ಮಂಗಳವಾರ, ಮೇ 11, 2021
20 °C

ಸ್ವಾಗತಕಾರಿಣಿ, ಗುತ್ತಿಗೆದಾರ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಕೊನೇನ ಅಗ್ರಹಾರದಲ್ಲಿ ಬುಧವಾರ ರಾತ್ರಿ ಶ್ರೀದೇವಿ (27) ಎಂಬುವರು ನೇಣು ಹಾಕಿಕೊಂಡಿದ್ದರೆ, ಸುಬ್ಬಯ್ಯನ ಪಾಳ್ಯದಲ್ಲಿ ರಮಣ (32) ಎಂಬ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಖಾಸಗಿ ಆಸ್ಪತ್ರೆಯೊಂದರಲ್ಲಿ ಸ್ವಾಗತ ಕಾರಿಣಿಯಾಗಿದ್ದ ಶ್ರೀದೇವಿ, ಕೆಲಸ ಮುಗಿಸಿಕೊಂಡು ರಾತ್ರಿ 11.30ರ ಸುಮಾರಿಗೆ ಮನೆಗೆ ಬಂದಿದ್ದಾರೆ. ಮನೆಯವರೆಲ್ಲ ಮಲಗಿದ ನಂತರ ತಮ್ಮ ಕೋಣೆಗೆ ತೆರಳಿ ದುಪ್ಪಟ್ಟ ದಿಂದ ನೇಣು ಹಾಕಿಕೊಂಡಿದ್ದಾರೆ. ಕೆಲಸಕ್ಕೆ ಹೋಗಿದ್ದ ಶ್ರೀದೇವಿ ಅವರ ಸಹೋದರ ರಾತ್ರಿ ಒಂದು ಗಂಟೆಗೆ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಆಟೊ ಚಾಲಕ ರಾಜೇಶ್ ಎಂಬು ವರನ್ನು ವಿವಾಹವಾಗಿದ್ದ ಶ್ರೀದೇವಿ, 2 ವರ್ಷಗಳಿಂದ ಪತಿಯಿಂದ ದೂರವಾ ಗಿದ್ದರು. ಅಲ್ಲದೇ, ಇತ್ತೀಚೆಗೆ ಅವರ ತಂದೆ-ತಾಯಿ ಇಬ್ಬರೂ ಸಾವನ್ನಪ್ಪಿದ್ದ ರಿಂದ ಅವರು ಖಿನ್ನರಾ ಗಿದ್ದರು ಎಂದು ಕುಟುಂಬ ಸದಸ್ಯರು ಹೇಳಿಕೆ ನೀಡಿದ್ದಾಗಿ ಪೊಲೀಸರು ಹೇಳಿದ್ದಾರೆ.`ನನ್ನ ಸಾವಿಗೆ ಯಾರೂ ಕಾರಣರಲ್ಲ. ಪೋಷಕರ ಸಾವಿನ ನಂತರ ಒಂಟಿತನ ಕಾಡುತ್ತಿದೆ. ಹೀಗಾಗಿ, ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ' ಎಂದು ಶ್ರೀದೇವಿ ಪತ್ರ ಬರೆದಿಟ್ಟಿದ್ದಾರೆ.  ಬಾಣಸವಾಡಿ: ನಗರದ ಸುಬ್ಬಯ್ಯನ ಪಾಳ್ಯದ ಒಂದನೇ ಅಡ್ಡರಸ್ತೆಯಲ್ಲಿ ಬುಧವಾರ ರಮಣ (32) ಎಂಬುವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳು ಇದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.