ಸ್ವಾಮಿ ಅಸೀಮಾನಂದ ಸೆಂಟ್ರಲ್ ಜೈಲಿಗೆ

7

ಸ್ವಾಮಿ ಅಸೀಮಾನಂದ ಸೆಂಟ್ರಲ್ ಜೈಲಿಗೆ

Published:
Updated:

ಅಜ್ಮೀರ್ (ಪಿಟಿಐ): ಅಜ್ಮೀರ್ ದರ್ಗಾ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ಸ್ವಾಮಿ ಅಸೀಮಾನಂದ ಅವರ ನ್ಯಾಯಾಂಗ ಬಂಧನವನ್ನು ಫೆ. 15ರವರೆಗೆ ವಿಸ್ತರಿಸಲಾಗಿದ್ದು, ಅವರನ್ನು ಅಜ್ಮೀರದ ಸೆಂಟ್ರಲ್ ಜೈಲಿಗೆ ಕಳುಹಿಸಲಾಗಿದೆ.

ಬಾಂಬ್ ಸ್ಫೋಟದ ಆರೋಪದಲ್ಲಿ ಬಂಧಿತರಾಗಿದ್ದ ಬಲಪಂಥೀಯ ಹಿಂದೂ ಸಂಘಟನೆ ಅಭಿನವ ಭಾರತ್‌ನ ಸದಸ್ಯ ಸ್ವಾಮಿ ಅಸೀಮಾನಂದ (59) ಮತ್ತು ಇನ್ನೊಬ್ಬ ಆರೋಪಿ ಭರತ್ ಭಾಯ್ ಅವರನ್ನು ಭಯೋತ್ಪದಾನಾ ನಿಗ್ರಹ ದಳ (ಎಟಿಎಸ್) ಶನಿವಾರ ಅಜ್ಮೀರ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ವಿಚಾರಣೆ ನಡೆಸಿ ಅಸೀಮಾನಂದ ಅವರನ್ನು ಜೈಲಿಗೆ ಕಳುಹಿಸುವಂತೆ ಆದೇಶಿಸಿದ ಕೋರ್ಟ್, ಭರತ್ ನ್ಯಾಯಾಂಗ ಬಂಧನವನ್ನು ಫೆ.18ರವರೆಗೆ ವಿಸ್ತರಿಸಿತು. ದುಬೈನಲ್ಲಿ ಕೆಲಸ ಮಾಡುತ್ತಿದ್ದ ಭರತ್ ಭಾಯ್ ಅಜ್ಮೀರ ಬಾಂಬ್ ಸ್ಫೋಟಕ್ಕೆ ಆರ್ಥಿಕ ನೆರವು ನೀಡಿರುವ ಸಂಶಯ ವ್ಯಕ್ತಪಡಿಸಿರುವ ಎಟಿಎಸ್ ಭರತ್ ಅವರ ಬ್ಯಾಂಕ್ ಖಾತೆ ಮತ್ತು ಆಸ್ತಿಪಾಸ್ತಿಗೆ ಸಂಬಂಧಿಸಿದ ಮಾಹಿತಿ ಹಾಗೂ ಇತರ ದಾಖಲಾತಿಗಳನ್ನು ಪರಿಶೀಲಿಸುತ್ತಿದೆ.

 ನಡೆಸಲಾಗುತ್ತಿದೆ ಎಂದು ಎಟಿಎಸ್ ಹೆಚ್ಚುವರಿ ಎಸ್‌ಪಿ ಸತ್ಯೇಂದ್ರ ಸಿಂಗ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry