ಸ್ವಾತಂತ್ರ್ಯ ಹೋರಾಟಗಾರ್ತಿಯರ ವನ ಲೋಕಾರ್ಪಣೆ

7

ಸ್ವಾತಂತ್ರ್ಯ ಹೋರಾಟಗಾರ್ತಿಯರ ವನ ಲೋಕಾರ್ಪಣೆ

Published:
Updated:
ಸ್ವಾತಂತ್ರ್ಯ ಹೋರಾಟಗಾರ್ತಿಯರ ವನ ಲೋಕಾರ್ಪಣೆ

ಸಿದ್ದಾಪುರ:  ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ತಾಲ್ಲೂಕಿನ ಮಹಿಳೆಯರು ನಡೆಸಿದ್ದ ಸ್ಮರಣೀಯ ಸತ್ಯಾಗ್ರಹದ ನೆನಪಿಗಾಗಿ  ತಾಲ್ಲೂಕಿನ ಮಾವಿನಗುಂಡಿಯಲ್ಲಿ ನಿರ್ಮಿಸಿರುವ ವಿಶಿಷ್ಟವಾದ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣಾರ್ಥವಾಗಿ ನಿರ್ಮಿಸಿದ ಸತ್ಯಾಗ್ರಹವನವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಮಂಗಳವಾರ ಉದ್ಘಾಟಿಸಿದರು.ಅರಣ್ಯ ಇಲಾಖೆಯ ಆಶ್ರಯದಲ್ಲಿ ಏರ್ಪಡಿಸಿದ್ದ ಈ ಕಾರ್ಯಕ್ರಮದ  ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಸುಮಾರು ರೂ 10 ಲಕ್ಷ ವೆಚ್ಚದಲ್ಲಿ ಈ ವನವನ್ನು ನಿರ್ಮಾಣ ಮಾಡಲಾಗಿದೆ. ಇದರೊಂದಿಗೆ ರೂ 7 ಲಕ್ಷ ವೆಚ್ಚದಲ್ಲಿ ಅರಣ್ಯ ಇಲಾಖೆಯ ವಸತಿ ಗೃಹವನ್ನು ಕೂಡ ಸಿದ್ಧಮಾಡಲಾಗಿದೆ~ ಎಂದರು.ಪಟ್ಟಣದ ಶಂಕರಮಠದಲ್ಲಿ ನಂತರ ನಡೆದ ಹೊಸೂರಿನ ಉದ್ಯಾನವನ ಪುನಶ್ಚೇತನದ ಕಾರ್ಯಕ್ರಮದಲ್ಲಿ  ಮಾವಿನಗುಂಡಿಯ ಮಹಿಳಾ ಸ್ವಾತಂತ್ರ್ಯ  ಸತ್ಯಾಗ್ರಹವನದ ಬಗ್ಗೆ ಪ್ರಸ್ತಾಪ ಮಾಡಿದ ಸಚಿವ ಕಾಗೇರಿ, `ಈ ವನದ ನಿರ್ಮಾಣ ಹೆಮ್ಮೆಯ ಸಂಗತಿ.ಸ್ವಾತಂತ್ರ್ಯಕ್ಕೋಸ್ಕರ ಇಲ್ಲಿನ ಮಹಿಳೆಯರು ನಡೆಸಿದ್ದ ವೀರ ಹೋರಾಟ ಮುಂದಿನ ಜನಾಂಗಕ್ಕೆ ತಿಳಿಯಬೇಕು. ಜೋಗದ ಪ್ರವಾಸಕ್ಕೆ ಬಂದ ಪ್ರವಾಸಿಗರು ಮಾವಿನಗುಂಡಿಯ ಈ ಸತ್ಯಾಗ್ರಹವನಕ್ಕೂ ಭೇಟಿ ನೀಡುವಂತಾಗಬೇಕು~ ಎಂದರು. ಹಲಗೇರಿ ಗ್ರಾ.ಪಂ. ಅಧ್ಯಕ್ಷೆ ರಾಧಾ ನಾಯ್ಕ, ಗ್ರಾ.ಪಂ.ಸದಸ್ಯರು,  ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಸ್ವಾತಂತ್ರ್ಯಯೋಧ ದ್ಯಾವಾ ಗೌಡ ಮರಲಿಗೆ ಅವರನ್ನು  ಸನ್ಮಾನಿಸಲಾಯಿತ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry