ಭಾನುವಾರ, ಏಪ್ರಿಲ್ 11, 2021
33 °C

ಸ್ವಾತಂತ್ರ್ಯ ಮಹನೀಯರ ಸಾಧನೆ ಮಕ್ಕಳಿಗೆ ತಿಳಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಡೂರು: ಸರ್ದಾರ್ ವಲ್ಲಭ ಭಾಯಿ ಪಟೇಲ್, ಸುಭಾಷ್‌ಚಂದ್ರ ಬೋಸ್, ಗಾಂಧೀಜಿ ಸೇರಿದಂತೆ  ಅನೇಕ ಮಹನೀಯರು ತಮ್ಮ ಪ್ರಾಣ ತ್ಯಾಗ, ಬಲಿದಾನ ಮಾಡಿ  ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ. ಅವರ ಸಾಧನೆಯನ್ನು ಮಕ್ಕಳಿಗೆ ತಿಳಿಸಿ ಎಂದು ತಹಶೀಲ್ದಾರ್ ಟಿ.ಜೆ ಚಂದ್ರಶೇಖರ್ ಅಭಿಪ್ರಾಯ ವ್ಯಕ್ತಪಡಿಸಿದರು.ಅವರು ಪಟ್ಟಣದ ಎಪಿಎಂಸಿ  ಶಾಲೆಯ ಆವರಣದಲ್ಲಿ ಬುಧವಾರ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭ ದಲ್ಲಿ ಮಾತನಾಡಿದರು.ಭಯೋತ್ಪಾದನೆ, ನಕ್ಸಲ್ ಚಟುವಟಿಕೆಗಳು ಸಮಾಜದ ಬೆಳವಣಿಗೆಗೆ ಅಡ್ಡಿಯುಂಟು ಮಾಡುತ್ತಿವೆ, ಸರ್ಕಾರ, ಬುದ್ಧಿಜೀವಿ ಗಳು ಸೇರಿಕೊಂಡು ಈ ಸಮಸ್ಯೆಗಳ ನಿವಾರಣೆಗೆ ಪರಿಹಾರ ಕಂಡು ಹಿಡಿಯಬೇಕು ಎಂದರು.ಶಾಸಕ ಈ.ತುಕಾರಾಂ ಮಾತನಾಡಿ, ರಾಜಕೀಯವೆಂಬುದು `ದುಡ್ಡು ಹಾಕುವ, ದುಡ್ಡು ತೆಗೆದು ಕೊಳ್ಳುವ ಉದ್ದಿಮೆಯಾಗಿದೆ~, ನ್ಯಾಯಾಂಗವನ್ನು ಖರೀದಿ ಮಾಡುವಷ್ಟು ರಾಜಕೀಯ ನೀಚತನ ಬೆಳೆದಿದೆ  ಎಂದರು.ತಾ.ಪಂ.ಅಧ್ಯಕ್ಷೆ ಮೂಲೆಮನೆ ಲಕ್ಮೀ ತಿಪ್ಪೇಸ್ವಾಮಿ, ಉಪಾಧ್ಯಕ್ಷ ಮಲಿಯಪ್ಪ, ಪುರಸಭೆ ಅಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷೆ ಆಶಾಲತಾ ಸೋಮಪ್ಪ, ಜಿ.ಪಂ. ಸದಸ್ಯರಾದ ಲತಾ ಚಂದ್ರಶೇಖರ್, ತಾ.ಪಂ.ಕಾರ್ಯ ನಿರ್ವಹಣಾ ಅಧಿಕಾರಿ ಈಶ್ವರ್ ಪ್ರಸಾದ್, ವಲಯ ಶಿಕ್ಷಣಾಧಿಕಾರಿ ಮೌನೇಶ್ ಆಚಾರ್, ಬಿಆರ್‌ಸಿಯ ಬಣಕಾರ ಸಿದ್ದಪ್ಪ, ತಾ.ಪಂ ಸದಸ್ಯೆ ಫಿರ್‌ದೋಸಾ ಬೇಗಂ, ಬಿ.ನಾಗನಗೌಡ, ಫಕ್ರುದ್ದೀನ್, ವಕೀಲ ಅಯೂಬ್, ವಿವಿಧ ಸಂಘಟನೆಗಳ ಮುಖಂಡರು ಹಾಜರಿದ್ದರು. ಸರ್ಕಾರಿ ಸೇವೆಯಿಂದ ನಿವೃತ್ತರಾದ 21 ಮಂದಿ ನೌಕರ ರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸ ಲಾಯಿತು.ಗೊಂದಲ: ಶಾಸಕರ ಆಪ್ತ ಕಾರ್ಯದರ್ಶಿ ಎಸ್.ವಿ. ಹಿರೇಮಠ ಅವರು ಧ್ವಜ ವಂದನೆ ಕಾಲಕ್ಕೆ ಶಾಸಕರು ಮತ್ತು ತಹಶೀಲ್ದಾರರು ನಿಂತಿದ್ದ ವೇದಿಕೆಯ ಪಕ್ಕದಲ್ಲೇ ನಿಂತುಕೊಂಡಿದ್ದು ಕಾರ್ಯಕ್ರಮದಲ್ಲಿ ವಿವಾದಕ್ಕೆ ಕಾರಣವಾಯಿತು. ಹಿರೇಮಠ ಅವರ ವಿರುದ್ಧ ಆಸ್ತಿ ನೋಂದಣಿ ವಿವಾದಕ್ಕೆ ಸಂಬಂಧಿಸಿ ದಂತೆ ಸ್ಥಳೀಯ ನ್ಯಾಯಾಲಯದಲ್ಲಿ ಮೊಕದ್ದಮೆ ಇದ್ದು ವಿಚಾರಣೆ ನಡೆಯುತ್ತಿದೆ. ಹೀಗಾಗಿ ಇದು ಹಲವರಲ್ಲಿ ಚರ್ಚೆಗೆ ಒಳಗಾಯಿತು.ತಾಲ್ಲೂಕಿನ ತೋರಣಗಲ್‌ನಲ್ಲಿ ವಡ್ಡರ ಸೇವಾ ಸಮಿತಿಯವರು ಧ್ವಜಾರೋಹಣ ಮಾಡಿ ಬಡಮಕ್ಕಳಿಗೆ ಸಿಹಿ ಹಂಚಿದರು. ಸೋವೇನಹಳ್ಳಿಯ ಅಗ್ರಹಾರ ಗ್ರಾಮದಲ್ಲಿ ವಾಲ್ಮೀಕಿ ಮುಖಂಡ ಟಿ.ಯರಿಸ್ವಾಮಿ  ಶಾಲಾ ಮಕ್ಕಳಿಗೆ 60 ತಟ್ಟೆಗಳನ್ನು ವಿತರಿಸಿದರು.ಶಾಲಾ ಕಾಲೇಜು, ಸರ್ಕಾರಿ ಕಚೇರಿಗಳು ಮತ್ತು ಸಂಘ- ಸಂಸ್ಥೆಗಳು ವಿವಿಧೆಡೆ ಸಂಭ್ರಮದಿಂದ ಸ್ವಾತಂತ್ರ್ಯೋತ್ಸವ ಆಚರಿಸಿದ ವರದಿಗಳ ಬಂದಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.