ಸ್ವಾಸ್ಥ್ಯ ಬಿಮಾ: 14 ಆಸ್ಪತ್ರೆ ಸೇರ್ಪಡೆ

7

ಸ್ವಾಸ್ಥ್ಯ ಬಿಮಾ: 14 ಆಸ್ಪತ್ರೆ ಸೇರ್ಪಡೆ

Published:
Updated:

ರಾಮನಗರ: ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಯ ಫಲಾನುಭವಿಗಳಿಗೆ ಸೂಕ್ತ ಚಿಕಿತ್ಸೆ ಒದಗಿಸಲು  ಕಾರ್ಮಿಕ ಇಲಾಖೆ ರಾಮನಗರ ಜಿಲ್ಲೆಯಲ್ಲಿ 14 ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಏಳು ಸರ್ಕಾರಿ ಹಾಗೂ 7 ಖಾಸಗಿ ಆಸ್ಪತ್ರೆಗಳು ಒಳಗೊಂಡಿವೆ.2004ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ವ ಕುಟುಂಬ ಸಮೀಕ್ಷೆಯಲ್ಲಿ ಗುರುತಿಸಲಾಗಿರುವ ಫಲಾನುಭವಿ ಕಾರ್ಮಿಕ ಸದಸ್ಯರು ಈ ಯೋಜನೆಯ ಲಾಭ ಪಡೆಯಬಹುದಾಗಿದೆ. ಜತೆಗೆ ನಗರದ ಬಿಪಿಎಲ್ ಮತದಾರರು, ಕಟ್ಟಡ ಕಾರ್ಮಿಕರು, ಮನೆ ಕೆಲಸದವರೂ ಈ ಯೋಜನೆಯ ಸೌಲಭ್ಯ ಪಡೆಯಬಹುದಾಗಿದೆ ಎಂದು ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಎಂ.ನಾಗರಾಜ್ `ಪ್ರಜಾವಾಣಿ~ಗೆ ತಿಳಿಸಿದರು.ಯೋಜನೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 91,638 ಫಲಾನುಭವಿಗಳನ್ನು ಗುರುತಿಸಲಾಗಿದೆ. ಇವರಿಗೆ ಸ್ಮಾರ್ಟ್ ಕಾರ್ಡ್ ವಿತರಿಸುವ ಕೆಲಸ ಚಾಲ್ತಿಯಲ್ಲಿದೆ. ಸ್ಮಾರ್ಟ್ ಕಾರ್ಡ್ ಹೊಂದಿರುವ ಕಾರ್ಮಿಕ ಕುಟುಂಬದವರು ದೇಶದ ಯಾವುದೇ ಭಾಗದಲ್ಲಿ ಚಿಕಿತ್ಸಾ ಸೌಲಭ್ಯ ಪಡೆಯಬಹುದು. ಈ ಕಾರ್ಡ್ ಹೊಂದಿರುವ ಕುಟುಂಬದ ನೋಂದಾಯಿತ ಸದಸ್ಯರಿಗೆ 30 ಸಾವಿರ ರೂಪಾಯಿವರೆಗೆ ಚಿಕಿತ್ಸಾ ಸೌಲಭ್ಯ ದೊರೆಯಲಿದೆ ಎಂದು ಅವರು ವಿವರಿಸಿದರು.ಫಲಾನುಭವಿಗಳ ವಿವರ: ರಾಮನಗರ ತಾಲ್ಲೂಕಿನಲ್ಲಿ 16,510, ಚನ್ನಪಟ್ಟಣದಲ್ಲಿ 20,912, ಕನಕಪುರದಲ್ಲಿ 33,670, ಮಾಗಡಿಯಲ್ಲಿ 20,546 ಫಲಾನುಭವಿಗಳು ಇದ್ದಾರೆ. ಈಗಾಗಲೇ ಚನ್ನಪಟ್ಟಣ, ಕನಕಪುರ, ಮಾಗಡಿ ತಾಲ್ಲೂಕುಗಳಲ್ಲಿ ಫಲಾನುಭವಿಗಳಿಗೆ ಸ್ಮಾರ್ಟ್‌ಕಾರ್ಡ್ ವಿತರಣೆ ನಡೆಯುತ್ತಿದೆ. ಸೋಮವಾರದಿಂದ ರಾಮನಗರದಲ್ಲಿಯೂ ಈ ಕಾರ್ಯ ಆರಂಭವಾಗಲಿದೆ ಎಂದು ಅವರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry