ಶುಕ್ರವಾರ, ಏಪ್ರಿಲ್ 23, 2021
30 °C

ಸ್ವಾತಂತ್ರ್ಯ ಯೋಧರ ಕೊಡುಗೆ ಅನನ್ಯ: ಗದ್ದಿಗೌಡರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಳೇದಗುಡ್ಡ: ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿರುವ ಮಹಾತ್ಮಾ ಗಾಂಧೀಜಿ ಅವರ ಹೆಸರು ಅಜರಾಮರವಾಗಿ ಉಳಿಯಲು ಗುಳೇದಗುಡ್ಡ ಸ್ವಾತಂತ್ರ್ಯ ಯೋಧರ ಕೊಡುಗೆ ಅನನ್ಯವಾಗಿದೆ ಎಂದು ಸಂಸದ ಪಿ.ಸಿ. ಗದ್ದಿಗೌಡರ ಹೇಳಿದರು.ಅವರು ಮಂಗಳವಾರ ಗಾಂಧೀ ಸ್ಮಾರಕ ಭವನದಲ್ಲಿ ಹಮ್ಮಿಕೊಂಡಿದ್ದ ನೂತನ ಗಾಂಧೀ ಸಭಾ ಭವನ ಹಾಗೂ ದಿ. ಲಕ್ಷ್ಮಣಸಾ ಕಾವಡೆ ಸ್ಮಾರಕ ಸಾರ್ವಜನಿಕ ಗ್ರಂಥಾಲಯದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ನೂತನ ಗಾಂಧೀ ಸಭಾ ಭವನದ ಕಟ್ಟಡಕ್ಕೆ ರೂ, 10 ಲಕ್ಷಗಳನ್ನು ಸಂಸದರ ಅನುದಾನದಲ್ಲಿ ಕೊಡುವುದಾಗಿ ಭರವಸೆ ನೀಡಿದರು.ದಿ. ಲಕ್ಷ್ಮಣಸಾ ಕಾವಡೆ ಅವರ ಹೆಸರಿನಲ್ಲಿಯ ಗ್ರಂಥಾಲಯ ನಿರ್ಮಿಸುವುದಕ್ಕೆ ತಾವು ಮತ್ತು ಶಾಸಕ ಪಟ್ಟಣಶೆಟ್ಟಿ ಅವರು ಸೇರಿಕೊಂಡು ಎರಡೂ ಕಟ್ಟಡಗಳನ್ನು ಪೂರ್ಣಗೊಳಿಸುವುದಾಗಿ ತಿಳಿಸಿದರು. ಮಾಜಿ ಸಚಿವ ಎಚ್.ವೈ. ಮೇಟಿ, ಮಾಜಿ ಶಾಸಕ ರಾಜಶೇಖರ ಶೀಲವಂತ, ಮಲ್ಲಿಕಾರ್ಜುನ ಬನ್ನಿ, ಅಶೋಕ ಹೆಗಡಿ ಮಾತನಾಡಿದರು.ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ಪುರಸಭೆ ಅಧ್ಯಕ್ಷೆ ಲಲಿತಾ ಗಾಜಿ (ದನ್ನೂರ), ಸ್ಥಾಯಿ ಸಮಿತಿ ಅಧ್ಯಕ್ಷ ಕಮಲಕಿಶೋರ ಮಾಲಪಾಣಿ, ಮುಖ್ಯಾಧಿಕಾರಿ ಬಿ.ಟಿ. ಬಂಡಿವಡ್ಡರ, ಅಭಿಯಂತರ ತೋಪಲಕಟ್ಟಿ ಉಪಸ್ಥಿತರಿದ್ದರು. ಉಪಾಧ್ಯಕ್ಷ ಮುರಗೇಶ ರಾಜನಾಳ ಸ್ವಾಗತಿಸಿದರು. ಭಾಗ್ಯ ಉದ್ನೂರ ಪ್ರಾಸ್ಥಾವಿಕವಾಗಿ ಮಾತನಾಡಿದರು. ವೀರಭದ್ರಪ್ಪ ಬಳಿಗಾರ ನಿರೂಪಿಸಿದರು. ಸಿದ್ದು ಅರಕಾಲಚಿಟ್ಟಿ ವಂದಿಸಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.