ಸ್ವಾಭಿಮಾನ: ವಿದ್ಯಾರ್ಥಿಗಳಿಗೆ ಸಲಹೆ

7

ಸ್ವಾಭಿಮಾನ: ವಿದ್ಯಾರ್ಥಿಗಳಿಗೆ ಸಲಹೆ

Published:
Updated:
ಸ್ವಾಭಿಮಾನ: ವಿದ್ಯಾರ್ಥಿಗಳಿಗೆ ಸಲಹೆ

ಗಂಗಾವತಿ: `ಶಾಲಾ-ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅದರಲ್ಲೂ ಕ್ರೀಡಾಪಟುಗಳು ಸ್ವಾಭಿಮಾನ ಹಾಗೂ ದೃಢ ನಿರ್ಧಾರದ ಮನಸ್ಸು ಬೆಳೆಸಿಕೊಳ್ಳುವುದು ಮುಖ್ಯ ಎಂದು ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಕರೆ ನೀಡಿದರು.ಭಾನುವಾರ ನಗರದ ಬೆಥೆಲ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಗುಡ್‌ಶಫರ್ಡ್ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ನಡೆದ ಪ್ರೌಢ ಶಾಲೆಗಳ ಗುಲ್ಬರ್ಗ ವಿಭಾಗ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.ಕ್ರೀಡಾರಂಗದಲ್ಲಿ ಇಂದು ಒಂದಿಲ್ಲೊಂದು ಹಗರಣಗಳು ಹೊರಬರುತ್ತಿರುವುದು ಭಾರತೀಯ ಕ್ರೀಡಾ ಇತಿಹಾಸಕ್ಕೆ ಕಪ್ಪುಚುಕ್ಕೆ ಎಂದರು.ಡಿ.ಡಿ.ಪಿ.ಐ. ಮಂಟೇಲಿಂಗಾಚಾರ್ ಮಾತನಾಡಿ, ಕ್ರೀಡೆಗಳಿಗೆ ಸರ್ಕಾರ ವಿವಿಧ ಯೋಜನೆಯಲ್ಲಿ ಸಾಕಷ್ಟು ಅನುದಾನ ನೀಡುತ್ತಿದೆ. ಆದರೆ ಸೂಕ್ತ ಸದುಪಯೋಗವಾಗುತ್ತಿಲ್ಲ ಎಂದ ಅವರು, ಅನುದಾನ ದುರ್ಬಳಕೆಯ ಬಗ್ಗೆ ವಿಷಾದಿಸಿದರು.ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಎಂಎನ್‌ಎಂ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಇದೇ  25 ಹಾಗೂ 26ರಂದು ಒಂದು ಕೋಟಿ ರೂಪಾಯಿ ಮೊತ್ತದಲ್ಲಿ ಬೃಹತ್ ಪುಸ್ತಕ ಪ್ರದರ್ಶನ ಏರ್ಪಡಿಸಲಾಗುತ್ತಿದೆ ಎಂದರು.ಆನೆಗೊಂದಿ ಜಿಲ್ಲಾ ಪಂಚಾಯಿತಿ ಸದಸ್ಯೆ ವಿಜಯಲಕ್ಷ್ಮಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಚ್. ಪ್ರಭಾಕರ ಮಾತನಾಡಿದರು. ಶಿಕ್ಷಣ ಇಲಾಖೆಯ ಗುಲ್ಬರ್ಗ ವಿಭಾಗಮಟ್ಟದ ದೈಹಿಕ ಶಿಕ್ಷಕ ರಾಮು ತಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಲಲಿತಾರಾಣಿ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ತಾಲ್ಲೂಕು ಅಧಿಕಾರಿ ತಿಪ್ಪಯ್ಯ ಹಿರೇಮಠ ಮತ್ತಿತರರು ಇತರರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry