ಸ್ವಯಂ ಸೇವಕರು ಅಭಿಯಾನ ಆರಂಭ

ಸೋಮವಾರ, ಜೂಲೈ 22, 2019
26 °C

ಸ್ವಯಂ ಸೇವಕರು ಅಭಿಯಾನ ಆರಂಭ

Published:
Updated:

ನವದೆಹಲಿ (ಐಎಎನ್‌ಎಸ್): ದೇಶದಾದ್ಯಂತ ಇರುವ ಉತ್ತಮ ಪರೋಪಕಾರಿ ಜನರ ಮಧ್ಯೆ ಸಂಪರ್ಕ ಕಲ್ಪಿಸಲು ರಾಷ್ಟ್ರೀಯ ಕೋಮು ಸೌಹಾರ್ದ ಸಂಸ್ಥೆಯು (ಎನ್‌ಎಫ್‌ಸಿಎಚ್) `ಶಾಂತಿ ಮತ್ತು ಸೌಹಾರ್ದಕ್ಕಾಗಿ ಸ್ವಯಂ ಸೇವಕರು~ ಎಂಬ ಅಭಿಯಾನ ಆರಂಭಿಸಿದೆ.`ಈ ಕಾರ್ಯಕ್ರಮದಿಂದ ಸ್ವಯಂ ಸೇವಕರಿಗೆ ವೇದಿಕೆ ಸಿಗಲಿದೆ ಮತ್ತು ಸಂಸ್ಥೆಯು ಒಳ್ಳೆಯ ಉದ್ದೇಶದ ಕೆಲಸಕ್ಕೆ ಸಹಾಯಹಸ್ತ ಚಾಚಬಹುದು~ ಎಂದು ಪ್ರಕಟಣೆ ತಿಳಿಸಿದೆ. ವಿಶ್ವಸಂಸ್ಥೆ ಆಚರಿಸುವ ಅಂತರರಾಷ್ಟ್ರೀಯ ಸ್ವಯಂ ಸೇವಕರ ಹತ್ತನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಿರುವುದು ವಿಶೇಷ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry