ಸ್ವೀಡನ್‌ಗೆ ಹಸ್ತಾಂತರ ಬೇಡ: ಅಸಾಂಜ್ ಅರ್ಜಿ ತಿರಸ್ಕೃತ

7

ಸ್ವೀಡನ್‌ಗೆ ಹಸ್ತಾಂತರ ಬೇಡ: ಅಸಾಂಜ್ ಅರ್ಜಿ ತಿರಸ್ಕೃತ

Published:
Updated:
ಸ್ವೀಡನ್‌ಗೆ ಹಸ್ತಾಂತರ ಬೇಡ: ಅಸಾಂಜ್ ಅರ್ಜಿ ತಿರಸ್ಕೃತ

ಲಂಡನ್ (ಪಿಟಿಐ): ಅತ್ಯಾಚಾರ ಆರೋಪ ಪ್ರಕರಣದಲ್ಲಿ ವಿಚಾರಣೆಗಾಗಿ ಸ್ವೀಡನ್‌ಗೆ ಹಸ್ತಾಂತರಿಸುವುದನ್ನು ವಿರೋಧಿಸಿ ವಿಕಿಲೀಕ್ಸ್ ಸಂಸ್ಥಾಪಕ ಜುಲಿಯನ್ ಅಸಾಂಜ್ ಸಲ್ಲಿಸಿದ್ದ ಅರ್ಜಿಯನ್ನು ಲಂಡನ್ ಹೈಕೋರ್ಟ್ ಬುಧವಾರ ತಿರಸ್ಕರಿಸಿದೆ.ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ಆರೋಪದ ವಿಚಾರಣೆಗಾಗಿ ಜುಲಿಯನ್ ಅಸಾಂಜ್ ಅವರನ್ನು ಹಸ್ತಾಂತರಿಸಬೇಕು ಎಂದು ಸ್ವೀಡನ್ ಸರ್ಕಾರ ಸಂಯುಕ್ತ ಸಂಸ್ಥಾನವನ್ನು (ಯುಕೆ) ಕೋರಿತ್ತು. ಇದನ್ನು  ಅಸಾಂಜ್ ವಿರೋಧಿಸಿದ್ದರು.ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳ ಪೀಠವು, ಸ್ವೀಡನ್ ಸರ್ಕಾರದ ಕೋರಿಕೆಯನ್ನು ಎತ್ತಿಹಿಡಿಯಿತು.ಅಸಾಂಜ್ ಸ್ಟಾಕ್‌ಹೋಂನಲ್ಲಿ ಕಳೆದ ವರ್ಷ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿ, ಮತ್ತೊಬ್ಬ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸ್ವೀಡನ್ ಸರ್ಕಾರ ಆರೋಪಿಸಿದೆ. ಆದರೆ ಇದನ್ನು ಅಸಾಂಜ್ ಅಲ್ಲಗಳೆದಿದ್ದಾರೆ. ಆಸ್ಟ್ರೇಲಿಯಾ ಸಂಜಾತ ಅಸಾಂಜ್ ಅವರನ್ನು ಕಳೆದ ಡಿಸೆಂಬರ್‌ನಲ್ಲಿ ಬ್ರಿಟನ್‌ನಲ್ಲಿ ಬಂಧಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry