ಶುಕ್ರವಾರ, ಜೂನ್ 25, 2021
21 °C

ಸ್ವಸ್ಥ ಸಮಾಜ ನಿರ್ಮಾಣಕ್ಕೆ ಮಠಗಳ ಕೊಡುಗೆ ಅಪಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ವಸ್ಥ ಸಮಾಜ ನಿರ್ಮಾಣಕ್ಕೆ ಮಠಗಳ ಕೊಡುಗೆ ಅಪಾರ

ಲಿಂಗಸುಗೂರ: ಜಾತಿ ಜಾತಿ ಹಾಗೂ  ಧರ್ಮ ಧರ್ಮಗಳ ಮಧ್ಯೆ ಗೊಂದಲ ಸೃಷ್ಟಿಸಿ  ಸಮಾಜದಲ್ಲಿ ಅಶಾಂತಿ ಮೂಡಿಸುತ್ತಿರುವುದು ವಿಷಾದನೀಯ ಸಂಗತಿ. ಅಂತಹ ದುಷ್ಟ ಶಕ್ತಿಗಳನ್ನು ತಡೆಗಟ್ಟಿ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಈ ನಾಡಿನ ಮಠ ಮಾನ್ಯಗಳು ಸಾಕಷ್ಟು ಕೊಡುಗೆ ನೀಡಿರುವುದು ಸ್ಮರಣೀಯ ಎಂದು ಶಾಸಕ ಮಾನಪ್ಪ ವಜ್ಜಲ ಹೇಳಿದರು.ಕರಡಕಲ್ಲ ಗ್ರಾಮದ ಸಿದ್ಧಾರೂಢ ಮಠದಲ್ಲಿ ಭಾನುವಾರ ಆಯೋಜಿಸಿದ್ದ 10ನೇ ವೇದಾಂತ ಪರಿಷತ್, ಗರ್ಭಗುಡಿಯ ಉದ್ಘಾಟನೆ, ಸಿದ್ಧಾರೂಢರ ಮೂರ್ತಿ ಪ್ರತಿಷ್ಠಾಪನೆ, ಸಾಮೂಹಿಕ ವಿವಾಹಗಳ ಧಾರ್ಮಿಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.ಸಮಾಜದ ಪ್ರತಿಯೋರ್ವರ ಸಹಾಯ, ಸಹಕಾರ ಮಠಗಳಿಗೆ ಅವಶ್ಯವಾಗಿವೆ. ಶ್ರೀಗಳ ಆಶೀರ್ವಾದದಿಂದ ಏನೆಲ್ಲಾ ಸಾಧನೆ ಸಾಧ್ಯ ಎಂದು ಮಠಗಳ ಕೊಡುಗೆಗಳ ಬಗ್ಗೆ ಬಣ್ಣಿಸಿದರು.ಸಾನಿಧ್ಯ ವಹಿಸಿದ್ದ ಮುಂಬೈನ ಸಹಜಾನಂದ ಅವಧೂತರು, ಜಿಲ್ಲಾ ಪಂಚಾಯಿತಿ ಸದಸ್ಯರಾದ ಭೂಪನಗೌಡ ಕರಡಕಲ್ಲ, ಎಚ್.ಬಿ. ಮುರಾರಿ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪಾಮಯ್ಯ ಮುರಾರಿ ಮಾತನಾಡಿ ಸಿದ್ಧಾರೂಢರ ಮಠದಿಂದ ಪ್ರತಿವರ್ಷ ಸಾಮೂಹಿಕ ವಿವಾಹ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ನಡೆದು ಬರುತ್ತಿರುವುದು ಸ್ವಾಗತಾರ್ಹ. ಮುಂದಿನ ದಿನಗಳಲ್ಲಿ ಶೈಕ್ಷಣಿಕ ಅಭಿವೃದ್ಧಿ ಉದ್ದೇಶದಿಂದ ಶ್ರೀಮಠವು ಒಂದು ಹೆಜ್ಜೆ ಮುಂದೆ ಬರುವಂತೆ ಸಲಹೆ ಮಾಡಿದರು.ಕರಡಕಲ್ಲನ ಕೃಷ್ಣಾನಂದ ಅವಧೂತರು, ಕೋಳಿಗುಡ್ಡದ ಸ್ವರೂಪಾನಂದ ಸ್ವಾಮೀಜಿ, ಮಾರಲದಿನ್ನಿಯ ಅಮರೇಶ ಶರಣರು ನೇತೃತ್ವ ವಹಿಸಿದ್ದರು. ಪುರಸಭೆ ಅಧ್ಯಕ್ಷೆ ದುರುಗಮ್ಮ ರಾಮಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.ಮುಖಂಡರಾದ ಗಿರಿಮಲ್ಲನಗೌಡ ಕರಡಕಲ್ಲ, ಶರಣಪ್ಪ ಮೇಟಿ, ರಮೇಶ ಜೋಷಿ, ಶರಣಗೌಡ ಮಾಲಿಪಾಟೀಲ, ಗುರುಲಿಂಗಪ್ಪ ಹೊಸಮನಿ, ದೊಡ್ಡನಗೌಡ ಹೊಸಮನಿ, ಲಾಲಅಹ್ಮದಸಾಬ, ರಾಮಣ್ಣ ಹಿರೇಮನಿ, ಹನುಮಂತಪ್ಪ ವೆಂಕಟಾಪುರ.ಗುಂಡಪ್ಪ ನಾಯಕ, ದೊಡ್ಡಪ್ಪ ಮಸ್ಕಿ, ಚೆನ್ನಪ್ಪಗೌಡ, ಲಿಂಗಪ್ಪ ಮನಗುಳಿ, ಮಲ್ಲಯ್ಯ ಬಳ್ಳ, ವೀರೇಶ ಹೂವಿನಭಾವಿ, ರುದ್ರಪ್ಪ ಬ್ಯಾಗಿ, ಶಿವರಾಜ ಬಾಳೆಗೌಡ್ರ, ಸೋಮಶೇಖರ ಐದನಾಳ, ಗ್ಯಾನಪ್ಪ ಕಟ್ಟಿಮನಿ, ಎಂ.ಎಸ್. ಪಾಟೀಲ, ಪ್ರಕಾಶ ಬಾಳೆಗೌಡ್ರ, ವೆಂಕಟೇಶ, ಚೆನ್ನಾರೆಡ್ಡಿ, ನಾಗರಾಜ ತಿಪ್ಪಣ್ಣ, ಪಾರ್ವತೆಮ್ಮ ಕರಡಕಲ್ಲ, ಅಮರೇಶ ಪರಂಗಿ, ಶಾಂತಮ್ಮ ಬೆಂಡೋಣಿ, ಮಹಾಂತೇಶ, ಎಂ.ಆರ್. ಪಾಟೀಲ ಪಾಲ್ಗೊಂಡಿದ್ದರು.ಈ ಸಂದರ್ಭದಲ್ಲಿ ಸಿದ್ಧಾರೂಢರ ಗರ್ಭ ಗುಡಿಯ ಉದ್ಘಾಟನೆ, ಸಿದ್ಧಾರೂಢರ ಮೂರ್ತಿ ಪ್ರತಿಷ್ಠಾಪನೆ ಜೊತೆ ಜೊತೆಗೆ ಸಾಮೂಹಿಕ ವಿವಾಹದಲ್ಲಿ 21 ಜೋಡಿ ವಧು-ವರರು ಹಸೆಮಣೆ ಏರಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.