ಶುಕ್ರವಾರ, ಜೂಲೈ 10, 2020
27 °C

ಸ್ವಿಸ್ ಬ್ಯಾಂಕ್ ಉದ್ಯೋಗಿಯ ಬಂಧನ, ತನಿಖೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೂರಿಚ್ (ಎಪಿ): ಶ್ರೀಮಂತ ತೆರಿಗೆ ವಂಚಕರ ದಾಖಲುಪತ್ರಗಳ ವಿವರ ಪಟ್ಟಿಯನ್ನು ‘ವಿಕಿಲೀಕ್ಸ್’ಗೆ ಹಸ್ತಾಂತರ ಮಾಡಿದ ಆರೋಪದ ಮೇಲೆ ಸ್ವಿಸ್ ಬ್ಯಾಂಕ್ ಉದ್ಯೋಗಿಯೊಬ್ಬರನ್ನು ಬಂಧಿಸಿ, ಅವರ ವಿರುದ್ಧ ಸ್ವಿಟ್ಜರ್‌ಲೆಂಡ್ ಅಭಿಯೋಜಕರು ಹೊಸ ಅಪರಾಧ ತನಿಖೆ ಆರಂಭಿಸಿದ್ದಾರೆ.ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯಾನ್ ಅಸ್ಸಾಂಜ್‌ಗೆ  ಅಂಕಿ ಅಂಶಗಳ ಎರಡು ಸಿ.ಡಿ.ಗಳನ್ನು ಹಸ್ತಾಂತರಿಸಲು ಸೋಮವಾರ ಲಂಡನ್‌ಗೆ ತೆರಳಿದ್ದ ಸ್ವಿಸ್ ಬ್ಯಾಂಕ್ ಉದ್ಯೋಗಿ ರುಡಾಲ್ಫ್ ಎಲ್ಮರ್ ಅವರನ್ನು ಬುಧವಾರ ಸಂಜೆ ಬಂಧಿಸಿ, ತನಿಖೆ ಕೈಗೊಳ್ಳಲಾಗಿದೆ ಎಂದು ಇಲ್ಲಿನ ಮುಖ್ಯ ಅಭಿಯೋಜಕ ಪೀಟರ್ ಪೆಲ್ಲೆಗ್ರಿನಿ ಗುರುವಾರ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.