ಸ್ವಸಹಾಯ ಸಂಘ ಸದಸ್ಯರಿಗೆ ಉಚಿತ ವಿಮೆ

6
ಡಿಸಿಸಿ ಬ್ಯಾಂಕ್‌ನಿಂದ ಗೋ ಶಾಲೆ ಆರಂಭ

ಸ್ವಸಹಾಯ ಸಂಘ ಸದಸ್ಯರಿಗೆ ಉಚಿತ ವಿಮೆ

Published:
Updated:

ತುಮಕೂರು: ಸ್ವಸಹಾಯ ಗುಂಪುಗಳ ಸದಸ್ಯರಿಗಾಗಿ ಭಾರತೀಯ ಜೀವ ವಿಮಾ ನಿಗಮ ಹಾಗೂ ಕರ್ನಾಟಕ ಸರ್ಕಾರ ‘ಆಮ್‌ ಆದ್ಮೀ ಬೀಮಾ’ ಉಚಿತ ವಿಮೆ ಸೌಲಭ್ಯ ಯೋಜನೆ ಜಾರಿಗೆ ತಂದಿದೆ ಎಂದು ಜಿಲ್ಲಾ ಸಹ­ಕಾರ ಕೇಂದ್ರ ಬ್ಯಾಂಕ್‌ (ಡಿಸಿಸಿ) ಅಧ್ಯಕ್ಷ ಕೆ.ಎನ್‌.ರಾಜಣ್ಣ ತಿಳಿಸಿದರು.ಭೂರಹಿತ ಗ್ರಾಮೀಣ ಕುಟುಂಬ­ಗಳು, ಕಸುಬುದಾರರು, ಸ್ವಸಹಾಯ ಗುಂಪಿನ ಸದಸ್ಯರು ಯೋಜನೆಗೆ ಅರ್ಹರು. ಕೇಂದ್ರ ಹಾಗೂ ರಾಜ್ಯ ಸರ್ಕಾ­ರವೇ ವಾರ್ಷಿಕ ಕಂತು ₨ 200 ಪಾವತಿಸಲಿದ್ದು, ಇದು ಸಂಪೂರ್ಣ ಉಚಿತ ವಿಮೆಯಾಗಿದೆ ಎಂದು ಪತ್ರಿಕಾ­ಗೋಷ್ಠಿಯಲ್ಲಿ ಹೇಳಿದರು.ಸಹಜ ಮರಣಕ್ಕೆ ₨ 30 ಸಾವಿರ, ಅಪಘಾತದಿಂದ ಮೃತಪಟ್ಟರೆ ₨ 75 ಸಾವಿರ, ಅಪಘಾತದಲ್ಲಿ ಕಣ್ಣು, ಕಾಲು ಕಳೆದುಕೊಂಡವರಿಗೆ ₨ 75 ಸಾವಿರ ವಿಮೆ ಪರಿಹಾರ ದೊರೆಯ­ಲಿದೆ. ಅದೇ ರೀತಿ ಒಂದು ಕಣ್ಣು ಅಥವಾ ಕಾಲು ಕಳೆದುಕೊಂಡರೆ ₨ 37,500 ಪರಿಹಾರ ಸಿಗಲಿದ್ದು, ಈಗಾಗಲೇ ಡಿಸಿಸಿ ಬ್ಯಾಂಕ್‌ ವತಿ­ಯಿಂದ 598 ಗುಂಪುಗಳ 8848 ಸದಸ್ಯರನ್ನು ವಿಮೆಗೆ ಒಳಪಡಿಸಲಾಗಿದೆ ಎಂದು ವಿವರಿಸಿದರು.ಆಮ್‌ ಆದ್ಮೀ ಬೀಮಾ ಉಚಿತ ವಿಮಾ ಯೋಜನೆಯಲ್ಲಿ 9ರಿಂದ 12ನೇ ತರಗತಿ ಓದುತ್ತಿರುವ ಫಲಾ­ನುಭವಿಗಳ ಇಬ್ಬರು ಮಕ್ಕಳಿಗೆ ವಾರ್ಷಿಕ ₨ 1200 ವಿದ್ಯಾರ್ಥಿ ವೇತನ ಸಿಗಲಿದೆ. ಸದ್ಯ ಸ್ವಸಹಾಯ ಗುಂಪು­ಗಳನ್ನು ಗುರಿಯಾಗಿಸಿಕೊಂಡು ಯೋಜನೆ ಅನುಷ್ಠಾನಗೊಳಿಸಿದ್ದು, ಮುಂದಿನ ದಿನಗಳಲ್ಲಿ ವಿಸ್ತರಿಸಲಾಗು­ವುದು ಎಂದರು.ಗೋಶಾಲೆ ಆರಂಭ: ಬರಪರಿಸ್ಥಿತಿ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆ ಡಿಸಿಸಿ ಬ್ಯಾಂಕ್‌ ವತಿಯಿಂದ 45 ಗೋಶಾಲೆ ತೆರೆಯಲಾಗಿದೆ. ಗೋ­ಶಾಲೆಗೆ ಜಾನುವಾರು ಕರೆತರುವ ರೈತರಿಗೆ ಊಟ, ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಶಾಸಕ ಕೆ.ಎನ್‌.ರಾಜಣ್ಣ ತಿಳಿಸಿದರು.ಬೇಸಿಗೆಯಲ್ಲಿ ಸಮರ್ಪಕ ವಿದ್ಯುತ್‌, ಕುಡಿಯುವ ನೀರು ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಮಧು­ಗಿರಿ ತಾಲ್ಲೂಕಿನಲ್ಲಿ ಬಗರ್‌ಹುಕುಂ ಸಮಿತಿಗಳನ್ನು ರಚಿಸಲಾಗಿದ್ದು, ರೈತರ ಅರ್ಜಿ ಪರಿಶೀಲಿಸಲಾಗುತ್ತಿದೆ.  ರಸ್ತೆ ಅಭಿವೃದ್ಧಿಪಡಿಸಲು ಲೋಕೋಪ­ಯೋಗಿ ಇಲಾಖೆ ಜತೆ ಚರ್ಚಿಸ­ಲಾಗಿದೆ. ತಾಲ್ಲೂಕಿನಲ್ಲಿ ₨ 30 ಕೋಟಿ ವೆಚ್ಚದ ಯುಜಿಡಿಗೆ ಮಂಜೂರಾತಿ ಸಿಕ್ಕಿದ್ದು, ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿದೆ ಎಂದು ಹೇಳಿದರು.ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಧುಗಿರಿ ತಾಲ್ಲೂಕು ಜಿಲ್ಲೆಯಲ್ಲೇ 2ನೇ ಸ್ಥಾನದಲ್ಲಿದೆ. ಆಸ್ತಿ ಸೃಷ್ಟಿಸುವ ಕಾಮಗಾರಿ­ಗಳಿಗೆ ಆದ್ಯತೆ ನೀಡಲಾಗು­ತ್ತಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನೆ­ಯಾದರೆ ಬಹಳಷ್ಟು ಸಮಸ್ಯೆಗಳು ಬಗೆಹರಿಯಲಿವೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry