ಮಂಗಳವಾರ, ಅಕ್ಟೋಬರ್ 22, 2019
21 °C

ಸ್ವಾರ್ಥಿಗಳು, ನಿಷ್ಪ್ರಯೋಜಕರು

Published:
Updated:

ಮುಂಬೈ (ಐಎಎನ್‌ಎಸ್): `ಸ್ವಾರ್ಥಿ ಜನರು, ನಿಷ್ಪ್ರಯೋಜಕರ ಗುಂಪು~ ಎಂದು ಅಣ್ಣಾ ತಂಡದ ಸದಸ್ಯರಾದ ಮನೀಶ್ ಸಿಸೊಡಿಯಾ, ಅರವಿಂದ ಕೇಜ್ರಿವಾಲ್, ಕಿರಣ್ ಬೇಡಿ ಅವರ ವಿರುದ್ಧ ಶಿವಸೇನೆ ಮುಖ್ಯಸ್ಥ ಬಾಳ ಠಾಕ್ರೆ ಅವರು ಭಾನುವಾರ ಟೀಕಿಸಿದ್ದಾರೆ.ಪಕ್ಷದ ಮುಖವಾಣಿ `ಸಾಮ್ನಾ~ಕ್ಕೆ ನೀಡಿರುವ ಸಂದರ್ಶನದಲ್ಲಿ ಸಾಮಾಜಿಕ ಹೋರಾಟಗಾರ ಅಣ್ಣಾ ವಿರುದ್ಧ ಠಾಕ್ರೆ ವಾಗ್ದಾಳಿ ಮಾಡಿದ್ದಾರೆ.`ಕ್ಷುಲ್ಲಕ ಕಾರಣಗಳಿಗಾಗಿ ಅವರು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ಬಲವಂತವಾಗಿ ಇತರರೂ ಇದನ್ನು  ಮಾಡುವಂತೆ ಒತ್ತಾಯಿಸುತ್ತಾರೆ. ಇದು `ರಾಜಕೀಯ ಬಲಾತ್ಕಾರ~ವಲ್ಲದೆ ಬೇರೇನಲ್ಲ~ ಎಂದು ಅಭಿಪ್ರಾಯಪಟ್ಟಿದ್ದಾರೆ. `ಸಾಕಷ್ಟು ಪ್ರಚಾರ ಗಿಟ್ಟಿಸಿದ್ದ ಲೋಕಪಾಲ ಮಸೂದೆ ಏನಾಯಿತು? ನಿಜವಾಗಿಯೂ ದೇಶಕ್ಕೆ ಅದರ ಅಗತ್ಯ ಇದೆಯೇ, ಇದರ ಹಿಂದೆ ಬೇರೆ ಏನಾದರೂ ಉದ್ದೇಶವಿದೆಯೆ?~ ಎಂದು ಪ್ರಶ್ನಿಸಿದ್ದಾರೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)