ಮಂಗಳವಾರ, ಜೂನ್ 22, 2021
27 °C

ಸ್ವಾಮೀಜಿಗಳು ಭ್ರಷ್ಟಾಚಾರದ ಫಲಾನುಭವಿಗಳು -

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಭ್ರಷ್ಟಾಚಾರ ಆರೋಪ ಹೊತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪರವಾಗಿ ನಿಂತಿರುವ ಸ್ವಾಮೀಜಿಗಳು ಭ್ರಷ್ಟಾಚಾರದ ಫಲಾನುಭವಿಗಳು~ ಎಂದು ವಿಚಾರವಾದಿ ಎ.ಕೆ.ಸುಬ್ಬಯ್ಯ ಹೇಳಿದರು.ಸ್ವಾತಂತ್ರ್ಯ ಉದ್ಯಾನದಲ್ಲಿ ಕುವೆಂಪು ಪ್ರತಿಮೆ ಸ್ಥಾಪನೆಗಾಗಿ ಶ್ರಮಿಸಿದವರಿಗೆ ಶಾಂತವೇರಿ ಗೋಪಾಲಗೌಡ ಅಭಿಮಾನಿ ಬಳಗವು ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.`ಪ್ರಗತಿಪರ ಮತ್ತು ವೈಜ್ಞಾನಿಕ ವಿಚಾರಧಾರೆ ಹೊಂದಿದ್ದ ಚಿತ್ರದುರ್ಗದ ಮುರುಘಾ ಮಠದ ಮುರುಘಾರಾಜೇಂದ್ರ ಶರಣರು 2009ರಲ್ಲಿ ನನ್ನನ್ನು ಸನ್ಮಾನಿಸಿದ್ದರು. ಕರ್ನಾಟಕವನ್ನು ಭ್ರಷ್ಟಾಚಾರದಲ್ಲಿ ಮೊದಲ ಸ್ಥಾನಕ್ಕೇರಿಸಲು ಪೈಪೋಟಿ ನಡೆದಿರುವ ಈ ಸಂದರ್ಭದಲ್ಲಿ ಸುಬ್ಬಯ್ಯ ಅವರು ವಿಧಾನಸಭೆಯಲ್ಲಿ ಇರಬೇಕಿತ್ತು ಎಂದು ಸನ್ಮಾನ ಪತ್ರದಲ್ಲಿ ಬರೆದಿದ್ದರು.ಆದರೆ, ಭ್ರಷ್ಟಾಚಾರವನ್ನು ೂದಲ ಸ್ಥಾನಕ್ಕೇರಿಸಿದ ಯಡಿಯೂರಪ್ಪ ಅವರ ಪರವಾಗಿ ಇದೇ ಸ್ವಾಮೀಜಿ ಮಾತನಾಡಿದ್ದಾರೆ. 60 ಶಾಸಕ ಬೆಂಬಲ ಇರುವ ಯಡಿಯೂರಪ್ಪ ಅವರ ತಾಳ್ಮೆ ಪರೀಕ್ಷೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಹಾಗಾದರೆ ಸ್ವಾಮೀಜಿಯ ನಿಜ ಬಣ್ಣ ಯಾವುದು. ಈ ರೀತಿ ಮಾತನಾಡಲು ಕಾರಣ ಜಾತಿ ವ್ಯಾಮೋಹ, ವ್ಯವಹಾರಿಕ ಒತ್ತಡ ಕಾರಣವೋ ಅಥವಾ ಅವರು ಭ್ರಷ್ಟಾಚಾರದ ಫಲಾನುಭವಿಗಳೋ~ ಎಂದು ಪ್ರಶ್ನಿಸಿದರು.`ಸ್ವಾಮೀಜಿ ಅವರಿಗೆ ಬಹಿರಂಗ ಪತ್ರವೊಂದನ್ನು ಬರೆದು ಅವರು ನೀಡಿರುವ ಸನ್ಮಾನ ಪತ್ರವನ್ನು ಹಿಂದಿರುಗಿಸುತ್ತೇನೆ~ ಎಂದರು.`ಚುನಾವಣೆಗೆ ನಿಲ್ಲಲು ಹತ್ತು ಕೋಟಿ ರೂಪಾಯಿ ಖರ್ಚು ಮಾಡುವುದು ಈಗ ಅನಿವಾರ್ಯವಾಗಿದೆ. ರಿಯಲ್ ಎಸ್ಟೇಟ್ ಉದ್ಯಮಿಗಳು ಮತ್ತು ದಲ್ಲಾಳಿಕೋರರ ರಾಜ್ಯವನ್ನು ಕಟ್ಟಲಾಗುತ್ತಿದೆ. ಒಳ್ಳೆಯ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿದರೆ ಮಾತ್ರ ಸುಸಂಸ್ಕೃತ ನಾಡನ್ನು ಕಟ್ಟಬಹುದು~ ಎಂದು ಕವಿ ಡಾ.ಎಲ್. ಹನುಮಂತಯ್ಯ ಹೇಳಿದರು.ಪತ್ರಕರ್ತ ಇ.ವಿ.ಸತ್ಯನಾರಾಯಣ ಸ್ವಾಗತಿಸಿದರು. ವಿಧಾನಪರಿಷತ್ ಸದಸ್ಯರಾದ ಡಾ.ಎಂ.ಆರ್‌ ದೊರೆಸ್ವಾಮಿ, ಅಶ್ವತ್ಥನಾರಾಯಣ, ಕನ್ನಡ ಸಾಹಿತ್ಯ ಪರಿಷತ್‌ನ ನಗರ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಸಿ.ಕೆ.ರಾಮೇಗೌಡ ಮತ್ತು ಕುವೆಂಪು ಅವರ ಪ್ರತಿಮೆ ತಯಾರಿಸಿದ ಶಿಲ್ಪಿ ಬಿ.ಡಿ.ಜಗದೀಶ್ ಅವರನ್ನು ಸನ್ಮಾನಿಸಲಾಯಿತು.ಎಂಎಸ್‌ಐಎಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಎಸ್.ಪ್ರಭಾಕರ್, ಚಿಂತಕ ಡಾ.ಲಕ್ಷ್ಮಿಪತಿ ಬಾಬು, ಶಾಂತವೇರಿ ಗೋಪಾಲಗೌಡ ಅವರ ಕುರಿತ `ಜೀವಂತ ಜ್ವಾಲೆ~ ಪುಸ್ತಕದ ಲೇಖಕ ಕೋಣಂದೂರು ವೆಂಕಪ್ಪಗೌಡ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.