ಸ್ವಾತಂತ್ರ್ಯಯೋಧರ ಸ್ಮ ರಣೆ ಅಗತ್ಯ: ಹೊಸಕೇರಿ

7

ಸ್ವಾತಂತ್ರ್ಯಯೋಧರ ಸ್ಮ ರಣೆ ಅಗತ್ಯ: ಹೊಸಕೇರಿ

Published:
Updated:

ಗುಳೇದಗುಡ್ಡ: ದೇಶಕ್ಕೆ ಪ್ರಾಮಾಣಿಕ ಸೇವೆ ಸಲ್ಲಿಸಿದ ಸ್ವಾತಂತ್ರ್ಯಯೋಧರ ಹಾಗೂ ಹಿರಿಯರ ಪರಂಪರೆಯನ್ನು ಸ್ಮರಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಧಾರವಾಡ, ಗಾಂಧಿ ಶಾಂತಿ ಪ್ರತಿಷ್ಠಾನದ ಕಾರ್ಯದರ್ಶಿ ಬಸವಪ್ರಭು ಹೊಸಕೇರಿ ಅಭಿಪ್ರಾಯಪಟ್ಟರು.ಶುಕ್ರವಾರ ಭಂಡಾರಿ ಹಾಗೂ ರಾಠಿ ಕಾಲೇಜಿನ ಸಭಾಭವನದಲ್ಲಿ ಸ್ವಾತಂತ್ರ್ಯ­ಯೋಧರು ಹಾಗೂ ಮಾಜಿ ಶಾಸಕ ದಿ. ಮಡಿವಾಳಪ್ಪ ರುದ್ರಪ್ಪ ಪಟ್ಟಣಶೆಟ್ಟಿ ಅವರ ಜನ್ಮ ಶತಮಾನೋತ್ಸವ ನಿಮಿತ್ತ ಆಯೋಜಿಸಿದ್ಧ ವಿಚಾರಗೋಷ್ಠಿಯಲ್ಲಿ ‘ಗಾಂಧೀಜಿ ಪ್ರಸ್ತುತತೆ’ ಕುರಿತು ಅವರು ಮಾತನಾಡಿದರು.ಮರಡಿಮಠದ ಕಾಡಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ವಿಚಾರ­ಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸ್ವಾತಂತ್ರ್ಯಯೋಧರು ಮುದಕಪ್ಪ ಕಲಬುರ್ಗಿ ಅವರು ‘ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಖಂಡ ವಿಜಾಪುರ ಜಿಲ್ಲೆಯ ಪಾತ್ರ’ ಕುರಿತು ಮಾತನಾಡಿದರು.ಅತಿಥಿಗಳಾಗಿ ಪಿ.ಇ ಟ್ರಸ್ಟ್ ದ ಪ್ರಧಾನ ಕಾರ್ಯದರ್ಶಿ ಜಿ.ಆರ್. ಭಟ್ಟದ, ರವೀಂದ್ರ ಪಟ್ಟಣಶೆಟ್ಟಿ. ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಪಿ. ನಾಡಗೌಡ ಮಾತನಾಡಿದರು. ಮಾಜಿ ಶಾಸಕ ಮಲ್ಲಿಕಾರ್ಜುನ ಬನ್ನಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.  ಈ ಸಂದರ್ಭದಲ್ಲಿ ಬಸವಪ್ರಭು ಹೊಸಕೇರಿ ಅವರನ್ನು ಸನ್ಮಾನಿಸಿದರು.ಅಂದಾನಪ್ಪ ಅಂಗಡಿ. ಶಂಕರ ಎಲ್. ಸಿಂಗದ, ಅಶೋಕ ಹೆಗಡಿ ಉಪಸ್ಥಿತರಿದ್ದರು.

ಪ್ರಾಚಾರ್ಯ ಬಿ. ಎ. ತೆಲಸಂಗ ಸ್ವಾಗತಿಸಿದರು. ನಿವೃತ್ತ ಪ್ರಚಾರ್ಯ ಶಿವಾನಂದ ಎಸ್. ನಾಯನೇಗಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry