ಸ್ವೀಡನ್‌ಗೆ ಹಸ್ತಾಂತರಿಸಲು ಸಮ್ಮತಿ

7

ಸ್ವೀಡನ್‌ಗೆ ಹಸ್ತಾಂತರಿಸಲು ಸಮ್ಮತಿ

Published:
Updated:
ಸ್ವೀಡನ್‌ಗೆ ಹಸ್ತಾಂತರಿಸಲು ಸಮ್ಮತಿ

ಲಂಡನ್ (ಪಿಟಿಐ): ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳ ನೀಡಿರುವ ಆಪಾದನೆ ಎದುರಿಸುತ್ತಿರುವ ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸಾಂಜ್ ಅವರನ್ನು ಸ್ವೀಡನ್‌ಗೆ ಹಸ್ತಾಂತರಿಸಲು  ಬ್ರಿಟನ್ ಸುಪ್ರೀಂ ಕೋರ್ಟ್ ಬುಧವಾರ ಒಪ್ಪಿಗೆ ನೀಡಿದೆ.ಸ್ವೀಡನ್‌ಗೆ ಹಸ್ತಾಂತರಿಸುವುದಕ್ಕೆ ತಡೆ ನೀಡಬೇಕು ಎಂದು ಕೋರಿ ಅಸಾಂಜ್ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಕೋರ್ಟ್ ಅವರ ಅರ್ಜಿಯನ್ನು ವಜಾ ಮಾಡಿದೆ.`ಅಸಾಂಜ್ ಅವರನ್ನು ಸ್ವೀಡನ್‌ಗೆ ಹಸ್ತಾಂತರಿಸಬೇಕು ಎಂಬ ಮನವಿಯನ್ನು ಕಾನೂನು ಪ್ರಕಾರವಾಗಿ ಮಾಡಲಾಗಿದೆ. ಹಾಗಾಗಿ ಹಸ್ತಾಂತರ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಅದೇ ಪ್ರಕಾರ ವಜಾ ಮಾಡಲಾಗಿದೆ~ ಎಂದು ಸುಪ್ರೀಂ   ಕೋರ್ಟ್ ಅಧ್ಯಕ್ಷ ನಿಕೋಲಸ್ ಫಿಲಿಪ್ಸ್ ಹೇಳಿದ್ದಾರೆ.ಅರ್ಜಿ ವಿಚಾರಣೆ ನಡೆಸಿದ 7 ನ್ಯಾಯಮೂರ್ತಿಗಳನ್ನೊಳಗೊಂಡ ಪೀಠ ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿತು. ಐವರು ನ್ಯಾಯಮೂರ್ತಿಗಳು ಅರ್ಜಿ ವಜಾ ಮಾಡಿದರೆ ಉಳಿದಿಬ್ಬರು ಅಸಾಂಜ್ ವಾದವನ್ನು ಅನುಮೋದಿಸಿದರು.

ಅಸಾಂಜ್ ಅವರನ್ನು ವಿಚಾರಣೆ ನಡೆಸಲು ಸ್ವೀಡನ್ನಿನ ವಕೀಲರಿಗೆ ಕಾನೂನಾತ್ಮಕವಾದ ಅಧಿಕಾರ ಇದೆ ಎಂದು ಅಭಿಪ್ರಾಯಪಟ್ಟ ಅವರು ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಅಸಾಂಜ್ ವಿರುದ್ಧ ಬಂಧನ ವಾರಂಟ್ ಹೊರಡಿಸಲು ಸಮ್ಮತಿ ಸೂಚಿಸಿದರು.ಪ್ರಸ್ತುತ ಷರತ್ತುಬದ್ಧ ಜಾಮೀನಿನ ಮೇಲಿರುವ 40 ವರ್ಷದ ಅಸಾಂಜ್ ಅವರು ತಮ್ಮ ಮೇಲಿರುವ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.ಅಸಾಂಜ್ ವಿರುದ್ಧದ ಯುರೋಪಿನ ಬಂಧನ ವಾರೆಂಟ್ ಅನೂರ್ಜಿತವಾದದ್ದು~ ಎಂದು ಅವರ ಪರ ವಕೀಲರು ಸುಪ್ರೀಂಕೋರ್ಟ್‌ನಲ್ಲಿ ವಾದಿಸಿದ್ದರು.ತೀರ್ಪಿನ ಜಾರಿಯನ್ನು  ಸುಪ್ರೀಂ ಕೋರ್ಟ್ ಎರಡು ವಾರ ಮುಂದೂಡಿದೆ. ಈ ಅವಧಿಯಲ್ಲಿ ಅಸಾಂಜ್ ಮೇಲ್ಮನವಿ ಸಲ್ಲಿಸಬಹುದಾಗಿದೆ.

ಮಗನೆಡೆಗೆ ಬಂದೂಕು- ತಾಯಿಯ ಅಳಲು

ಸಿಡ್ನಿ (ಎಎಫ್‌ಪಿ):  `ವಿಶ್ವದ ಅತ್ಯಂತ ದೊಡ್ಡ ಸರ್ಕಾರಗಳು ನನ್ನ ಮಗನ ಸಾವಿಗಾಗಿ ಬಂದೂಕಿನ ಗುರಿ ಇಟ್ಟಿವೆ~

-ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸಾಂಜ್ ತಾಯಿ ಕ್ರಿಸ್ಟೀನ್ ಅಸಾಂಜ್ ಅವರ ಮಾತು ಇದು.

ಇಂಗ್ಲೆಂಡ್‌ನ ಸುಪ್ರೀಂಕೋರ್ಟ್ ನೀಡುವ ತೀರ್ಪನ್ನು ಆಲಿಸಲು ಲಂಡನ್‌ಗೆ ಆಗಮಮಿಸಿದ ಕ್ರಿಸ್ಟೀನ್, ತಮ್ಮ ಪುತ್ರನ ಭವಿಷ್ಯದ ಬಗ್ಗೆ ಆತಂಕಗೊಂಡಿದ್ದಾರೆ. `ಅವನು ಸುರಕ್ಷಿತನಾಗಿಲ್ಲ ಎಂಬುದು ನಮಗೆ ತಿಳಿದಿದೆ. ವಿಶ್ವದ ದೊಡ್ಡ ಸರ್ಕಾರಗಳು ಅವನನ್ನು ಬೇಟೆಯಾಡಲು ಬಂದೂಕುಗಳನ್ನು ಹಿಡಿದು ನಿಂತಿವೆ~ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡುವುದಕ್ಕೂ ಮುನ್ನ ಕ್ರಿಸ್ಟೀನ್ ಹೇಳಿದರು.ಸುಪ್ರೀಂಕೋರ್ಟ್‌ನ ತೀರ್ಪು ಅವನ ವಿರುದ್ಧವಾಗಿ ಬಂದರೆ, ಮುಂದಿನ 10 ದಿನಗಳ ಒಳಗಾಗಿ ಆತ ಸ್ವೀಡನ್ ಜೈಲಿನಲ್ಲಿ ಇರುತ್ತಾನೆ~ ಎಂದು ತೀರ್ಪು ಪ್ರಕಟಗೊಳ್ಳುವುದಕ್ಕೂ ಮೊದಲು ಅವರು ಹೇಳಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry