ಶನಿವಾರ, ಜೂನ್ 19, 2021
27 °C

ಸ್ವಾಸ್ಥ್ಯ ಸೌಂದರ್ಯ

ಡಾ. ಚೈತ್ರಾ ವಿ.ಆನಂದ ಕಾಸ್ಮೊಡರ್ಮ ಸ್ಕಿನ್‌ ಅಂಡ್‌ ಹೇರ್‌ ಕ್ಲಿನಿಕ್‌ Updated:

ಅಕ್ಷರ ಗಾತ್ರ : | |

ಹದಿಹರೆಯದಲ್ಲಿ ಹಾರ್ಮೋನುಗಳ ಏರುಪೇರು ಆಗುವುದು ಸಹಜ. ಮುಖದ ಮೇಲೆ ಒಡವೆಯಂತೆ ಮೊಡವೆಗಳು ಕಾಣತೊಡಗುತ್ತವೆ. ಮೂಗಿನ ತುದಿ, ಮೂಗಿನ ಮೇಲೆ ಕಪ್ಪು, ಬಿಳಿ ತಲೆಯ ಧೂಮಕೇತುಗಳಂತೆ ಕಂಡು ಬಂದರೆ ಸಾಕು, ಮುಖ ತಾನಾಗಿಯೇ ನೆಲ ನೋಡಲಾರಂಭಿಸುತ್ತದೆ.-ಇವನ್ನೆಲ್ಲ ತಪ್ಪಿಸಲು ಕೆಲವು ಸಲಹೆಗಳು ಇಲ್ಲಿವೆ.* ಸೋಪುರಹಿತ ಕ್ಲೆನ್ಸರ್‌ನಿಂದ ಆಗಾಗ ಮುಖ ತೊಳೆದುಕೊಳ್ಳಬೇಕು.

* ಎಷ್ಟೇ ದಣಿವಾಗಿದ್ದರೂ ಮಲಗುವ ಮುನ್ನ ಮೆಕಪ್‌ ತೆಗೆಯುವುದು ಮರೆಯಲೇಬಾರದು.

* ಚರ್ಮದ ಆರೋಗ್ಯಕ್ಕಾಗಿ ಮೋಡವಿದ್ದರೂ ಮಳೆಬಂದರೂ ಸನ್ಸ್‌ಸ್ಕ್ರೀನ್‌ ಲೋಷನ್‌ ಅನ್ನು ಲೇಪಿಸುವುದು ರೂಢಿಯಾಗಿಸಿ ಕೊಂಡಿರಬೇಕು.

* ಪ್ರತಿದಿನವೂ ಕನಿಷ್ಠವೆಂದರೂ 2ರಿಂದ ಮೂರು ಲೀಟರ್ ನೀರು ಕುಡಿಯಬೇಕು.

* ಹಣ್ಣು ತರಕಾರಿಗಳನ್ನು ಧಾರಾಳವಾಗಿ ಸೇವಿಸಬೇಕು.

* ವಾರಕ್ಕೆ ಮೂರು ದಿನವಾದರೂ ದೈಹಿಕ ಕಸರತ್ತು ಮಾಡಬೇಕು.ತ್ವಚೆಯ ಕಾಂತಿಗೆ ಪಪ್ಪಾಯಾ ಮಾಸ್ಕ್‌

ಪಪ್ಪಾಯ ಹಣ್ಣಿನ ತಿರುಳನ್ನು ಒಂದು ಬಟ್ಟಲಿಗೆ ತೆಗೆದುಕೊಂಡು ನುಣ್ಣಗೆ ಮಸೆಯಬೇಕು. ಅದು ಒಂದು ಲೇಪದ ಹದಕ್ಕೆ ಬಂದಾಗ ಮುಖಕ್ಕೆ ಲೇಪಿಸಿಕೊಳ್ಳಬೇಕು. ಹತ್ತರಿಂದ ಹದಿನೈದು ನಿಮಿಷಗಳ ನಂತರ ಉಗುರು ಬಿಸಿ ನೀರಿನಿಂದ ಮುಖ ತೊಳೆದುಕೊಳ್ಳಬೇಕು.ಇದನ್ನು ಮನೆಯಲ್ಲಿರುವಾಗ ಯಾವಾಗಲಾದರೂ ಮಾಡಬಹುದಾಗಿದೆ. ಪಪ್ಪಾಯಾದಲ್ಲಿರುವ ಪಪ್ಪಾಯನ್‌ ಅಂಶವು ಚರ್ಮವನ್ನು ನೈಸರ್ಗಿಕವಾಗಿ ಮೃದುಗೊಳಿಸುತ್ತದೆ. ಸತ್ತ ಕೋಶಗಳನ್ನು ತೆಗೆದು, ಕಾಂತಿಯುತವಾಗಿ ಕಾಣುವಂತೆ ಮಾಡುತ್ತದೆ. ಮೊಡವೆ ಬಾರದಂತೆಯೂ ತಡೆಯುತ್ತದೆ. ಮುಖ ತೊಳೆದ ನಂತರ ಶುಷ್ಕತನ ಅನುಭವವಾದರೆ ಮಾಯಿಶ್ಚರೈಸರ್‌ ಅನ್ನು ಹಚ್ಚಿಕೊಳ್ಳಬಹುದಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.