ಶನಿವಾರ, ಜನವರಿ 25, 2020
16 °C

ಸ್ವಾಮೀಜಿಗೆ ಇನ್ನೋವಾ ಕಾರು ದೇಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜರಾಜೇಶ್ವರಿನಗರ: ಸಮೀಪದ ಸೊಣ್ಣೇನಹಳ್ಳಿಯಲ್ಲಿ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ನಡೆದ ಹನುಮ ಜಯಂತಿ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದುಬಂತು.   ಇದೇ ಸಂದರ್ಭದಲ್ಲಿ ಗುರು­ವಂದನಾ ಕಾರ್ಯಕ್ರಮ ನಡೆಯಿತು.ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ, ಆದಿ­ಚುಂಚ­ನ­ಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ, ವಿಶ್ವ ಒಕ್ಕಲಿಗ  ಮಠದ ಕುಮಾರ ಚಂದ್ರ­ಶೇಖರ­ನಾಥ ಸ್ವಾಮೀಜಿ, ನಂಜಾವ­ದೂತ ಸ್ವಾಮೀಜಿ, ಸಂತೋಷ್ ಗುರೂಜಿ ಅವ­ರಿಗೆ ಬಿಬಿಎಂಪಿ ಸದಸ್ಯ ಎ.ಎಂ.­ಹನು­ಮಂತೇಗೌಡ ಮತ್ತು ತಾಲ್ಲೂಕು ಪಂಚಾಯ್ತಿ ಮಾಜಿ ಉಪಾಧ್ಯಕ್ಷೆ ಲತಾ ಹನುಮಂತೇಗೌಡ ಗುರು­ವಂದನೆ ಸಲ್ಲಿಸಿದರು.ಹನುಮಂತೇಗೌಡ ಕುಟುಂಬದಿಂದ ಕುಮಾರ ಚಂದ್ರಶೇಖರನಾಥ ಸ್ವಾಮೀ­ಜಿಗೆ ಇನ್ನೋವಾ ಕಾರನ್ನು ಕಾಣಿಕೆ­ಯಾಗಿ ಅರ್ಪಿಸಲಾಯಿತು.

ಶಿವಕುಮಾರ ಸ್ವಾಮೀಜಿ ಮಾತ­ನಾಡಿ ದೇವರ ಸ್ಮರಣೆ ಜತೆಗೆ ಸಮಾಜ ಸೇವೆಯೇ ಪ್ರತಿಯೊಬ್ಬರ ಗುರಿಯಾಗ­ಬೇಕು ಎಂದು ಹೇಳಿದರು.

ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ಮಾನವ ಜೀವನ ಅತ್ಯಂತ ಪವಿತ್ರವಾದದ್ದು ಭಗವಂತ ನೀಡಿದ ಸಿರಿತನದಲ್ಲಿ ಬಡವರಿಗೆ ಅಲ್ಪ ಕಾಣಿಕೆ ನೀಡಿ ಅವರಲ್ಲೇ ದೇವರನ್ನು ಕಾಣ­ಬಹುದು ಎಂದರು.ಶಾಸಕರಾದ ಎಚ್.ಸಿ.ಬಾಲಕೃಷ್ಣ, ಅಶ್ವತ್ಥನಾರಾಯಣ, ದೇವಸ್ಥಾನದ ಧರ್ಮ­ದರ್ಶಿ ಮಂಡಳಿಯ ಲಕ್ಷ್ಮಮ್ಮ, ಮುನಿಯಪ್ಪ, ರಾಧಾ ಶ್ರೀನಿವಾಸ್, ಸಿ.ಎಂ.-ಮಾರೇಗೌಡ, ಟೆಂಟ್ ಮಂಜಣ್ಣ, ಜಿ.ಪಂ.ಉಪಾಧ್ಯಕ್ಷೆ ಜಿನ್ನ­ಬಾಯಿ ನಾಗರಾಜು, ಸದಸ್ಯೆ ಸರ್ವ­ಮಂಗಳ ಕೃಷ್ಣಪ್ಪ, ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಬೆಟ್ಟಯ್ಯ, ಹೇರೋಹಳ್ಳಿ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಅನಿಲ್ ಕುಮಾರ್, ಮಹಿಳಾ ಘಟಕದ ಜೆಡಿಎಸ್ ಅಧ್ಯಕ್ಷೆ ಯಶೋದ ಹಾಜರಿದ್ದರು.

ಪ್ರತಿಕ್ರಿಯಿಸಿ (+)