ಸ್ವಿಟ್ಜರ್ಲೆಂಡ್: ತಮಿಳು ಉಗ್ರರಿಂದ ಹಣ ಸುಲಿಗೆ?

7

ಸ್ವಿಟ್ಜರ್ಲೆಂಡ್: ತಮಿಳು ಉಗ್ರರಿಂದ ಹಣ ಸುಲಿಗೆ?

Published:
Updated:

ಜಿನೀವಾ (ಎಪಿ):ಶ್ರೀಲಂಕಾದ ಸರ್ಕಾರದ ವಿರುದ್ಧ ಬಂಡೇಳಲು ಎಲ್‌ಟಿಟಿಇಗೆ ಹಣ ಸಂಗ್ರಹಿಸುವುದಕ್ಕಾಗಿ ಸ್ವಿಟ್ಜರ್ಲೆಂಡ್‌ನಲ್ಲಿರುವ ತಮಿಳು ಮೂಲದ ಜನರಿಂದ ಭಾರಿ ಹಣವನ್ನು ಸುಲಿಗೆ ಮಾಡಲಾಗುತ್ತಿದೆ ಎಂದು ಸ್ವಿಸ್ ಪತ್ರಿಕೆಗಳು ವರದಿ ಮಾಡಿವೆ.ದೇಶದ ಹಲವೆಡೆ ಕಳೆದ ಮಂಗಳವಾರ ತಮಿಳು ಮೂಲದ ವ್ಯಕ್ತಿಗಳು ಮತ್ತು ಕಂಪೆನಿಗಳ ಮೇಲೆ ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ದೊರೆತ ಸಾಕ್ಷ್ಯಗಳ ಆಧಾರದಲ್ಲಿ ಈ ಶಂಕೆ ವ್ಯಕ್ತವಾಗಿದೆ ಎಂದು ಪತ್ರಿಕೆಗಳು ಹೇಳಿವೆ. ದಾಳಿಯ ಸಂದರ್ಭದಲ್ಲಿ 10 ಜನರನ್ನು ಬಂಧಿಸಲಾಗಿತ್ತು. ಈ ಪೈಕಿ ಎಂಟು ಮಂದಿ ಈಗಲೂ ಜೈಲಿನಲ್ಲೇ ಇದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry