ಶನಿವಾರ, ಮೇ 8, 2021
27 °C

ಸ್ವಾವಲಂಬನೆ ಹಾದಿಯಲ್ಲಿ ಕಾಡುಸಿದ್ದರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ: ವೇಷಧಾರಿಗಳಾಗಿ ನಾವು ಮನೆ ಮನೆ ಸುತ್ತಾಡಿ ಭಿಕ್ಷೆ ಬೇಡುತ್ತಿದ್ದೇವು. ಆದರೆ ಈಚೆಗೆ ವೇಷ ಧರಿಸಿ ಭಿಕ್ಷಾಟನೆ ನಡೆಸಲು ಆಗುತ್ತಿಲ್ಲ. ಹೀಗಾಗಿ ನಾನು ಭೂಚಕ್ರ ಗಡ್ಡೆ ತಂದು ಮಾರಾಟ ಮಾಡಿ ಪತ್ನಿ, 6 ಮಂದಿ ಮಕ್ಕಳನ್ನು ಸಾಕುತ್ತಿದ್ದೇನೆ ಎಂದು ಪ್ರಭು ಲಾಲಪ್ಪ ಕಾಡಸಿದ್ಧ ಹೇಳುತ್ತಾರೆ.ಉದರ ನಿಮಿತ್ತಂ ಬಹುಕೃತ ವೇಷಂ ಎನ್ನುವ ಗಾದೆ ಮಾತಿನಂತೆ ಹೊಟ್ಟೆ ಹೊರೆಯಲು ನಾವು ಬಿಕ್ಷೆ ಬೇಡುತ್ತಿದ್ದೇವು. ನಮಗೆ ಕಾಡುಸಿದ್ಧರು, ಬೇಡ ಜಂಗಮ, ಬುಡ್ಗ ಜಂಗಮ, ಕಾಡಿ ಪಾಪರು ಹೀಗೆ ನಾನಾ ಹೆಸರುಗಳಿಂದ ಕರೆಯುತ್ತಾರೆ ಎಂದು ಅವರು ತಮ್ಮ ಬಗ್ಗೆ ವಿವರಿಸುತ್ತಾರೆ.`ಭೂಚಕ್ರ ಗಡ್ಡೆ ಮಹಾರಾಷ್ಟ್ರದ ನಾಂದೇಡ್‌ನಿಂದ ಬೀದರ್‌ಗೆ ಬರುತ್ತವೆ. ಅಲ್ಲಿ ಅವನ್ನು ಖರೀದಿಸಿ ತಂದು ಚಿಂಚೋಳಿ, ಚಂದಾಪುರ ಹಾಗೂ ಸುತ್ತಮುತ್ತ ಹಳ್ಳಿಗಳಿಗೆ ಸೈಕಲ್ ಮೇಲೆ ತೆರಳಿ ಮಾರಾಟ ಮಾಡುತ್ತೇನೆ. ಭೂಚಕ್ರ ಗಡ್ಡೆ  ಮೇಲ್ಭಾಗ ಕತ್ತರಿಸಿ ಬಿಲ್ಲೆಗೆ 5/10 ರೂ. ದರದಲ್ಲಿ ಮಾರಾಟ ಮಾಡುತ್ತೇನೆ. ಇದರ ಜೊತೆಗೆ ಬಾಂಬೆ ಮಿಠಾಯಿ ತಯಾರಿಸಿ ಹಳ್ಳಿಗಳಲ್ಲಿ ಮಾರಾಟ ಮಾಡಿ ಮನೆ ನಡೆಸುತ್ತೇನೆ' ಎಂದು ತಮ್ಮ ಸ್ವಾವಲಂಬನೆಯ ಬದುಕನ್ನು ತರೆದಿಟ್ಟರು.`ಬಿಸಿಲು ನಾಡಿನಲ್ಲಿ ಬೇಸಿಗೆಯಲ್ಲಿ ಮಾತ್ರ ಜನ ಇದನ್ನು ತಿನ್ನುತ್ತಾರೆ. ಇದರಿಂದ ಪಿತ್ತ ನಿವಾರಣೆಯಾಗುವುದರ ಜತೆಗೆ ಪಿತ್ತದಿಂದ ಬರುವ ಕಾಯಿಲೆಗಳನ್ನು ಬಾರದಂತೆ ತಡೆಯುತ್ತದೆ ನಂಜು ನಿವಾರಿಸುತ್ತದೆ. ಮುಂಬೈ, ಪೂನಾದಲ್ಲಿ ಸದಾ ಕಾಲ ಈ ಗಡ್ಡೆಯನ್ನು ಜನ ಇಷ್ಟಪಡುತ್ತಾರೆ. ಅಲ್ಲಿ ಇದಕ್ಕೆ ಹೆಚ್ಚಿನ ಬೇಡಿಕೆಯಿದೆ' ಎಂದರು.`ಅಲೆ ಮಾರಿಗಳಾಗಿ ಭಿಕ್ಷಾಟನೆ ನಡೆಸುತ್ತಿದ್ದ ಕಾಡುಸಿದ್ದರು ಬದಲಾವಣೆಯತ್ತ ಹೆಜ್ಜೆ ಇಡುತ್ತಿರುವುದು ಪ್ರಗತಿಯ ಸಂಕೇತ' ಎಂದು ಸಾಮಾಜಿಕ ಕಾರ್ಯಕರ್ತ ಅಣವಾರದ ಜಗನ್ನಾಥ ಪೂಜಾರಿ ಹೇಳುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.