ಸ್ವಸಾಮರ್ಥ್ಯದ ‘ಸ್ಮಾರ್ಟ್ ರೋವರ್‌’

7

ಸ್ವಸಾಮರ್ಥ್ಯದ ‘ಸ್ಮಾರ್ಟ್ ರೋವರ್‌’

Published:
Updated:

ವಾಷಿಂಗ್ಟನ್‌ (ಪಿಟಿಐ): ಇತರೆ ಗ್ರಹಗಳಿಗೆ ಹೋಗುವ ರೋವರ್‌ಗಳು ಇನ್ನು ಮುಂದೆ ತಮ್ಮ ನಿರ್ಧಾರವನ್ನು ತಾವೇ ತೆಗೆದು­ಕೊಂಡು ಬೇರೆ ಗ್ರಹಗಳಲ್ಲಿ ಪರ್ಯಟನೆ ಮಾಡ­ಲಿವೆ. ಅಲ್ಲದೇ, ಭೂಮಿಯಿಂದ ಯಾವುದೇ ಸೂಚನೆಯನ್ನು ಪಡೆಯದೆ ಅಲ್ಲಿನ ಚಿತ್ರಗಳನ್ನು ತೆಗೆದು, ಅವುಗಳನ್ನು ವೈಜ್ಞಾನಿಕ ವಿಶ್ಲೇಷಣೆಗೂ ಒಳಪಡಿಸಿ ಮಾಹಿತಿ ನೀಡಲಿವೆ!.ಹೌದು, ಇದು ನಾಸಾ ಆವಿಷ್ಕರಿಸಿದ ನೂತನ ಸ್ಮಾರ್ಟ್‌ ಕ್ಯಾಮೆರಾ ವ್ಯವಸ್ಥೆಯಿಂದ ಸಾಧ್ಯ ವಾಗಲಿದೆ ಎನ್ನುವುದು ಸಂಶೋಧಕರ ಅಭಿಪ್ರಾಯ.

ನೂತನ ರೋವರ್‌ಗಳು ಬೇರೆ ಗ್ರಹಗಳಿಗೆ ಹೋದ ತಕ್ಷಣ  ಅಲ್ಲಿನ ಛಾಯಾ ಚಿತ್ರಗಳನ್ನು ತೆಗೆದು­ಕೊಳ್ಳುವುದಲ್ಲದೇ, ಅವುಗಳ ಅರ್ಥ­ವೇನು ಎಂಬುದನ್ನೂ ವಿವರಿಸಲಿವೆ ಎಂದು ಸಂಶೋಧಕರು ತಿಳಿಸಿದ್ದಾರೆ.ಕ್ಯುರಿಯಾಸಿಟಿ ರೋವರ್‌ ಸದ್ಯ ಮಂಗಳಗ್ರಹದಲ್ಲಿ ಉತ್ತಮ ಕೆಲಸ ನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಜಗತ್ತಿನ ಇತರ ಕಡೆಗಳಲ್ಲಿ ಮಾಹಿತಿ ಕಲೆ ಹಾಕಲು ರೋವರ್‌ಗಳಿಗೆ ಇನ್ನೂ ಮುಂದು­­ವರಿದ ತಂತ್ರಜ್ಞಾನದ ಅವಶ್ಯಕತೆ ಇದೆ ಎಂದೂ ಅಭಿಪ್ರಾಯ­ಪಟ್ಟಿದ್ದಾರೆ. ಈ ನಿಟ್ಟಿನಲ್ಲಿ ಭವಿಷ್ಯದಲ್ಲಿ ರೋವರ್‌ ಮತ್ತು ಅಂತರಿಕ್ಷ ಉಪಗ್ರಹ ಗಳು ಭೂಮಿ­ಯಿಂದ  ಸೂಚನೆ ಪಡೆ ಯುವುದಕ್ಕೆ ಕಡಿಮೆ ಸಮಯ ಹಿಡಿಯ ಲಿದೆ ಎಂದು ಹಿರಿಯ ಸಂಶೋಧಕಿ ಕಿರಿ ವಾಗ್‌ಸ್ಟಫ್‌ ಮತ್ತು ಅವರ  ಸಹೋದ್ಯೋಗಿಗಳು ತಿಳಿಸಿದ್ದಾರೆ.ಎರಡು ಮಸೂರ (ಲೆನ್) ಒಳ ಗೊಂಡ ಆಧುನಿಕ ಕ್ಯಾಮೆರಾ­ವನ್ನು ಆವಿಷ್ಕರಿಸಿದ್ದಾರೆ. ಇದಕ್ಕೆ ಟೆಕ್ಸ್‌ಚ್ಯೂರ್ ಕ್ಯಾಮ್‌ ಎಂದು ಹೆಸರಿಟ್ಟಿದ್ದಾರೆ.

ಕ್ಯುರಿಯಾಸಿಟಿ ಮತ್ತು ಇತರೆ ರೋವರ್‌ ಈಗಾಗಲೇ ಚಿತ್ರಗಳನ್ನು ತೆಗೆ ಯುತ್ತಿವೆ. ಆದರೆ ಅವುಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಲು ಭೂಮಿಗೆ ಕಳುಹಿಸಲೇಬೇಕು. ಇದಕ್ಕೆ ಕೆಲ ಸಮಯ ಬೇಕಾಗುತ್ತಿದೆ. ಅಲ್ಲದೇ, ಅದಕ್ಕೆ ಕೆಲ ಅಡೆತಡೆಗಳೂ ಇವೆ. ಉದ್ದೇಶಿತ ಟೆಕ್ಸ್‌ಚ್ಯೂರ್ ಕ್ಯಾಮ್‌ ಚಿತ್ರದ ವಿಶ್ಲೇಷಣೆಯನ್ನು ತಾನೇ ಮಾಡಿ, ಭೂಮಿಗೆ ಮಾಹಿತಿ ಕಳುಹಿಸಲಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.ಬೇರೆ ಗ್ರಹದಲ್ಲಿರುವ ರೋವರ್‌ ಗಳಿಗೆ ವಿಜ್ಞಾನಿಗಳು ಪ್ರತಿನಿತ್ಯ ದಿನದ ಸೂಚಿ­ಗಳನ್ನು ಅವುಗಳಿಗೆ ರವಾನಿಸುತ್ತಿದ್ದರು. ನಂತರ ಅವುಗಳು ಸ್ವತಂತ್ರ್ಯವಾಗಿ ಅನೇಕ ಮೀಟರ್‌ಗಳ ದೂರ ಪಯರ್ಟನೆ ಮಾಡಿ ಚಿತ್ರಗಳನ್ನು ತೆಗೆಯುತ್ತಿ ದ್ದವು, ಮಣ್ಣಿನ ಮಾದರಿ ಗಾಗಿ ಭೂಮಿಯನ್ನು ಅಗೆಯುತ್ತಿದ್ದವು ನಂತರ ಮುಂದೆ ಸಾಗುತ್ತಿದ್ದವು.ಇತರೆ ಗ್ರಹದಲ್ಲಿರುವ ರೋವರ್‌ ಗಳಿಗೆ ಭೂಮಿಯಿಂದ ಮಾಹಿತಿ ರವಾನಿಸಲು ಸುಮಾರು 20 ನಿಮಿಷ ಬೇಕಾಗುತ್ತಿತ್ತು. ಅದರಿಂದ ಉತ್ತರ ಪಡೆಯಲು 20 ನಿಮಿಷ ಕಾಯ ಬೇಕಾಗಿತ್ತು. ಈ ಸಮಯದಲ್ಲಿ ರೋವರ್‌ ಅನ್ನು ನಿಯಂತ್ರಿಸುವುದೇ ಅಸಾಧ್ಯವಾಗುತ್ತಿತ್ತು. ಇತರೆ ಗ್ರಹಗಳ ಮೇಲಿರುವ ರೋವರ್‌ಗೆ ಮಾಹಿತಿ ಕಳುಹಿಸಲು,  ಪಡೆದು­ಕೊಳ್ಳಲು ಒಂದು ಕಕ್ಷೆಯಲ್ಲಿ ನಿಲ್ಲಿಸಿ ಉಪಗ್ರಹದ ಸಹಾಯದಿಂದ ಸಂಪರ್ಕಿಸಲಾಗುತ್ತಿತ್ತು. ಇದಕ್ಕಾಗಿ ಕೆಲ ಸಮಯ ಕಳೆಯಲಾಗುತ್ತಿತ್ತು.  ಮಂಗಳ ಗ್ರಹದ ಮೇಲಿರುವ ಕ್ಯುರಿಯಾಸಿಟಿ ರೋವರ್‌ ಸಹ ಇದೇ ವ್ಯವಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದೆ. ಇದರಿಂದ ಚಿತ್ರಗಳನ್ನು ಪಡೆದು ಕೊಳ್ಳಲು ಕೆಲ ಅಡೆತಡೆಗಳಿವೆ.‘ವಿಜ್ಞಾನಿಗಳ ನಿರ್ದೇಶನವಿಲ್ಲದೇ ರೋವರ್‌ ಇತರೆ ಗ್ರಹದಲ್ಲಿರುವ ವಿಶೇಷ ವಿಷಯದ ಬಗ್ಗೆ ಗ್ರಹಿಸಿ­ಕೊಂಡಲ್ಲಿ ಅದು ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಅನೇಕ ಚಿತ್ರಗಳನ್ನು ತೆಗೆದು ಕಳುಹಿಸಕೊಡಲಿದೆ. ಇದರಿಂದ ವಿಜ್ಞಾನಿಗಳು ಊಹಿಸಿ­ದಕ್ಕಿಂತಲೂ ಹೆಚ್ಚಿನ ಮಾಹಿತಿಯನ್ನು ರೋವರ್‌ ನಿಂದ ತಿಳಿದುಕೊಳ್ಳಬಹುದಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry