ಸ್ವಾರ್ಥ ರಾಜಕಾರಣ: ಸರ್ಕಾರ ವಜಾಕ್ಕೆ ಆಗ್ರಹ

ಬುಧವಾರ, ಜೂಲೈ 17, 2019
25 °C

ಸ್ವಾರ್ಥ ರಾಜಕಾರಣ: ಸರ್ಕಾರ ವಜಾಕ್ಕೆ ಆಗ್ರಹ

Published:
Updated:

ಬೆಂಗಳೂರು: `ತಮ್ಮ ರಾಜಕೀಯ ಸ್ವಾರ್ಥದಲ್ಲಿ ಮುಳುಗಿರುವ ಸರ್ಕಾರವನ್ನು ವಿಸರ್ಜಿಸಬೇಕು~ ಎಂದು ಜನಪರ ಚಿಂತಕ ವೇದಿಕೆ ಕರ್ನಾಟಕವು ಒತ್ತಾಯಿಸಿತು.ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಾಹಿತಿ ಮರುಳಸಿದ್ದಪ್ಪ ಅವರು, `ಜಾತಿ ರಾಜಕಾರಣದಿಂದ ಪ್ರಜಾಪ್ರಭುತ್ವಕ್ಕೆ ಕಂಟಕ ಒದಗಲಿದೆ. ಜನ ಬರದ ತೀವ್ರತೆಯಿಂದ ನರಳುತ್ತಿದ್ದಾರೆ. ಕುಡಿಯಲು ನೀರಿಲ್ಲದೆ, ಹೊಟ್ಟೆಗೆ ಅನ್ನವಿಲ್ಲದೆ ನರಳುತ್ತಿದ್ದಾರೆ. ಆದರೆ, ಜನ ಪ್ರತಿನಿಧಿಗಳು ಎನಿಸಿಕೊಂಡವರು ತಮ್ಮ ಸ್ವಾರ್ಥ ರಾಜಕೀಯದಲ್ಲಿ ಮುಳುಗಿದ್ದಾರೆ~ ಎಂದು ಆರೋಪಿಸಿದರು.`ಇಡೀ ಕರ್ನಾಟಕವನ್ನೇ ಎರಡು ಜಾತಿಗಳ ಮಧ್ಯದಲ್ಲಿ ಒಡೆದು ಹಾಕಿದ್ದಾರೆ. ರಾಜ್ಯದ ಪ್ರಗತಿಯ ಕಡೆ ಇವರ ಗಮನವಿಲ್ಲ. ಇರುವುದು ಬರೀ ಕುರ್ಚಿಯ ಕಡೆ ಗಮನ ಮಾತ್ರ. ಹೀಗಾದರೆ, ರಾಜ್ಯವು ಅಧೋಗತಿಯ ಪರಿಸ್ಥಿತಿಗೆ ಬರುವುದು. ಇದರಿಂದ ಸರ್ಕಾರವನ್ನು ಈ ಕೂಡಲೇ ವಿಸರ್ಜಿಸಬೇಕು~ ಎಂದು ಒತ್ತಾಯಿಸಿದರು.ವಿಮರ್ಶಕ ಪ್ರೊ.ಜಿ.ಕೆ.ಗೋವಿಂದರಾವ್ ಮಾತನಾಡಿ, `ಹೈಕಮಾಂಡಿಗೆ ರಾಜ್ಯದ ಬಗ್ಗೆ ಆಸಕ್ತಿಯಿಲ್ಲ. ಅದರ ಮುಂದಿನ ಗುರಿ 2013 ರ ಚುನಾವಣೆಯಾಗಿದೆ. ಅದಕ್ಕಾಗಿ ಅದು ರಾಜ್ಯ ಸರ್ಕಾರದ ಬಗ್ಗೆ ಯಾವುದೇ ಗಮನವನ್ನು ಹರಿಸುತ್ತಿಲ್ಲ~ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry