ಭಾನುವಾರ, ಫೆಬ್ರವರಿ 28, 2021
23 °C
ಭ್ರಮರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಜ್ಞಾನಿ ಪ್ರೊ.ಕೃಷ್ಣಸ್ವಾಮಿ ವಿಜಯರಾಘವನ್‌ ಅಭಿಮತ

ಸ್ವಸ್ಥ ಸಮಾಜಕ್ಕೆ ವಿಜ್ಞಾನ ಅಳವಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ವಸ್ಥ ಸಮಾಜಕ್ಕೆ ವಿಜ್ಞಾನ ಅಳವಡಿಕೆ

ಮೈಸೂರು: ‘ವಿಜ್ಞಾನವನ್ನು ಪರಿಣಾಮ ಕಾರಿಯಾಗಿ ಅಳವಡಿಸಿಕೊಂಡ ಕಾರಣ ದಿಂದಲೇ ಇಂದು ಆರೋಗ್ಯಪೂರ್ಣ ಸಮಾಜವನ್ನು ನಾವು ಹೊಂದಿರಲು ಸಾಧ್ಯವಾಗಿದೆ’ ಎಂದು ಕೇಂದ್ರ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಪ್ರೊ.ಕೃಷ್ಣಸ್ವಾಮಿ ವಿಜಯರಾಘವನ್‌ ಅಭಿಪ್ರಾಯಪಟ್ಟರು.ವೈ.ಟಿ. ಮತ್ತು ಮಾಧುರಿ ತಾತಾಚಾರಿ ಅವರ ಭ್ರಮರ ಟ್ರಸ್ಟ್‌ ಮೈಸೂರು ವಿವಿ ರಾಣಿ ಬಹದ್ದೂರ್‌ ಸಭಾಂಗಣದಲ್ಲಿ ಮಂಗಳವಾರ ನಡೆದ ಭ್ರಮರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ‘ಜೀವಮಾನದ ಸಾಧನೆಗೆಗಾಗಿ ಭ್ರಮರ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದರು.‘ಮಾನವಕುಲ ಈಗಿನ 150 ವರ್ಷ ಗಳಲ್ಲಿ ನಮ್ಮ ವಿಶ್ವವನ್ನು ಅತಿ ಹೆಚ್ಚು ಅರ್ಥ ಮಾಡಿಕೊಂಡಿದೆ. ಚಾರ್ಲ್ಸ್‌ ಡಾರ್ವಿನ್‌ ಮಂಡಿಸಿರುವ ಜೀವವಿಕಾಸ ಸಿದ್ಧಾಂತ ಇದನ್ನು ಸಮರ್ಥವಾಗಿ ಅರ್ಥ ಮಾಡಿಸುತ್ತದೆ. ಜೀವ ವಿಕಾಸ ಹಾಗೂ ನಾಗರಿಕತೆ ಒಂದಕ್ಕೊಂದು ಸಂಬಂಧ ಹೊಂದಿವೆ. ಇತಿಹಾಸದ ದಿನಗಳನ್ನು ನೋಡಿದರೆ, ಅನೇಕ ಕಾಯಿಲೆಗಳು, ದಂಗೆಗಳಿಂದಲೇ ಜನ ಅಸುನೀಗು ತ್ತಿದ್ದರು. ಆದರೆ, ವಿಜ್ಞಾನದ ಸುಧಾರಣೆ ಆದಂತೆ ಇಂದು ಬದುಕಿನ ಮಟ್ಟವೂ ಸುಧಾರಿಸಿದೆ’ ಎಂದು ವಿವರಿಸಿದರು.ವಿಶ್ವ ರೂಪಗೊಂಡ ಬಗೆ ಅರ್ಥ ಮಾಡಿಕೊಳ್ಳಲು ಮನುಷ್ಯನ ಪ್ರಯತ್ನ ನಿರಂತರವಾಗಿದೆ. ವಿಜ್ಞಾನ ವನ್ನು ಅರ್ಥ ಮಾಡಿಕೊಳ್ಳಲು ಶುರುವಾದಂತೆ ಪರಿಸರದ ಒಗಟುಗಳೂ ಒಂದೊಂದಾಗಿ ಬಿಡಿಸಿಕೊಳ್ಳುತ್ತಿವೆ.  ಸುಸ್ಥಿರ, ಮಾನವೀಯ ಸಮಾಜವನ್ನು ನಿರ್ಮಿಸಲು ಇದು ಸಹಕಾರಿಯಾಗಿದೆ ಎಂದರು.

ನಂತರ ಮಾತನಾಡಿದ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ.ಎಸ್‌. ರಂಗಪ್ಪ, ಸಾಧಕರನ್ನು ಗುರುತಿಸುವುದು ಸಮಾಜದ ಜವಾಬ್ದಾರಿ ಯಾಗಬೇಕು. ಇದರಿಂದ ವ್ಯಕ್ತಿಗಳಿಂದ ಹೆಚ್ಚಿನ ಸಮಾಜಪರ ಕಾರ್ಯವನ್ನು ನಿರೀಕ್ಷಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ‘ಭ್ರಮರ ಟ್ರಸ್ಟ್‌’ ಅನ್ನು ಶ್ಲಾಘಿಸಬೇಕು ಎಂದರು.ಪತ್ರಿಕೋದ್ಯಮಿ ಕೆ.ಬಿ. ಗಣಪತಿ ಮಾತನಾಡಿ, ವ್ಯಕ್ತಿಯೊಬ್ಬ ಜೀವನದಲ್ಲಿ ಎಷ್ಟೇ ಎತ್ತರದ ಸ್ಥಾನಕ್ಕೆ ತಲುಪಿದರೂ, ಮಾನವೀಯತೆಯನ್ನು ಬಿಡಬಾರದು. ಮಾನವೀಯತೆಯನ್ನು ಬಿಟ್ಟ ವ್ಯಕ್ತಿಯ ಸಾಧನೆ ನಗಣ್ಯ ಎಂದು ಅಭಿಪ್ರಾಯ ಪಟ್ಟರು. ಆದಿತ್ಯ ಅಧಿಕಾರಿ ಆಸ್ಪತ್ರೆಯ ನಿರ್ದೇಶಕ ಡಾ.ಎನ್‌. ಚಂದ್ರಶೇಖರ್‌ ಅವರಿಗೆ ‘ಮನುಕುಲ ಸೇವಾ ಜೀವನ ಸಾಧನೆಗೆ ಭ್ರಮರ ಪ್ರಶಸ್ತಿ’ ನೀಡಲಾ ಯಿತು. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಪ್ರೊ.ದೇಸಿ ರಾಜ್‌ ನರಸಿಂಹರಾವ್‌ ಅತಿಥಿಯಾಗಿ ಭಾಗವಹಿಸಿದ್ದರು. ಟ್ರಸ್ಟಿಗಳಾದ ಮಾಧುರಿ ತಾತಾಚಾರಿ, ಪ್ರೊ.ಆರ್‌. ಶ್ರೀನಿವಾಸನ್‌ ಭಾಗವಹಿಸಿದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.