ಸ್ವಾತಂತ್ರ್ಯಕ್ಕೆ ಪರಿಮಿತಿಯ ಚೌಕಟ್ಟು

7

ಸ್ವಾತಂತ್ರ್ಯಕ್ಕೆ ಪರಿಮಿತಿಯ ಚೌಕಟ್ಟು

Published:
Updated:

ನವದೆಹಲಿ (ಪಿಟಿಐ): `ಮುಕ್ತ ಸ್ವಾತಂತ್ರ್ಯ~ ಎಂಬುದು ಇಲ್ಲ. ಸಾರ್ವಜನಿಕ ಸುವ್ಯವಸ್ಥೆಯ ದೃಷ್ಟಿಯಿಂದ ಸ್ವಾತಂತ್ರ್ಯವು `ವಿವೇಚನಾಯುಕ್ತ ನಿರ್ಬಂ~ಕ್ಕೆ ಒಳಪಟ್ಟಿರುತ್ತದೆ ಎಂದು ಭಾರತೀಯ ಪತ್ರಿಕಾ ಮಂಡಳಿಯ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಖಟ್ಜು  ಅಭಿಪ್ರಾಯ ಪಟ್ಟಿದ್ದಾರೆ.ಲೇಖಕ ಸಲ್ಮಾನ್ ರಷ್ದಿ ಅವರ ಭಾರತ ಭೇಟಿ ವಿಷಯ ವಿವಾದಕ್ಕೆ ಆಸ್ಪದವಾದ ಹಿನ್ನೆಲೆಯಲ್ಲಿ, `ಮುಕ್ತ ಸ್ವಾತಂತ್ರ~್ಯ ಎಂಬುದು ಜಾರಿಯಲ್ಲಿ ಇದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಕಿರು ಬ್ಲಾಗಿಂಗ್ ತಾಣ ಟ್ವಿಟರ್‌ನಲ್ಲಿ ಕೇಳಿದ ಪ್ರಶ್ನೆಗೆ ಖಟ್ಜು ಹೀಗೆ ಹೇಳಿದ್ದಾರೆ.`ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಎಲ್ಲಾ ಸ್ವಾತಂತ್ರ್ಯಗಳೂ ವಿವೇಚನಾಶೀಲವಾದ ಕಟ್ಟುಪಾಡಿಗೆ ಒಳಪಟ್ಟಿರುತ್ತವೆ~ ಎಂದು ಖಟ್ಜು ಟ್ವಿಟರ್ ಪುಟದಲ್ಲಿ ಬರೆದಿದ್ದಾರೆ.ಮನುಷ್ಯ ಸಾಮಾಜಿಕ ಜೀವಿಯಾಗಿರುವುದರಿಂದ ಸ್ವಾತಂತ್ರ್ಯ ಮತ್ತು ಅದರ ಪರಿಮಿತಿಗಳ ನಡುವೆ ಸಮತೋಲವನ್ನು ಸಾಧಿಸುವ ಅಗತ್ಯವಿದೆ.  ಅಮೆರಿಕದಲ್ಲಿ ಕೂಡ `ಮುಕ್ತ ಸ್ವಾತಂತ್ರ್ಯ~ ಎಂಬುದಿಲ್ಲ ಎಂದು ಪ್ರತಿಪಾದಿಸಿದ್ದಾರೆ.ಅಮೆರಿಕ ಮತ್ತು ಭಾರತದಲ್ಲಿ ಭಿನ್ನ ವ್ಯವಸ್ಥೆಗಳಿವೆ. `ಅಲ್ಲಿ ಸ್ವೀಕಾರ್ಹವಾಗುವ ವಿಚಾರಗಳು, ಇಲ್ಲೂ ಸ್ವೀಕಾರ್ಹವಾಗುತ್ತವೆ ಎನ್ನಲು ಸಾಧ್ಯವಿಲ್ಲ~ ಎಂದು ಅಮೆರಿಕದ ನಾಗರಿಕರಿಗೆ ನೀಡಿರುವ ಹಕ್ಕುಗಳ ಬಗ್ಗೆ ಕೇಳಿದ ಪ್ರಶ್ನೆಯನ್ನು ಉಲ್ಲೇಖಿಸಿ ಹೇಳಿದ್ದಾರೆ.ವ್ಯಕ್ತಿಯೊಬ್ಬನ ವಾಕ್ ಸ್ವಾತಂತ್ರ್ಯವು ಸಾರ್ವಜನಿಕ ಹಿತಾಸಕ್ತಿಯೊಂದಿಗೆ ಸಮನ್ವಯ ಸಾಧಿಸಬೇಕು ಎಂದು ಇತ್ತೀಚೆಗೆ ಅಭಿಪ್ರಾಯಪಟ್ಟಿದ್ದ ಖಟ್ಜು, ಸಂವಿಧಾನದ ಪರಿಚ್ಛೇದ 19 (2)ವು ದೇಶದ ಭದ್ರತೆ ಮತ್ತು  ಸಾರ್ವಜನಿಕ ಸುವ್ಯವಸ್ಥೆಯ ದೃಷ್ಟಿಯಿಂದ ವಾಕ್ ಸ್ವಾತಂತ್ರ್ಯಕ್ಕೆ  `ವಿವೇಚನಾಯುಕ್ತ ನಿರ್ಬಂಧ~ ಹೇರಲು ಅವಕಾಶ ಕಲ್ಪಿಸುತ್ತದೆ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry