ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಸ್ವಚ್ಛತೆ ಅವಶ್ಯ

7

ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಸ್ವಚ್ಛತೆ ಅವಶ್ಯ

Published:
Updated:

ಹಾವೇರಿ: `ಸುತ್ತ ಮುತ್ತಲಿನ ಪರಿಸರ ವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡಿ ದಾಗ ಮಾತ್ರ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ~ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಂ. ಉದಾಸಿ ಹೇಳಿದರು.ಜಿಲ್ಲಾ ಆಡಳಿತ ಭವನದಲ್ಲಿ ಜಿಲ್ಲಾ ಪಂಚಾಯಿತಿ ಆಯೋಜಿಸಿದ ಒಂದು ತಿಂಗಳ ಅವಧಿಯ `ಸ್ವಚ್ಛತಾ ಉತ್ಸವ~ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಸ್ವಚ್ಛತೆಗೂ ರಾಷ್ಟ್ರಪಿತ ಗಾಂಧೀಜಿಗೂ ಬಲವಾದ ನಂಟಿದ್ದು, ಅವರು ಈ ದೇಶದ ಜನರಲ್ಲಿ ಸ್ವಾತಂತ್ರ್ಯ ಪ್ರಜ್ಞೆ ಬಿತ್ತುವ ಮೊದಲು ಜನ ಸಮು ದಾಯದಲ್ಲಿ ಶುಚಿತ್ವದ ಅರಿವು ಮೂಡಿ ಸಲು ಶ್ರಮಿಸಿದ್ದಾರೆ.ಗಾಂಧೀಜಿಯವರು ಹರಿಜನ ಕೇರಿಗಳಲ್ಲಿ ಕಸಗೂಡಿಸಿ ಶೌಚಾ ಲಯ ಶುಚಿಗೊಳಿಸಿ, ಮಹಾ ಮಾನವ ತ್ವದ ಎತ್ತರಕ್ಕೆ ಬೆಳೆದ ಮಹಾನ್ ವ್ಯಕ್ತಿಗಳು ಎಂದು ಬಣ್ಣಿಸಿದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ನೆಹರೂ ಓಲೇಕಾರ ಮಾತನಾಡಿ, ಶುಚಿತ್ವದ ವಿಚಾರದಲ್ಲಿ ಜನರು ಸಾರ್ವಜನಿಕ ಸ್ಥಳಗಳ ಅತಿಕ್ರಮಣ ಮತ್ತಿತರ ವಿಚಾರ ಗಳನ್ನು ಜನಪ್ರತಿನಿಧಿಗಳು ಬೆಂಬಲಿಸಿದೇ ಜನರಲ್ಲಿ ಪರಿವರ್ತನೆ ತರಲು ಯತ್ನಿಸ ಬೇಕಾದ ಅಗತ್ಯವಿದೆ.ಸ್ವಚ್ಛತೆ ಪ್ರತಿ ಯೊಬ್ಬ ವ್ಯಕ್ತಿಯಿಂದ ಆರಂಭಗೊಳ್ಳ ಬೇಕು. ಎಂದರಲ್ಲದೇ ಹಾವೇರಿ ನಗರ ವ್ಯಾಪ್ತಿಯಲ್ಲಿ ಇಷ್ಟರಲ್ಲಿಯೇ ಎರಡನೇ ಸುತ್ತಿನ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದರು.ಜಿಲ್ಲಾ ಪಂಚಾಯಿತಿ ಉಪಕಾರ್ಯ ದರ್ಶಿ ಜಿ. ಗೋವಿಂದಸ್ವಾಮಿ ಅವರು `ಮಹಾತ್ಮಾ ಗಾಂಧಿ ಅವರ ಜನ್ಮ ದಿನ ದಿಂದ ನವೆಂಬರ್ 4ರವರೆಗೆ ಒಂದು ತಿಂಗಳ ಕಾಲ ರಾಜ್ಯಾದ್ಯಂತ ಸ್ವಚ್ಛತಾ ಉತ್ಸವ ಏರ್ಪಡಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ವತಿಯಿಂದ ಜನ ಪ್ರತಿನಿಧಿಗಳು, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರು, ಯುವ ಸಂಘಟನೆ ಗಳು, ಸ್ತ್ರೀಶಕ್ತಿ ಸಂಘ ಮತ್ತಿತರ ಜನಪರ ಸಂಗಟನೆಗಳನ್ನೊಳಗೊಂಡು ಜಿಲ್ಲೆಯಲ್ಲಿ ಮೂರು ಹಂತದ ಸ್ವಚ್ಛತಾ ಅಭಿಯಾನವನ್ನು ನಡೆಸಲಾಗುವುದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಕಲಾವಿದ ಹಿರೇಮಠ ಕಲಾತಂಡದ ಸದಸ್ಯರಿಂದ ಸ್ವಚ್ಛತಾಗೀತೆ, ಶೌಚಾಲಯದ ಮಹತ್ವ ಸಾರುವ ಬೀದಿ ನಾಟಕ, ನೃತ್ಯ ಮತ್ತಿ ತರ ಕಾರ್ಯಕ್ರಮಗಳು ನಡೆದವು. ಜಿಪಂ ಅಧ್ಯಕ್ಷ ಮಂಜುನಾಥ ಓಲೇ ಕಾರ, ವಿಧಾನ ಪರಿಷತ್ ಸದಸ್ಯ ಶಿವ ರಾಜ ಸಜ್ಜನರ, ನಗರಸಭಾ ಅಧ್ಯಕ್ಷ ಜಗದೀಶ ಮಲಗೋಡ, ಜಿಪಂ ಸಿಇಒ ಉಮೇಶ ಕುಸುಗಲ್ಲ,ಜಿಲ್ಲಾಧಿಕಾರಿ ಎಚ್.ಜಿ. ಶ್ರೀವರ, ಅಪರ ಜಿಲ್ಲಾಧಿಕಾರಿ ಜಿ. ಜಗದೀಶ, ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ವಿವಿಧ ಇಲಾಖಾಧಿಕಾರಿ ಗಳು ಪಾಲ್ಗೊಂಡಿದ್ದರು.ಮುಖ್ಯ ಲೆಕ್ಕಾಧಿಕಾರಿ ಕೃಷ್ಣಾ ಬುಗಟ್ಯಾಗೋಳ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry