ಭಾನುವಾರ, ಜೂಲೈ 5, 2020
22 °C

ಸ್ವಾಸ್ಥ್ಯ- ಸೌಖ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪದ್ಮ ಬಾಲಾಜಿ, ಬೆಂಗಳೂರುನನ್ನ ಮಗಳಿಗೆ 24 ವರ್ಷ. ರಾತ್ರಿ ನಿದ್ದೆಯಲ್ಲಿ ಬಾಯಿಂದ ಜೊಲ್ಲು ಸುರಿಯುತ್ತದೆ. ಇದಕ್ಕೆ ಕಾರಣ ಹಾಗೂ ಪರಿಹಾರವೇನು?

ದಯವಿಟ್ಟು ಅದನ್ನು ಅವಳಿಗೆ ಹೇಳಿ ಅವಳ ತಲೆ ಬಿಸಿ ಮಾಡಬೇಡಿ. ಅವಳ ಮನಸ್ಸಿನಲ್ಲಿ ಏನಿದೆ ಎಂದು ಪತ್ತೆ ಹಚ್ಚಿ ಸಮಸ್ಯೆ ಇದ್ದಲ್ಲಿ ಅದನು ಪರಿಹರಿಸುವ ಪ್ರಯತ್ನ ಮಾಡಿ.

50 ವರ್ಷದ ಮಹಿಳೆ,  ಧಾರವಾಡನಾನು ಮಗಳನ್ನು ಕಳೆದುಕೊಂಡು ದುಃಖದಲ್ಲಿದ್ದೇನೆ. ಅಪಘಾತಗಳಲ್ಲಿ ಕುಟುಂಬದ ಎಲ್ಲ ಸದಸ್ಯರನ್ನು ಕಳೆದುಕೊಂಡು ಒಂಟಿಯಾದವರು ಬದುಕಿನಲ್ಲಿ ಶಾಂತಿ, ನೆಮ್ಮದಿಗಳನ್ನು ಉಳಿಸಿಕೊಳ್ಳಲು ಹೇಗೆ ಸಾಧ್ಯ? ದಯವಿಟ್ಟು ಉತ್ತರಿಸಿ.

ನಿಮ್ಮ ಮಗುವಿನ ಅಗಲುವಿಕೆಯಿಂದಾದ ದುಃಖದಲ್ಲಿ ನಾವೆಲ್ಲ ಭಾಗಿಯಾಗಿರುವೆವೆಂದು ತಿಳಿಸಲು ಇಚ್ಛಿಸುತ್ತೇನೆ. ಇತರರ ಸಮಸ್ಯೆಗಳನ್ನು ನಿಮ್ಮ ಮೇಲೆ ಹೊರಿಸಿಕೊಳ್ಳುವುದು ಆರೋಗ್ಯಕ್ಕೆ ಉತ್ತಮವಲ್ಲ.

ಸಾವು ಈ ಲೋಕದ ಸತ್ಯ.

ದೇವಿ ಬೆಂಗಳೂರುನನಗೆ 53 ವರ್ಷ. ಫಿಸ್ತುಲಾದಿಂದ ಬಳಲುತ್ತಿದ್ದೇನೆ. ಅಲೋಪಥಿ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕೇಂದು ಸೂಚಿಸಿದ್ದಾರೆ. ಆದರೆ ಹೋಮಿಯೋಪಥಿ ವೈದ್ಯರ ಪ್ರಕಾರ ಇದನ್ನು ಶಸ್ತ್ರಚಿಕಿತ್ಸೆ ಇಲ್ಲದೆಯೇ ಶಾಶ್ವತವಾಗಿ ಗುಣಪಡಿಸಬಹುದಂತೆ. ನಾನು ಹೋಮಿಯೋಪಥಿ ಚಿಕಿತ್ಸೆ ಪಡೆಯಬಹುದೇ ಅಥವಾ ಶಸ್ತ್ರಚಿಕಿತ್ಸೆಗೆ ಬದಲು ಪರ್ಯಾಯ ಚಿಕಿತ್ಸೆ ಮಾಡಿಸಿಕೊಳ್ಳಬಹುದೇ?

  ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದಕ್ಕಿಂತ ಮೊದಲು ಒಬ್ಬ ಒಳ್ಳೆಯ ಆಯುರ್ವೇದ ವೈದ್ಯರನ್ನು ಸಂಪರ್ಕಿಸುವುದು ಉತ್ತಮ

ಹೆಸರು ಬೇಡ  ನನಗೆ 23 ವರ್ಷ. 3 ತಿಂಗಳಿಂದ ಮಲವಿಸರ್ಜನೆ ಮಾಡುವಾಗ ತುಂಬಾ ನೋವಾಗುತ್ತದೆ. ಮತ್ತು ಸ್ವಲ್ಪ ರಕ್ತ ಬರುತ್ತದೆ. ವಿಸರ್ಜನೆಯಾದ ಒಂದು ಗಂಟೆಯವರೆಗೂ ತುಂಬಾ ನೋವಿರುತ್ತದೆ. ಇದು ಮೂಲವ್ಯಾಧಿಯ ಸಮಸ್ಯೆಯೇ ಇದಕ್ಕೆ ಮನೆಯಲ್ಲಿಯೇ ಮಾಡಬಹುದಾದ ಪರಿಹಾರೋಪಾಯಗಳು ಏನು?ನಾನು ಟೈಲರ್ ಈ ವೃತ್ತಿಯಿಂದ ಇದು ಬಂದಿರುವ ಸಾಧ್ಯತೆ ಇದೆಯೇ? ಸಲಹೆ ನೀಡಿ.

  ನಿಮ್ಮ ವೃತ್ತಿಗೂ ಇದಕ್ಕೂ ಸಂಬಂಧವಿಲ್ಲ. ಇದು ಫಿಶ್ಯರ್ (Fissure) ಎಂಬ ಕಾಯಿಲೆಯ ಲಕ್ಷಣ. ಆದರೂ, ವೈದ್ಯರಿಂದ ಪರೀಕ್ಷಿಸಿಕೊಂಡು ಸುಲಭದಲ್ಲಿ ಸರಿಪಡಿಸಿಕೊಳ್ಳಿ.

ಬಿ. ಎಸ್. ಮುಳ್ಳೂರ, ಹಲಗತ್ತಿ.  ನನ್ನ ವಯಸ್ಸು 67.  ನನಗೆ ಸೆಂಟ್ ವಾಸನೆ ಹಾಗೂ ಧೂಳು, ಒಗ್ಗರಣೆ ವಾಸನೆ ಮೂಗಿಗೆ ಬಂದ ಕೂಡಲೆ ಕೆಮ್ಮು ಶುರು ಆಗುತ್ತದೆ. ಕೆಲ ಡಾಕ್ಟರಿಗೆ ತೋರಿಸಿದ್ದೇನೆ. ಅಲರ್ಜಿ ಆಗುತ್ತಿದೆ. ಅದಕ್ಕೆ ಏನೂ ಔಷಧಿ ಇಲ್ಲಾ ಅನ್ನುತ್ತಾರೆ. ಅದಕ್ಕೆ ತಮ್ಮ ಸಲಹೆ ಏನು ಎಂಬುದನ್ನು ತಿಳಿಸಿ.

 ಇದಕ್ಕೆ ಒಂದೇ ಔಷಧಿ. ಸೆಂಟ್, ಒಗ್ಗರಣೆ, ಮನೆಯ ಧೂಳಿನಿಂದ ದೂರವಿರಿ. ಮನೆ ಗುಡಿಸುವಾಗ ಮನೆಯಲ್ಲಿ ಇರಬೇಡಿ. ಆ ಹೆದರಿಕೆಯನ್ನು ಮನಸ್ಸಿನಿಂದ ಬಿಡಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.