ಬುಧವಾರ, ಮಾರ್ಚ್ 3, 2021
31 °C

ಸ್ವಾತಂತ್ರ್ಯ ಯೋಧನ ಪ್ರತಿಭಟನೆ ಅಂತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ವಾತಂತ್ರ್ಯ ಯೋಧನ ಪ್ರತಿಭಟನೆ ಅಂತ್ಯ

ಶಿಗ್ಗಾವಿ: ಪಟ್ಟಣದ ಸ್ವಾತಂತ್ರ ಯೋಧ ರಾಮಚಂದ್ರಪ್ಪ ಅರ್ಕಚಾರಿ ಜಮೀನು ಹಾಗೂ ಇತರ  ಬೇಡಿಕೆಗಳನ್ನು ಈಡೇರಿ ಸುವಂತೆ ಆಗ್ರಹಿಸಿ ಕಪ್ಪುಪಟ್ಟಿ ಧರಿಸಿ ತಹಶೀಲ್ದಾರ ಕಚೇರಿ ಮುಂದೆ ಸುಮಾರು ಏಂಟು ದಿನಗಳಿಂದ ನಡೆಸು ತ್ತಿರುವ ಪ್ರತಿಭಟನಾ ಸ್ಥಳಕ್ಕೆ ಸೋಮ ವಾರ ಸಚಿವ ಬಸವ ರಾಜ ಬೊಮ್ಮಾಯಿ ಬೇಟಿ ನೀಡಿ ಹಾಲು ಕುಡಿಸುವ ಮೂಲಕ ಅಂತ್ಯಗೊಳಿಸಿದರು.ಈ ಸಂದರ್ಭದಲ್ಲಿ ಸಚಿವ ಬಸವ ರಾಜ ಬೊಮ್ಮಾಯಿ ಮಾತನಾಡಿ,  ನಾಡಿನ ಶ್ರೇಯಸ್ಸಿಗಾಗಿ ಅಂದು ತಮ್ಮ ಜೀವನವನ್ನೇ ಮುಡುಪಾಗಿಟ್ಟ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಯೋಧರ ಬಗ್ಗೆ ಸರ್ಕಾರಕ್ಕೆ ಅಪಾರ ವಾದ ಗೌರವವಿದೆ. ಅಲ್ಲದೆ ಅವರನ್ನು ಗುರುತಿಸಿ ಸರ್ಕಾರ ವಿವಿಧ ಹೊಸ ಯೋಜನೆಗಳನ್ನು ತಲುಪಿಸುವ ಕಾರ್ಯ ಹಮ್ಮಿಕೊಂಡಿದೆ.ಆದರೆ ಕೆಲವು ಅಧಿಕಾರಗಳ ನಿರ್ಲ ಕ್ಷ್ಯತೆಯಿಂದ ಸ್ವಾತಂತ್ರ್ಯ ಯೋಧ ರಾಮ ಚಂದ್ರಪ್ಪ ಅರ್ಕಾಚಾರಿ ಸೇರಿದಂತೆ ಕೆಲ ಯೋಧರಿಗೆ ಅದರ ಲಾಭ ಮುಟ್ಟುವಲ್ಲಿ ವಿಳಂಬವಾಗಿದೆ. ಸ್ವಾತಂತ್ರ್ಯ ಹೋರಾಟ ಗಾರರಿಗೆ ಜಮೀನು  ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯ ಕಲ್ಪಿಸಲು ಮುಂದಾಗಿದೆ ಈ ಕಾರ್ಯವನ್ನು ತ್ವರಿತವಾಗಿ ಮಾಡುವಂತೆ ಅಧಿಕಾರಿ ಗಳಿಗೆ ಅವರು ಸೂಚಿಸಿದರು.ನಂತರ ಸ್ವಾತಂತ್ರ್ಯ ಯೋಧ ರಾಮ ಚಂದ್ರಪ್ಪ ಅರ್ಕಾಚಾರಿ ಹಾಗೂ ಕುಟುಂಬ ಸದಸ್ಯರು ತಮ್ಮ ಪ್ರತಿಭಟನೆ ಯನ್ನು ಹಿಂಪಡೆದರು. ಕಾಡಾ ಅಧ್ಯಕ್ಷ ಸೋಮಣ್ಣ ಬೇವಿನ ಮರದ, ಸವ ಣೂರ ಉಪವಿಭಾಗಾ ಧಿಕಾರಿ ಸುರೇಶ ಈಟ್ನಾಳ, ಕಸಾಪ ಅಧ್ಯಕ್ಷ ಶಂಕರಗೌಡ್ರ ಪಾಟೀಲ, ಜಿಪಂ.ಸದಸ್ಯರಾದ ಬಿ.ಟಿ. ಇನಾಮತಿ, ಸಿ.ಎಸ್. ಪಾಟೀಲ, ಶಶಿಧರ ಹೊನ್ನಣ ವರ, ಸರೋಜಾ ಆಡಿನ, ತಹಸೀಲ್ದಾರ ಕೊಟ್ರೇಶ, ಮಾಜಿ ಜಿಪಂ ಅಧ್ಯಕ್ಷ ಮಲ್ಲೇಶಪ್ಪ ಹರಿಜನ, ತಾಲ್ಲೂಕು ಬಿಜೆಪಿ ಅಧ್ಯಕ್ಷ ದೇವಣ್ಣ ಚಾಕಲಬ್ಬಿ, ಕುಟುಂಬ ಸದಸ್ಯ ರಾದ ಶಂಕರ ಅರ್ಕಾಚಾರಿ, ಮಂಜುಳಾ ಅರ್ಕಾಚಾರಿ, ವೀರಣ್ಣ ಬಡಿಗೇರ, ನಾಗ ರಾಜ ಬಡಿಗೇರ, ವಿಜಯಲಕ್ಷ್ಮೀ ಅರ್ಕಾ ಚಾರಿ, ಬಸವರಾಜ ಹೊನ್ನಣ್ಣವರ, ವಿನಾಯಕ, ವಿಶ್ವನಾಥ, ಅಶೋಕ ಕಬನೂರ ಸೇರಿದಂತೆ ಅನೇಕರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.