ಶುಕ್ರವಾರ, ನವೆಂಬರ್ 15, 2019
22 °C

`ಸ್ವಸಹಾಯ ಸಂಘ ಮಹಿಳೆಯರಿಗೆ ಸಹಕಾರಿ'

Published:
Updated:

ಬೀದರ್: ಮಹಿಳೆಯರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸ್ವಸಹಾಯ ಸಂಘಗಳು ಸಹಕಾರಿಯಾಗಿವೆ ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಗುರುಪಾದಪ್ಪ ನಾಗಮಾರಪಳ್ಳಿ ತಿಳಿಸಿದರು.ಜಿಲ್ಲಾ ಯುವ ಬಸವ ಕೇಂದ್ರ ನಗರದ ಲಾಡಗೇರಿ ಬಡಾವಣೆಯಲ್ಲಿ ಮಂಗಳವಾರ ಆಯೋಜಿಸಿದ್ದ ಮಹಾಕ್ರಾಂತಿ ನಾಟಕ ಪ್ರದರ್ಶನ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.  ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರು ಸ್ವಾವಲಂಬಿಯಾಗಿ ಆರ್ಥಿಕ ಸ್ಥಿತಿ ಸುಧಾರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.ನಗರಸಭೆ ಸದಸ್ಯರಾದ ಧನರಾಜ ಹಂಗರಗಿ, ಎಚ್.ಎಸ್. ಮಾರ್ಟಿನ್, ನಾಗಶೆಟ್ಟಿ ವಗದಾಳೆ ಹಾಗೂ ಜಗದೀಶ್ ಮರೂರು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಜಿಲ್ಲಾ ಬಸವ ಕೇಂದ್ರದ ಅಧ್ಯಕ್ಷ ಶರಣಪ್ಪ ಮಿಠಾರೆ, ಜಿಲ್ಲಾ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಸುರೇಶ ಚನಶಟ್ಟಿ, ಪ್ರಮುಖರಾದ ಕಂಟೆಪ್ಪ ಪಾಟೀಲ್, ಶಾಂತಕುಮಾರ್ ಗೌರಶೆಟ್ಟಿ, ಶರಣು ಕಮಲನಗರ ಉಪಸ್ಥಿತರಿದ್ದರು. ಚಿತ್ರದುರ್ಗದ ಜಮುರಾ ಕಲಾಲೋಕದ ಕಲಾವಿದರ ತಂಡ ಮಹಾಕ್ರಾಂತಿ ನಾಟಕ ಪ್ರದರ್ಶಿಸಿತು.

ಪ್ರತಿಕ್ರಿಯಿಸಿ (+)