ಸ್ವಾತಂತ್ರ್ಯ’ ಪಡೆಯದ ಹೋರಾಟಗಾರರ ಭವನ!

7
ರಂಗಮಂದಿರ ರಾಮಾಯಣ ಭಾಗ 5

ಸ್ವಾತಂತ್ರ್ಯ’ ಪಡೆಯದ ಹೋರಾಟಗಾರರ ಭವನ!

Published:
Updated:

ಗುಲ್ಬರ್ಗ:  ನಗರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ. ಸಿದ್ದಯ್ಯ ಪುರಾಣಿಕ ಸುವರ್ಣ ಸಾಂಸ್ಕೃತಿಕ ಸಮುಚ್ಚಯ­ದಲ್ಲಿ 3ಕೋಟಿ ರೂಪಾಯಿ ವೆಚ್ಚದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಭವನ ನಿಮಾರ್ಣಗೊಳ್ಳುತ್ತಿದೆ.ರಂಗಮಂದಿರದ ಮಾದರಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಬೃಹತ್‌ ಭವನ ಪೂರ್ಣಗೊಂಡರೆ ಇಲ್ಲಿ ಸಾಂ­ಸ್ಕೃತಿಕ ಚಟುವಟಿಕೆಗಳಿಗೆ ಪೂರಕವಾಗ­ಬಹು­ದೆನ್ನುವುದು ಇಲ್ಲಿನ ಕಲಾ ಪ್ರೇಮಿಗಳ ಆಸೆ.2009 ಸೆಪ್ಟೆಂಬರ್‌ 17ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ಈ ಭವನದ ಭೂಮಿ ಪೂಜೆ ನೆರವೇರಿಸಿದ್ದರು. 2007–08ನೇ ಆಯವ್ಯಯದಲ್ಲಿ ಅಂದಿನ ಸರ್ಕಾರ ಗುಲ್ಬರ್ಗದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಭವನ ನಿಮಿರ್ಸಲು ರೂ. 3ಕೋಟಿ ಮೀಸಲಿರಿಸಿತ್ತು.‘ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಬರುವ ಸ್ವಾತಂತ್ರ್ಯ ಹೋರಾ­ಟ­ಗಾರರ ಭವನದ ಕಾಮಗಾರಿ 2011 ಜನವರಿ 7ರಿಂದ ಆರಂಭವಾಗಿದೆ. ಈ ಕಟ್ಟಡಕ್ಕೆ ಒಟ್ಟು ಸುಮಾರು 4.16 ಕೋಟಿ ವೆಚ್ಚ ಅಂದಾಜಿಸಲಾಗಿದ್ದು, ಈಗಾಗಲೇ 3ಕೋಟಿ ರೂಪಾಯಿ ಖರ್ಚಿನಲ್ಲಿ ಕಾಮಗಾರಿ ನಡೆಸಲಾಗಿದೆ. ಭವನದ ಶೇ 80ರಷ್ಟು ಕಾಮಗಾರಿ ಪೂರ್ಣಗೊಂ­ಡಿದೆ. ಇದು ರಂಗಮಂದಿರದ ವಿನ್ಯಾಸ­ದಲ್ಲಿ ನಿರ್ಮಾಣಗೊಳ್ಳುತ್ತಿದೆ. ವೇದಿಕೆ , ಗ್ರೀನ್‌ ರೂಂ. ಬಾಲ್ಕನಿ ಎಲ್ಲಾ ಇರು­ವಂತೆ ಸುಸಜ್ಜಿತ ಭವನ ನಿರ್ಮಿಸಲಾ­ಗುತ್ತಿದೆ.ನಗರದ ಎಸ್‌.ಎಂ. ಪಂಡಿತ ರಂಗಮಂದಿರದ ಮಾದರಿಯಲ್ಲೆ ಇದು ನಿರ್ಮಾಣಗೊಳ್ಳುತ್ತಿದ್ದರೂ ಅದಕ್ಕಿಂತಲೂ ದೊಡ್ಡದಿದೆ. ವಿನ್ಯಾಸದಲ್ಲೂ ವ್ಯತ್ಯಾಸವಿದೆ. ಇದನ್ನು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ರಂಗ ಚಟುವಟಿಕೆಗಳಿಗೂ ಬಳಸಬಹುದು. ಇದರ ಸಭಾಂಗಣಕ್ಕೆ ಆಂರಭದ ನಕಾಶೆಗಿಂತ ಭಿನ್ನವಾಗಿ ಗುಮ್ಮಟದ ರೀತಿಯ ಛಾವಣಿ ನಿರ್ಮಿಸಲಾಗು­ವುದು, ಇದಕ್ಕಾಗಿ ಹೆಚ್ಚುವರಿ ರೂ. 1ಕೋಟಿ ಬೇಕಾಗಬಹುದು. ಈಗಾಗಲೇ ಈ ಹಣ ಮಂಜೂರಾಗಿದೆ.ಇನ್ನು ಅಂದಾಜು ಪಟ್ಟಿ ಮಾಡಿ , ಟೆಂಡರ್‌ ಕರೆದು ಕಾಮಗಾರಿ ನಡೆಸಬೇಕಾಗಿದೆ. ಆದ್ದರಿಂದ ಈ ಕಟ್ಟಡ ಪೂರ್ಣಗೊಳ್ಳಲು ಇನ್ನೂ ಸುಮಾರು 9 ತಿಂಗಳಷ್ಟು ಕಾಲ ಬೇಕಾಗಬಹುದು ಎನ್ನುತ್ತಾರೆ’ ಲೋಕೋ­ಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಐ.ಎಸ್‌. ಮಹಗಾಂವಕರ್‌.‘ಮುಖ್ಯವಾಗಿ ಸ್ವಾತಂತ್ರ್ಯ ಯೋಧರಿಗೆ ಗೌರವ ನೀಡಿ ಈ ಭವನ ನಿರ್ಮಿಸಲಾಗುತ್ತಿದೆ.

ಅವರ ವಿನೋದ ಕಾರ್ಯಕ್ರಮಗಳಿಗೆ ಇದನ್ನು ನೀಡುವ ಉದ್ದೇಶದಿಂದ ಕಟ್ಟಲಾಗುತ್ತಿದೆ’ ಎಂದೂ ಅವರು ತಿಳಿಸುತ್ತಾರೆ. ಒಟ್ಟಿನಲ್ಲಿ ಈ ಸ್ವಾತಂತ್ರ್ಯ ಹೋರಾಟ­ಗಾರರ ಭವನ ಪೂರ್ಣ­ಗೊಂಡರೆ ಗುಲ್ಬರ್ಗದಲ್ಲೇ ಅತೀ ದೊಡ್ಡ ಮತ್ತು ಸುಸಜ್ಜಿತ ಭವನವಾಗಬಹುದು.‘ಸ್ವಾತಂತ್ರ್ಯ ಯೋಧರಿಗೆ ಪ್ರಯೋಜನವಿಲ್ಲ’

‘ನಗರದ ಹಳೆ ಜೈಲ್‌ ಬಳಿ ಸ್ವಾತಂತ್ರ್ಯ ಯೋಧರ ಸ್ಮಾರಕ ಭವನ ನಿರ್ಮಾಣವಾಗಬೇಕೆಂಬುದು ನಮ್ಮೆಲ್ಲರ ಬೇಡಿಕೆ.

ನಿಜಾಮರ ಕಾಲದಲ್ಲಿ ಇಲ್ಲೇ ಸ್ವಾತಂತ್ರ್ಯ ಯೋಧರನ್ನು ಗಲ್ಲಿಗೇರಿಸ­ಲಾಗಿತ್ತು. ಈ ಕಾರಣಕ್ಕಾಗಿ ಇಲ್ಲೇ ಭವನ ನಿರ್ಮಾಣವಾಗ­ಬೇಕೆಂದು ಸಂಬಂಧಪಟ್ಟವರಿಗೆ ಹಲವು ವರ್ಷಗಳಿಂದ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.ಇದಕ್ಕಾಗಿ 1993ರಲ್ಲಿ ಹಣವೂ ಬಿಡುಗಡೆಯಾಗಿತ್ತು. ಆದರೆ ಇದುವರೆಗೆ ಯಾವುದೇ ಕ್ರಮಕೈಗೊಳ್ಳಲಿಲ್ಲ. ಈಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ. ಸಿದ್ದಯ್ಯ ಪುರಾಣಿಕ ಸುವರ್ಣ ಸಾಂಸ್ಕೃತಿಕ ಸಮುಚ್ಚಯದಲ್ಲಿ ನಿರ್ಮಿಸುತ್ತಿರುವ ಸ್ವಾತಂತ್ರ್ಯ ಹೋರಾಟಗಾರರ ಭವನಕ್ಕೆ ನಾವು ಹೋಗಲ್ಲ.ನಗರದಿಂದ ತುಂಬಾ ದೂರದಲ್ಲಿ ಇದನ್ನು ನಿರ್ಮಿಸಿರುವುದರಿಂದ ಸ್ವಾತಂತ್ರ್ಯಯೋಧರಿಗೆ ಯಾವುದೇ ಪ್ರಯೋಜನವಿಲ್ಲ. ಕೊನೆ ಪಕ್ಷ ನಗರದಲ್ಲಾದರೂ ನಿರ್ಮಿಸಿದ್ದರೆ ಸ್ವಾತಂತ್ರ್ಯ ಯೋಧರಿಗೆ ಕಾರ್ಯಕ್ರಮಗಳನ್ನು ನಡೆಸಲು. ದೂರದ ಊರುಗಳಿಂದ ಬಂದವರಿಗೆ ವಿಶ್ರಾಂತಿ ಪಡೆಯಲಾದರೂ ಉಪಯೋಗವಾಗುತ್ತಿತ್ತು’.

–ಮಾಣಿಕಪ್ಪ ಜಿ. ಪಾಟೀಲ, ಅಧ್ಯಕ್ಷರು ಹೈದರಾಬಾದ್‌ ಕರ್ನಾಟಕ ಸ್ವಾತಂತ್ರ್ಯ ಯೋಧರ ಸಂಘ‘ರಂಗ ತಾಲೀಮಿಗೂ ಜಾಗವಿಲ್ಲ’

‘ಗುಲ್ಬರ್ಗದಲ್ಲಿ ರಂಗಮಂದಿರಗಳ ಕೊರತೆ ಇದೆ. ಇಲ್ಲಿರುವ ರಂಗಮಂದಿರದಷ್ಟು ಬಾಡಿಗೆ ಬೆಂಗಳೂರಿನ ರಂಗಶಂಕರ ಮೊದಲಾದ ರಂಗಮಂದಿರಗಳಲ್ಲೂ ಇಲ್ಲ. ಇಲ್ಲಿನ ಕಲಾವಿದರಿಗೆ ರಂಗ ತಾಲೀಮು ನಡೆಸಲೂ ಸೂಕ್ತ ರಂಗಮಂದಿರಗಳಿಲ್ಲ. ಆದ್ದರಿಂದ ನಾವು ಸಾರ್ವಜನಿಕ ಉದ್ಯಾನ ಮೊದಲಾದೆಡೆ ರಂಗ ತಾಲೀಮು ನಡೆಸಬೇಕಾದ ಅನಿವಾರ್ಯತೆ ಇದೆ. ಇದರಂದಲೇ ಇಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಕಮರುತ್ತಿವೆ. ಧಾರವಾಡದ ವಿದ್ಯಾವರ್ಧಕ ಸಂಘದ ರಂಗಮಂದಿರದಲ್ಲಿ ರಂಗ ಕಲಾವಿದರಿಗೆ ಕೇವಲ 500 ರೂಪಾಯಿ ಬಾಡಿಗೆ ಪಡೆಯುತ್ತಿದ್ದಾರೆ.ಇಲ್ಲಿನ ಎಸ್‌.ಎಂ. ರಂಗಮಂದಿರದಲ್ಲಿ ರಂಗಚಟುವಟಿಕೆಗಳಿಗೆ ಬಾಡಿಗೆ ಕಡಿಮೆ ಮಾಡಿ ಎಂದು ಹಲವಾರು ಬಾರಿ ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈಗ ಹೊಸದಾಗಿ ನಿರ್ಮಾಣವಾಗುತ್ತಿರುವುದು ಸಾ್ವತಂತ್ರ್ಯ ಹೋರಾಟಗಾರರ ಭವನವಾದರೂ ಅದು ಸಾಂಸ್ಕೃತಿಕ ಚಟುವಟಿಕೆಗಳಿಗೂ ಅಗ್ಗದ ಬಾಡಿಗೆಯಲ್ಲಿ ಲಭ್ಯವಾಗಬೇಕು.  ಇದು ನಗರದ ಹೊರ ವಲಯದಲ್ಲಿರುವುದರಿಂದ ಜನರಿಗೆ ಬರಲು ತೊಂದರೆಯಾಗಬಹುದು. ಆದ್ದರಿಂದ ನಗರದಲ್ಲಿ ಸಣ್ಣದಾದರೂ ರಂಗಮಂದಿರವೊಂದರ ನಿರ್ಮಾಣದ ಅವಶ್ಯಕತೆಯಿದೆ.

–ವಿ.ಜಿ. ದೇಸಾಯಿ, ಗುಲ್ಬರ್ಗ ಜಿಲ್ಲಾ ಘಟಕ ಅಧ್ಯಕ್ಷರು, ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry