರವರೆಗೆ ನಡೆಯಲಿದೆ.  ಫಿಟ್‌ನೆಸ್ ಟ್ರೈನಿಂಗ್, ಬೇಸಿಕ್ ಆರ್ಟ್ ಟ್ರೈನಿಂಗ್, ಸ್ವಯಂ ರಕ್ಷಣೆ, ಸ್ಟ್ರೀಟ್ ಫೈಟ್ ಕಾಂಬಿನೇಷನ್ಸ್ ಬಗ್ಗೆ ತರಬೇತಿ ನೀಡಲಾಗುವುದು. ಖ್ಯಾತ ಕರಾಟೆ ಪಟು ಮಾಸ್ಟರ್ ರೇಷಿ ಸುರೇಶ್ ಕೆನಿಚಿರ ಮತ್ತು ಮಹಿಳಾ ತರಬೇತಿದಾರದಿಂದ ತರಗತಿಗಳು ನಡೆಯಲಿವೆ. ಆಸಕ್ತ ಮಹಿಳೆಯರು ಹೆಸರು ನೋಂದಣಿ ಮಾಡಿಕೊಳ್ಳಬಹುದು.  ಸ್ಥಳ: ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿ, ನಂ. 36, 9ನೇ ಮೈನ್, ಬಿ.ವಿ.ಕಾರಂತ ರಸ್ತೆ, ಬನಶಂಕರಿ 2ನೇ ಹಂತ. ಮಾಹಿತಿಗೆ: 080 2671 1785, 93412 36192.

ಪ್ರತಿಕ್ರಿಯಿಸಿ (+)